ಪ್ರತಿಯೊಬ್ಬರೂ ಜೀವನದ ಲೈಫ್ ಸ್ಟೈಲ್ ತಕ್ಕನಾಗಿ ಬ್ರ್ಯಾಂಡೆಡ್ ಬಟ್ಟೆಗಳನ್ನು ಧರಿಸುವುದು ಸರ್ವೇ ಸಾಮಾನ್ಯವಾಗಿರುತ್ತದೆ
ಆದರೆ ಬ್ರ್ಯಾಂಡೆಡ್ ಬಟ್ಟೆಗಳು ಕಡಿಮೆ ದರದಲ್ಲಿ ಸಿಗುತ್ತೆ ಅಂದರೆ ಸಕ್ಕರೆಗೆ ಇರುವೆ ಮುತ್ತಿದಂತೆ ಮುತ್ತಿಕೊಳ್ಳುತ್ತೇವೆ ಅಲ್ಲೇ ನೋಡಿ ಮೋಸ ಹೋಗುವುದು ಮೋಸ ಮಾಡಿಸಿಕೊಳ್ಳುವವವರು ಇದ್ದಾಗ ಮೋಸ ಮಾಡುವವರು ಇರುತ್ತಾರೆ, ಅನ್ನುವುದಕ್ಕೆ ಈ ಘಟನೆ ನಿದರ್ಶನ ನಗರದ ಖಡೆ ಬಜಾರನಲ್ಲಿ ಮೂರೂ ಅಂಗಡಿಯವರು ರೇಮೆಂಡ ಕಂಪನಿ ಬಟ್ಟೆ ಎಂದು ಲೋಕಲ್ ಬಟ್ಟೆಯನ್ನು ಮಾರಾಟ ಮಾಡಿ ಜನರನ್ನು ಮರಳು ಮಾಡುತ್ತಿದ್ದರು
ವಿಷಯ ರೇಮೆಂಡ್ ಕಂಪನಿಯಗೆ ಗೊತ್ತಾದಾಗ ರೇಮಂಡ್ ಕಂಪನಿಯ ಅಧಿಕಾರಿಯು ಸಾಮಾನ್ಯ ವ್ಯಕ್ತಿಯಂತೆ ತೆರಳಿ ಖರೀದಿ ಮಾಡಿದಾಗ ಸಿಕ್ಕಾಕಿಕೊಂಡ ಅಂಗಡಿ ಮಾಲೀಕರ ವಿರುದ್ಧ ಮಾರ್ಕೆಟ್ ಪೊಲೀಸ ಠಾಣೆಯಲ್ಲಿ ದೂರನ್ನು ನೀಡುತ್ತಾರೆ , ಮಾರ್ಕೆಟ್ ಪೊಲೀಸರು ಕೂಡಲೇ ಅಂಗಡಿ ಮಾಲೀಕರನ್ನು ವಿಚಾರಣೆ ಮಾಡಿ ನಕಲಿ ಬಟ್ಟೆಗಳನ್ನು ವಶಕ್ಕೆ ಪಡೆದ
ಸದ್ಯ ವಿಷಯ ತಿಳಿದ ಗ್ರಾಹಕರು ರೇಮೆಂಡ ಕಂಪನಿಯ ಅಧಿಕಾರಿಗೆ ಶಬ್ಬಾಷ್ ಅಂದಿದ್ದಾರೆ .
ಒಟ್ಟಿನಲ್ಲಿ ಮೋಸ ಮಾಡುವರ ಬಲೆಗೆ ಸಿಲುಕದೆ ಯಾವ ವಸ್ತುವನ್ನಾಗಲಿ ಪರಿಶೀಲಿಸಿ ಕೊಂಡುಕೊಳ್ಳಿ ಎನ್ನುವುದು ಇನ್ ನ್ಯೂಸನ್ ಆಶಯವಾಗಿದೆ