Breaking News

ಟೋಬಿ’ ಸಿನಿಮಾದ ಟ್ರೇಲರ್​ ಆಗಸ್ಟ್​ 4 ರಂದು ಸಂಜೆ 4 ಗಂಟೆ 5 ನಿಮಿಷಕ್ಕೆ ಬಿಡುಗಡೆ

Spread the love

ಟೋಬಿ’ ಸಿನಿಮಾದ ಟ್ರೇಲರ್​ ಆಗಸ್ಟ್​ 4 ರಂದು ಸಂಜೆ 4 ಗಂಟೆ 5 ನಿಮಿಷಕ್ಕೆ ಬಿಡುಗಡೆಯಾಗಲಿದೆ.

ಸ್ಯಾಂಡಲ್​ವುಡ್​ನಲ್ಲಿ ನಟ ಮತ್ತು ನಿರ್ದೇಶಕನಾಗಿ ವಿಶೇಷ ರೀತಿಯಲ್ಲಿ ಗುರುತಿಸಿಕೊಂಡವರು ರಾಜ್​ ಬಿ ಶೆಟ್ಟಿ. ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ ‘ಟೋಬಿ’.

ಕುರುಚಲು ಗಡ್ಡ, ಮೂಗಿಗೆ ದೊಡ್ಡ ಮೂಗುತಿ, ತಲೆ ಹಾಗೂ ಮೂಗಿನಲ್ಲಿ ರಕ್ತದ ಕಲೆಯಿಂದ ಕೂಡಿರುವ ಗಾಯ.. ಇದುವೇ ಟೋಬಿ ಸಿನಿಮಾದ ಫಸ್ಟ್ ಲುಕ್​ ವಿಶೇಷ. ಇತ್ತೀಚೆಗಷ್ಟೇ ಸಿನಿಮಾದ ಶೀರ್ಷಿಕೆ, ಮೋಷನ್​ ಪೋಸ್ಟರ್​, ಫಸ್ಟ್​ ಲುಕ್​ ಬಿಡುಗಡೆಯಾಗಿತ್ತು. ಇದೀಗ ‘ಟೋಬಿ’ ಚಿತ್ರದ ಟ್ರೇಲರ್​ ದಿನಾಂಕ ಘೋಷಣೆಯಾಗಿದೆ.

ತಮ್ಮ ಸಹಜ ಅಭಿನಯದ ಮೂಲಕ ಸಿನಿಪ್ರಿಯರ ಮನ ಗೆದ್ದಿರುವ ರಾಜ್ ಬಿ ಶೆಟ್ಟಿ ನಟನೆಯ ‘ಟೋಬಿ’ ಚಿತ್ರ ಸದ್ಯ ಗಾಂಧಿನಗರದಲ್ಲಿ ಟಾಕ್ ಆಫ್ ದಿ‌ ಟೌನ್ ಆಗಿದೆ‌. ‘ಗರುಡ ಗಮನ ವೃಷಭ ವಾಹನ’ದಂತಹ ಸೂಪರ್​ ಹಿಟ್​ ಸಿನಿಮಾ ನೀಡಿರುವ ರಾಜ್​ ಇದೀಗ ‘ಕೆಣಕಿದರೆ ಕುರಿಯೂ ಮಾರಿಯಾಗಬಲ್ಲದು’ ಎನ್ನುತ್ತಾ ನಿಮ್ಮ ಮುಂದೆ ಬರಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ಸದ್ದಿಲ್ಲದೇ ಚಿತ್ರದ ಶೂಟಿಂಗ್​ ಕೂಡ ಮುಕ್ತಾಯಗೊಂಡಿದೆ. ಸದ್ಯ ಚಿತ್ರತಂಡ ಟ್ರೇಲರ್​ಗೆ ಮುಹೂರ್ತ ಫಿಕ್ಸ್​ ಮಾಡಿದೆ.ಆಗಸ್ಟ್​ 4 ರಂದು ಟ್ರೇಲರ್​.. ಟೋಬಿ ಸಿನಿಮಾದ ಟ್ರೇಲರ್​ ಆಗಸ್ಟ್​ 4 ರಂದು ಸಂಜೆ 4 ಗಂಟೆ 5 ನಿಮಿಷಕ್ಕೆ ಬಿಡುಗಡೆಯಾಗಲಿದೆ. ಈ ಬಗ್ಗೆ ರಾಜ್​ ಬಿ ಶೆಟ್ಟಿ ಸೋಷಿಯಲ್​ ಮೀಡಿಯಾ ಮೂಲಕ ಅಧಿಕೃತ ಮಾಹಿತಿ ನೀಡಿದ್ದಾರೆ. ಅಂತೂ ಸಿನಿ ಪ್ರೇಕ್ಷಕರು ಕಾಯುತ್ತಿರುವ ಕ್ಷಣಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈಗಾಗಲೇ ಪೋಸ್ಟರ್​ನಿಂದಲೇ ಕುತೂಹಲ ಹುಟ್ಟಿಸಿರುವ ಟೋಬಿ ಟ್ರೇಲರ್​ ಹೇಗಿರಬಹುದು? ಎಂಬ ಮುಗಿಲೆತ್ತರದ ನಿರೀಕ್ಷೆ ಜನರಲ್ಲಿದೆ


Spread the love

About Laxminews 24x7

Check Also

ಗರ್ಲಗುಂಜಿಯಲ್ಲಿ ಸರ್ವಲೋಕ ಸೇವಾ ಫೌಂಡೇಶನ್’ನಿಂದ ವೃಕ್ಷಾರೋಪಣ…

Spread the love ಗರ್ಲಗುಂಜಿಯಲ್ಲಿ ಸರ್ವಲೋಕ ಸೇವಾ ಫೌಂಡೇಶನ್’ನಿಂದ ವೃಕ್ಷಾರೋಪಣ… ಪರಿಸರ ಜಾಗೃತಿಯ ಸಂದೇಶ ಖಾನಾಪೂರ ತಾಲೂಕಿನ ಗರ್ಲಗುಂಜಿ ಗ್ರಾಮದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ