Breaking News

ಹಾಸ್ಟೆಲ್ ಹುಡುಗರಿಂದ ಪ್ರೇಕ್ಷಕರಿಗೆ ಬಿಗ್​ ಆಫರ್ 2 ಟಿಕೆಟ್​ ತಗೊಂಡ್ರೆ 1 ಫ್ರೀ

Spread the love

ಬುಕ್​ ಮೈ ಶೋನಲ್ಲಿ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ 2 ಟಿಕೆಟ್ ತೆಗೆದುಕೊಂಡರೆ 1 ಉಚಿತವಾಗಿ ಕೊಡುತ್ತಿದ್ದೇವೆ ಎಂದು ಚಿತ್ರತಂಡ ಹೇಳಿದೆ.

ಯುವ ಪ್ರತಿಭೆಗಳ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಿನಿಮಾಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಥಿಯೇಟರ್ ಅಂಗಳದಲ್ಲಿ ತುಂಗಾ ಹಾಸ್ಟೆಲ್ ಬಾಯ್ಸ್ ಓಟ ಮುಂದುವರೆದಿದೆ. ಮೂರನೇ ವಾರವೂ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಆರಂಭದಿಂದಲೂ ವಿಭಿನ್ನ ಬಗೆಯಲ್ಲಿ ಸಿನಿಮಾ ಪ್ರಮೋಷನ್ ಮಾಡಿ ಗೆದ್ದಿರುವ ಚಿತ್ರತಂಡಕ್ಕೆ ನಟಿ ಹಾಗೂ ಖ್ಯಾತ ನಿರೂಪಕಿ ಅನುಶ್ರೀ ಸಾಥ್ ಕೊಟ್ಟಿದ್ದಾರೆ. ಇತ್ತೀಚೆಗೆ ವೀರೇಶ್ ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ ಅನುಶ್ರೀ ಟಿಕೆಟ್ ವಿತರಿಸಿದರು. ಬಳಿಕ ಅಭಿಮಾನಿಯಾಗಿ ಈ ಸಿನಿಮಾದ ಸಕ್ಸಸ್ ಸೆಲೆಬ್ರೇಟ್ ಮಾಡುವುದಾಗಿ ಹೇಳಿದರು.

 ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರತಂಡ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಕ್ಸಸ್ ಬಗ್ಗೆ ಮಾತನಾಡಿದ ನಿರ್ದೇಶಕ ನಿತಿನ್ ಕೃಷ್ಣಮೂರ್ತಿ “ನಮ್ಮ ಸಿನಿಮಾ ಗೆಲ್ಲೋದಿಕ್ಕೆ ಕಾರಣ ರಿಪೀಟ್ ಆಡಿಯನ್ಸ್. ಡೈಲಾಗ್ ಮಿಸ್ ಆಗಿದ್ದಕ್ಕೆ ಸುಮಾರು ಜನ 2 ರಿಂದ 3 ಬಾರಿ ಚಿತ್ರವನ್ನು ನೋಡಿದ್ದಾರೆ. ಮೊದಲ 2 ವಾರದಲ್ಲಿ 12 ಲಕ್ಷ ಜನ ಸಿನಿಮಾ ವೀಕ್ಷಿಸಿದ್ದಾರೆ. ಇನ್ನೂ 20 ಲಕ್ಷ ಜನ ನೋಡ್ತಾರೆ ಎಂಬ ಭರವಸೆ ಇದೆ. ಹೊಸ ಸಿನಿಮಾಗೆ ಅದ್ಭುತ ರೆಸ್ಪಾನ್ಸ್. ಅಪ್ಪು ಸರ್ ಆಶೀರ್ವಾದ, ಇಡೀ ತಂಡದ ಎಫರ್ಟ್​ಗೆ ಸಿನಿಮಾ ಹೌಸ್ ಫುಲ್ ಆಗಿ ಓಡುತ್ತಿದೆ. ಬುಕ್ ಮೈ ಶೋನಲ್ಲಿ 2 ಟಿಕೆಟ್ ತೆಗೆದುಕೊಂಡರೆ 1 ಉಚಿತವಾಗಿ ಕೊಡುತ್ತಿದ್ದೇವೆ” ಎಂದು ತಿಳಿಸಿದರು.


Spread the love

About Laxminews 24x7

Check Also

2028ಕ್ಕೆ ಕಾಂಗ್ರೆಸ್​ ಕ್ರಾಂತಿ ಎಬ್ಬಿಸುತ್ತೆ: ಸಚಿವ ಚಲುವರಾಯಸ್ವಾಮಿ

Spread the loveಮಂಡ್ಯ : ನವೆಂಬರ್ ಕ್ರಾಂತಿನೂ ಇಲ್ಲ, ಸಂಕ್ರಾಂತಿ ಕ್ರಾಂತಿನೂ ಇಲ್ಲ, ಯುಗಾದಿಗೂ ಇಲ್ಲ. 2028ಕ್ಕೆ ಮತ್ತೆ ನಾವೇ, ಕಾಂಗ್ರೆಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ