Breaking News

ಶಾಸಕ ಹೆಚ್​ ಡಿ ರೇವಣ್ಣ ಮತ್ತು ಕಾಂಗ್ರೆಸ್​​ ಅಭ್ಯರ್ಥಿ ಶ್ರೇಯಸ್​ ಪಾಟೀಲ್​ಗೆ ಹೈಕೋರ್ಟ್​ ಸಮನ್ಸ್​ ಜಾರಿ ಮಾಡಿದೆ.

Spread the love

ಬೆಂಗಳೂರು: ಹಣ ಮತ್ತು ಕೊಳಿ ಮಾಂಸ ಹಂಚಿ ಚುನಾವಣೆ ಗೆದ್ದರುವುದಾಗಿ ಆರೋಪಿಸಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಶಾಸಕ ಹೆಚ್.ಡಿ.ರೇವಣ್ಣಗೆ ಹೈಕೋರ್ಟ್ ಸಮನ್ಸ್ ಜಾರಿ ಮಾಡಿದೆ.

ಇದೇ ವೇಳೆ, ಕಾಂಗ್ರೆಸ್​ ಅಭ್ಯರ್ಥಿ ಶ್ರೇಯಸ್ ಪಾಟೀಲ್​​ಗೂ ಸಮನ್ಸ್ ಜಾರಿ ಮಾಡಲಾಗಿದೆ.

ಹೊಳೆನರಸೀಪುರ ಪರಾಜಿತ ಅಭ್ಯರ್ಥಿ ದೇವರಾಜೇಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ನ್ಯಾಯಪೀಠ ಸಮನ್ಸ್ ಜಾರಿ ಮಾಡಿ ವಿಚಾರಣೆಯನ್ನು ಸೆಪ್ಟಂಬರ್ 4 ಕ್ಕೆ ಮುಂದೂಡಿದೆ. ರೇವಣ್ಣ ಅವರು ಚುನಾವಣೆ ಅಕ್ರಮದಿಂದ ಶಾಸಕರಾಗಿದ್ದು, ಅವರನ್ನು ಅನರ್ಹಗೊಳಿಸಿ ಮೂರನೇ ಸ್ಥಾನದಲ್ಲಿರುವ ತನ್ನನ್ನು ಶಾಸಕ ಎಂದು ಘೋಷಿಸುವಂತೆ ದೇವರಾಜೇಗೌಡ ಸಲ್ಲಿಸಿರುವ ಅರ್ಜಿಯಲ್ಲಿ ಕೋರಿದ್ದಾರೆ.

ಇದೇ ಕ್ಷೇತ್ರದಲ್ಲಿ ಎರಡನೇ ಸ್ಥಾನದಲ್ಲಿ ಇರುವ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧವೂ ಆರೋಪಿಸಲಾಗಿದೆ. ಅಲ್ಲದೇ, ಮತದಾನಕ್ಕೂ ಒಂದು ದಿನ ಮುಂಚೆ ಪ್ರತಿವಾದಿ ಎಚ್.ಡಿ.ರೇವಣ್ಣ ಅವರ ಸಹಚರರಿಂದ ಕ್ಷೇತ್ರದ ಅಣ್ಣೇನಹಳ್ಳಿ, ದಂಡಿಗನಹಳ್ಳಿ ಪ್ರತಿ ಮನೆಗೆ 2 ಜೀವಂತ ಕೋಳಿಗಳು ಮತ್ತು 3 ಸಾವಿರ ರು.ಗಳನ್ನ ಹಂಚಿಕೆ ಮಾಡಿದ್ದಾರೆ. ಮತದಾರರು ಸ್ವೀಕರಿಸಿದ ಬಳಿಕ ಮತಹಾಕುವುದಾಗಿ ಭರವಸೆ ನಿಡಿದ್ದರು. ಈ ಬೆಳವಣಿಗೆ ಪ್ರಜಾಪ್ರತಿನಿಧಿ ಕಾಯಿದೆ 1951ರ ಸೆಕ್ಷನ್ 123ಕ್ಕೆ ವಿರುದ್ಧವಾಗಿದ್ದು, ಭ್ರಷ್ಟಾಚಾರ ನಡೆಸಿರುವುದು ತಿಳಿದು ಬರಲಿದೆ.


Spread the love

About Laxminews 24x7

Check Also

ಮಗು ಹೊಟ್ಟೆಯಲ್ಲಿರುವಾಗಲೇ ಮಗುವಿನ ವಾಕ್ ಮತ್ತು ಶ್ರವಣ ಸಮಸ್ಯೆ ಪತ್ತೆ ಹಚ್ಚಲು ಸಾಧ್ಯವಾಗಿರುವುದು ನಿಜಕ್ಕೂ ದೊಡ್ಡ ಸಾಧನೆ: ಸಿ.ಎಂ.ಸಿದ್ದರಾಮಯ್ಯ

Spread the love ಮೈಸೂರು ಸೆ 1:ಮಗು ಹೊಟ್ಟೆಯಲ್ಲಿರುವಾಗಲೇ ಮಗುವಿನ ವಾಕ್ ಮತ್ತು ಶ್ರವಣ ಸಮಸ್ಯೆ ಪತ್ತೆ ಹಚ್ಚಲು ಸಾಧ್ಯವಾಗಿರುವುದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ