ಚಿಕ್ಕಮಗಳೂರು, ನ.1- ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ 2017, 2018 ಹಾಗೂ 2019ನೆ ಸಾಲಿನ ಏಕಲವ್ಯ, ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾ ರತ್ನ, ಕ್ರೀಡಾ ಪೋಷಕ ಮತ್ತು ಎನ್‍ಎಸ್‍ಎಸ್ ಪ್ರಶಸ್ತಿಯನ್ನು ಪ್ರಕಟಿಸಿದೆ. ರಾಜ್ಯ ಸರ್ಕಾರದ ಪ್ರತಿಷ್ಠಿತ ಈ ಪ್ರಶಸ್ತಿ ಪುರಸ್ಕøತರ ಪಟ್ಟಿಯನ್ನು ಕನ್ನಡ ಮತ್ತು ಸಂಸ್ಕøತಿ ಹಾಗೂ ಕ್ರೀಡಾ ಸಚಿವರಾದ ಸಿ.ಟಿ.ರವಿ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
2018-19ನೆ ಸಾಲಿನ ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಯನ್ನು ಮಂಡ್ಯದ ಸ್ವರ್ಣ ಫುಟ್‍ಬಾಲ್ ಡೆವಲಪ್‍ಮೆಂಟ್ ಅಸೋಸಿಯೇಷನ್ ಹಾಗೂ ಬೆಂಗಳೂರಿನ ವಿಆರ್ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್‍ಗೆ ನೀಡಲಾಗುತ್ತದೆ ಎಂದು ಹೇಳಿದರು. 2019-20ನೆ ಸಾಲಿನ ಕ್ರೀಡಾ ಪೊಷಕ ಪ್ರಶಸ್ತಿಯನ್ನು ಮಂಗಳೂರು ವಿಶ್ವವಿದ್ಯಾಲಯಕ್ಕೆ, ತುಮಕೂರಿನ ಸಿದ್ಧಗಂಗಾ ಎಜುಕೇಷನ್ ಟ್ರಸ್ಟ್‍ಗೆ, ಬೀದರ್‍ನ ಮಾಣಿಕ್ ಸ್ಪೋಟ್ರ್ಸ್ ಅಕಾಡೆಮಿಗೆ ನೀಡಲಾಗುತ್ತದೆ ಎಂದರು.
2017ನೆ ಸಾಲಿನ ಏಕಲವ್ಯ ಪ್ರಶಸ್ತಿಗೆ ರೀನಾ ಜಾರ್ಜ್ ಎಸ್., ಮಿಥುಲಾ, ಅವಿನಾಶ್ ಮಣಿ, ಅರ್ಜುನ್ ಹಲ್ಕುರ್ಕಿ, ಅನಿಲ್‍ಕುಮಾರ್ ಬಿ.ಕೆ., ಉಷಾರಾಣಿ, ಖುಷಿ ವಿ., .ಎನ್.ಪೊನ್ನಮ್ಮ, ವಿನಾಯಕ್ ರೋಖಡೆ, ಎಂ.ದೀಪಾ, ರಾಜು, ಅಡಿವೆಪ್ಪ ಭಾಟಿ, ವರ್ಷ ಎಸ್., ತೇಜಸ್ ಕೆ., ಶೇಖರ್ ವೀರಸ್ವಾಮಿ ಅವರಿಗೆ ನೀಡಲಾಗುತ್ತದೆ. 2018ನೆ ಸಾಲಿನ ಏಕಲವ್ಯ ಪ್ರಶಸ್ತಿಯನ್ನು ವಿಜಯಕುಮಾರಿ ಜಿ.ಕೆ., ಬಾಂಧವ್ಯ ಎಚ್.ಎಂ., ಕೆ.ಎಲ್.ರಾಹುಲ್, ಮೇಘಾ ಗೂಗಾಡ್, ಫೌವಾದ್ ಮಿರ್ಜಾ, ನಿಕ್ಕಿನ್ ತಿಮ್ಮಯ್ಯ, ಗೀತಾ ದಾನಪ್ಪಗೋಳ್, ಶ್ರೀಹರಿ ನಟರಾಜ್, ಶಕೀನಾ ಖಾತುನ್ ಅವರಿಗೆ ನೀಡಲಾಗುವುದು ಎಂದು ಹೇಳಿದರು.
2019ನೆ ಸಾಲಿನ ಪ್ರಶಸ್ತಿಯನ್ನು ಅಭಿನಯ ಶೆಟ್ಟಿ, ವೇದಾ ಕೃಷ್ಣಮೂರ್ತಿ, ವೆಂಕಪ್ಪ ಕೆಂಗಲಗುತ್ತಿ, ಪುಲಿಂದ ಲೋಕೇಶ್ ತಿಮ್ಮಣ್ಣ, ಖುಷಿ ದಿನೇಶ್, ಮಾಯಂಗ್ ಅಗರ್ವಾಲ್, ಪುನಿತ್ ನಂದಕುಮಾರ್, ಅಭಿಷೇಕ್ ಎನ್.ಶೆಟ್ಟಿ ಅವರಿಗೆ ನೀಡಲಾಗುತ್ತದೆ. 2017ನೆ ಸಾಲಿನ ಜೀವಮಾನ ಸಾಧನೆ ಪ್ರಶಸ್ತಿಯನ್ನು ಎಂ.ಫೆಡ್ರಿಕ್ಸ್ (ಹಾಕಿ), ಡಾ.ಪಟೇಲ್ ಮಹಮ್ಮದ್ ಇಲಿಯಾಜ್ (ವಾಲಿಬಾಲ್) ಅವರಿಗೆ ನೀಡಲಾಗುತ್ತದೆ.
2018ನೆ ಸಾಲಿಗೆ ಸಿ.ಎ.ಕರುಂಬಯ್ಯ (ಹಾಕಿ), ಮಂಜುನಾಥ್ ಆರ್. (ಕಬಡ್ಡಿ) ಅವರಿಗೆ ನೀಡಲಾಗುವುದು. 2019ನೆ ಸಾಲಿನ ಪ್ರಶಸ್ತಿಯನ್ನು ಶಾಂತಾ ರಂಗಸ್ವಾಮಿ (ಕ್ರಿಕೆಟ್), ಸಂಜೀವ್ ಆರ್. ಕನಕ (ಖೋ ಖೋ) ಅವರಿಗೆ ನೀಡಲಾಗುವುದು ಎಂದು ಹೇಳಿದರು. 2017ನೆ ಸಾಲಿನ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಯನ್ನು ವೀಣಾ ಎಂ., ಕೌಶಲ್ಯ ಕೆ.ಎಸ್., ಜಯಲಕ್ಷ್ಮಿ ಜಿ., ಅನುಶ್ರೀ ಎಚ್.ಎಸ್., ರಂಜಿತಾ ಎಂ., ಭೀಮಪ್ಪ ಹಡಪದ, ಮಹೇಶ್ ಆರ್. ಎರೆಮನಿ, ಚಂದ್ರಶೇಖರ್ ಎಚ್.ಕಲ್ಲಹೊಲದ, ಗೋಪಾಲಕೃಷ್ಣ ಪ್ರಭು, ಶ್ರೀನಿವಾಸ್‍ಗೌಡ, ಮಣಿಕಂದನ್ ಅವರಿಗೆ ನೀಡಲಾಗುವುದು.
2018ನೆ ಸಾಲಿನ ಈ ಪ್ರಶಸ್ತಿಯನ್ನು ಸಂಪತ್ ನಾಗಪ್ಪ ಎರಗಟ್ಟಿ, ಸುರೇಶ್ ಶೆಟ್ಟಿ, ಶಿವಕುಮಾರ್ ಎಚ್.ಎನ್., ಕಿರಣ್‍ಕುಮಾರ್ ಐ., ಮಲ್ಲಪ್ಪಗೌಡ ಪಾಟೀಲ್, ಯಮನಪ್ಪ ಮಾಯಪ್ಪ ಕಲ್ಲೋಳಿ, ಲಾವಣ್ಯ ಬಿ.ಡಿ. ಅವರಿಗೆ ನೀಡಲಾಗುವುದು. 2019ನೆ ಸಾಲಿನ ಪ್ರಶಸ್ತಿಯನ್ನು ಅನಿತಾ ಬಿಚಗಟ್ಟಿ, ಪಲ್ಲವಿ ಎಸ್.ಕೆ., ರಕ್ಷಿತಾ ಎಸ್., ಸುದರ್ಶನ್, ಅನುಪಮಾ ಎಚ್. ಕೆರಕಲಮಟ್ಟಿ, ಪ್ರವೀಣ್ ಕೆ., ಮಂಜುನಾಥ್ ಎಚ್., ಸತೀಶ್ ಪಡತಾರೆ, ಅನಿಶಾ ಮಣಿಗಾರ್ ಅವರಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.
ಈ ಪ್ರಶಸ್ತಿಗಳನ್ನು ನಾಳೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.