ಚಿಕ್ಕೋಡಿ: ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಕೊಕಟನೂರಿನಲ್ಲಿ ಪಶು ವೈದ್ಯಕೀಯ ಮಹಾವಿದ್ಯಾಲಯ ಕಟ್ಟಡ ಲೋಕಾರ್ಪಣೆ ಮತ್ತು ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಅಯೋಜಿಸಿದ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಆದಿಯಾಗಿ ಭಾಷಣ ಮಾಡಿದ ಕಾಂಗ್ರೆಸ್ ನಾಯಕರೆಲ್ಲ ಅಥಣಿ ಶಾಸಕ ಲಕ್ಷ್ಮಣ ಸವದಿಯವರನ್ನು (Lakshman Savadi) ಮನಸಾರೆ ಹೊಗಳಿದರು, ಕೊಂಡಾಡಿದರು.
ಶಿವಕುಮಾರ್ ಮಾತಾಡಿ, ತನಗೆ ಹಲವಾರು ಕೆಲಸಗಳ ಒತ್ತಡವಿದ್ದರೂ ಸವದಿ ಬಹಳ ಅಭಿಮಾನದಿಂದ ಆಹ್ವಾನಿಸಿದ್ದರಿಂದ ಬಂದಿರುವುದಾಗಿ ಹೇಳಿದರು. ತಾವು ಸಾಮಾನ್ಯವಾಗಿ ಟೋಪಿ, ಪೇಟ ಹಾಕಿಸಿಕೊಳ್ಳುವುದಿಲ್ಲ ಆದರೆ, ಸವದಿಯವರು ಪ್ರೀತಿಯಿಂದ ತೊಡಿಸಲು ಬಂದಾಗ ನಿರಾಕರಿಸಲಾಗಲಿಲ್ಲ ಎಂಡು ಅವರು ಹೇಳಿದರು.
ಮುಂದುವರಿದು ಮಾತಾಡಿದ ಅವರು, ಸವದಿ ಅಥಣಿ ಭಾಗದ ಜನರ ಬಾಳು ಹಸನು ಮಾಡಲು ಪಣತೊಟ್ಟಿದ್ದಾರೆ, ಇಲ್ಲಿಯ ಜನ ಬಂಗಾರದ ತಟ್ಟೆಯಲ್ಲಿ ಊಟ ಮಾಡುವಂಥ ಸ್ಥಿತಿ ನಿರ್ಮಾಣವಾಗಬೇಕು ಅಂತ ಅವರು ಕನಸು ಕಂಡಿದ್ದಾರೆ
ಎಂದು ಹೇಳಿ ವಿಧಾನಸಭಾ ಚುನಾವಣೆಯಲ್ಲಿ ಅವರನ್ನು 70,000 ವೋಟುಗಳ ಭಾರಿ ಬಹುಮತದಿಂದ ಗೆಲ್ಲಿಸಿದ್ದಕ್ಕೆ ಅಥಣಿ ಮತದಾರರಿಗೆ ಧನ್ಯವಾದ ಸಲ್ಲಿಸಿದರು. ಸಮಾರಂಭದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಬೋಸರಾಜು, ಕೆ.ವೆಂಕಟೇಶ್, ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕರಾದ ಸವದಿ, ರಾಜುಕಾಗೆ, ಅಶೋಕ್ ಪಟ್ಟಣ್, ಮಹೇಂದ್ರ ತಮ್ಮಣ್ಣವರ್ ಸೇರಿ ಹಲವಾರು ನಾಯಕರು ಪಾಲ್ಗೊಂಡಿದ್ದರು