ಬೆಂಗಳೂರು, : ಕಾಂಗ್ರೆಸ್ನಲ್ಲಿ (Congress) ಸದ್ಯ ಶಾಸಕ-ಸಚಿವ ನಡುವೆ ಅಸಮಾಧಾನ ಸ್ಫೋಟಗೊಂಡಿದೆ. ಇದರ ಮಧ್ಯೆ ಹೈಕಮಾಂಡ್ ಲೋಕಸಭಾ ಚುನಾವಣೆಗೆ ತಯಾರುವಂತೆ ಕರೆ ನೀಡಿದೆ.
ಇದೆಲ್ಲರ ಮಧ್ಯೆ ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಸಚಿವ ಸ್ಥಾನಕ್ಕೆ ಕೈತಪ್ಪಿದ್ದಕ್ಕೆ ಸಿಎಂ ಸಿದ್ದರಾಮಯ್ಯ ವಿರುದ್ಧ ಬಹಿರಂಗ ಅಸಮಾಧನ ಹೊರಹಾಕಿದ್ದಾರೆ. ಇದರ ನಡುವೆ ಇದೀಗ ಕಾಂಗ್ರೆಸ್ನಲ್ಲಿ ವಿಧಾನಪರಿಷತ್ ನಾಮನಿರ್ದೇಶನ (MLC nomination )ಫೈಟ್ ಜೋರಾಗಿದೆ. ಹೌದು.. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಪರಿಷತ್ ನಾಮ ನಿರ್ದೇಶನಕ್ಕೆ ಮೂವರ ಹೆಸರು ಅಂತಿಮಗೊಳಿಸಿದ್ದಾರೆ. ಆದ್ರೆ, ಇದಕ್ಕೆ ಕಾಂಗ್ರೆಸ್ ನಾಯಕರಲ್ಲೇ ಆಕ್ಷೇಪಗಳು ವ್ಯಕ್ತವಾಗಿವೆ.
ಒಕ್ಕಲಿಗರು ಸೇರಿದಂತೆ ಇತರರಿಗೆ ಪರಿಷತ್ ಸ್ಥಾನ ನೀಡಲು ಲಾಬಿ ಶುರುವಾಗಿದೆ. ಸಾಮಾಜಿಕ ನ್ಯಾಯ ಮತ್ತು ಜಾತಿ ಸಮೀಕರಣಕ್ಕೆ ಮುಖ್ಯಂತ್ರಿ ಸಿದ್ದರಾಮಯ್ಯ ಮೇಲೆ ಒತ್ತಡ ಹೇರಲಾಗುತ್ತಿದೆ. ಆದ್ರೆ, ವಿಧಾನ ಪರಿಷತ್ ನಾಮ ನಿರ್ದೇಶನಕ್ಕೆ ಉಮಾಶ್ರೀ, ಎಂ ಆರ್ ಸೀತಾರಾಂ ಹಾಗೂ ಮಾಜಿ ಇಡಿ ಅಧಿಕಾರಿ ಸುಧಾಮ್ ದಾಸ್ ಹೆಸರುಗಳನ್ನು ಸಿದ್ದರಾಮಯ್ಯ ಅವರು ಅಂತಿಮಗೊಳಿಸಿದ್ದಾರೆ. ಸುಧಾಮ್ ದಾಸ ಪರ ಡಿಕೆ ಬ್ರದರ್ಸ್ ಬ್ಯಾಟಿಂಗ್ ಮಾಡುತ್ತಿದ್ದರೆ, ಇತ್ತ ಸೀತಾರಾಂ ಪರ ಸಿದ್ದರಾಮಯ್ಯ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಬಹುತೇಕ ಈ ಮೂರು ಹೆಸರುಗಳೇ ಫೈನಲ್ ಎನ್ನಲಾಗಿದ್ದು. ಸೋಮವಾರ (ಆಗಸ್ಟ್ 07) ಸಿಎಂ ಸಿದ್ದರಾಮಯ್ಯ ಅವರು, ರಾಜ್ಯಪಾಲರ ಭೇಟಿಯಾಗಿ ಪತ್ರ ನೀಡುವ ನಿರೀಕ್ಷೆ ಇದೆ. ಆದ್ರೆ, ಸುಧಾಮ್ ದಾಸ್ ಹೆಸರಿಗೆ ಕಾಂಗ್ರೆಸ್ ನಾಯಕರಲ್ಲೇ ವಿರೋಧ ವ್ಯಕ್ತವಾಗಿದೆ. ಇನ್ನು ಉಮಾಶ್ರೀಗೂ ಸ್ಥಾನ ನೀಡುತ್ತಿರುವುದಕ್ಕೆ ಹಿರಿಯರ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೂ ಸಿದ್ದರಾಮಯ್ಯ ಅವರು ಪಟ್ಟ ಹಿಡಿದು ಉಮಾಶ್ರೀ ಹಾಗೂ ಸೀತಾರಾಂ ಹೆಸರು ಫೈನಲ್ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ನಾಮನಿರ್ದೇಶಿತ ಪರಿಷತ್ ಸದಸ್ಯರ ನೇಮಕ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹಮದ್, ರಾಜ್ಯಪಾಲರಿಗೆ ಹೆಸರೇ ಕಳುಹಿಸಿಲ್ಲ. ಇದೆಲ್ಲ ಕೇವಲ ಪತ್ರಿಕೆಗಳಲ್ಲಿ ಬಂದಿದ್ದನ್ನು ನೋಡಿದ್ದೇನೆ. ಮನ್ಸೂರ್ ಅಲಿ ಖಾನ್ ಆಗಲಿ ಬೇರೆಯವರ ಹೆಸರಾಗಲಿ ಇನ್ನೂ ಶಿಫಾರಸೇ ಆಗಿಲ್ಲ. ಅಲ್ಪ ಸಂಖ್ಯಾತ ಸಮುದಾಯಕ್ಕೆ ಅನ್ಯಾಯ ಆಗುವುದಿಲ್ಲ. ಇವರಿಗೆ ಎಂಎಲ್ಸಿ ಸ್ಥಾನ ಕೊಡಿ ಅಂತ ನಾವು ಯಾರ ಹೆಸರನ್ನೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.
Laxmi News 24×7