Breaking News

ಟೊಮೆಟೊ ಮಾರಾಟ ಮಾಡಿ ಒಂದೇ ದಿನದಲ್ಲಿ 4 ಲಕ್ಷ ರೂ. ಗಳಿಸಿದ ರೈತ

Spread the love

ತಿರುಪುರ್ (ತಮಿಳುನಾಡು) : ದೇಶಾದ್ಯಂತ ಟೊಮೆಟೊ ಬೆಲೆ ಗಗನಕ್ಕೇರಿದೆ. ಬೆಲೆ ಏರಿಕೆಯು ಗ್ರಾಹಕರ ಜೇಬಿಗೆ ಹೊರೆಯಾಗಿ ಪರಿಣಮಿಸಿದ್ದು, ತರಕಾರಿ ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ಆದರೆ, ಈ ಮಧ್ಯೆಯೇ ರೈತರು ಉತ್ತಮ ಆದಾಯ ಗಳಿಸುತ್ತಿದ್ದಾರೆ. ಇದೀಗ ತಮಿಳುನಾಡಿನ ರೈತರೊಬ್ಬರು ಒಂದೇ ದಿನದಲ್ಲಿ 4 ಲಕ್ಷ ರೂ. ಟೊಮೆಟೊ ಮಾರಾಟ ಮಾಡಿ ಅಧಿಕ ಲಾಭ ಗಳಿಸಿದ್ದಾರೆ.

ಇಲ್ಲಿನ ಗುಂಡಂ ಸಮೀಪದ ಜ್ಯೋತಿಯಂಪಟ್ಟಿಯ 27 ವರ್ಷದ ರೈತ ವೆಂಕಟೇಶ್ ಅವರು ಕೃಷಿಯಲ್ಲಿ ಗಮನಾರ್ಹ ಸಾಧನೆ ಮಾಡುವ ಮೂಲಕ ಯುವಕರಿಗೆ ಮಾದರಿಯಾಗಿದ್ದಾರೆ. ಕಳೆದ ಐದು ವರ್ಷಗಳಿಂದ ತಮ್ಮ ಹತ್ತು ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆಯುತ್ತಿದ್ದು, ಈ ವರ್ಷ ದರ ಏರಿಕೆಯಿಂದ ಭರ್ಜರಿ ಲಾಭ ಗಳಿಸಿದ್ದಾರೆ. ಕೇವಲ ಒಂದೇ ದಿನದಲ್ಲಿ 4 ಲಕ್ಷ ರೂ. ಸಂಪಾದಿಸಿದ್ದಾರೆ.

ತಿರುಪುರ್ ಜಿಲ್ಲೆಯ ತಾರಾಪುರಂ, ಕುಂಡಡಂ, ಪೊಂಗಲೂರ್, ಪಲ್ಲಡಂ, ಮಂಗಳಂ, ಉಡುಮಲೈ, ಮದತಿಕುಲಂ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಪ್ರಮುಖ ಉದ್ಯಮ ಎಂದರೆ ಅದು ಕೃಷಿ. ಈ ಪ್ರದೇಶಗಳಲ್ಲಿ ವಿವಿಧ ರೀತಿಯ ಬೆಳೆಗಳನ್ನು ಬೆಳೆಯಲಾಗುತ್ತದೆ. ಆದರೆ, ವರ್ಷದ ಬಹುಪಾಲು ಟೊಮೆಟೊ ಮತ್ತು ಈರುಳ್ಳಿಯನ್ನು ಅಧಿಕ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಇಲ್ಲಿ ಬೆಳೆಯುವ ಟೊಮೆಟೊವನ್ನು ತಿರುಪುರ್ ಜಿಲ್ಲೆಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಜೊತೆಗೆ ಇತರೆ ಜಿಲ್ಲೆಗಳಿಗೂ ಸಹ ಕಳುಹಿಸಲಾಗುತ್ತದೆ.


Spread the love

About Laxminews 24x7

Check Also

ವಿಜಯಪುರ…:ಪಿಪಿಪಿ ವಿರುದ್ಧ ಭುಗಿಲೆದ್ದ ಆಕ್ರೋಶ: ಸಂಪೂರ್ಣ ಸರಕಾರಿ ವೈದ್ಯಕೀಯ ಕಾಲೇಜಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

Spread the love ವಿಜಯಪುರ…:ಪಿಪಿಪಿ ವಿರುದ್ಧ ಭುಗಿಲೆದ್ದ ಆಕ್ರೋಶ: ಸಂಪೂರ್ಣ ಸರಕಾರಿ ವೈದ್ಯಕೀಯ ಕಾಲೇಜಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ವಿಜಯಪುರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ