ಬೆಳಗಾವಿ: ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದ ಯುವಕ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಮಹಾರಾಷ್ಟ್ರ ಬಸ್ ಗೆ ಕೆಲವು ಕಿಡಿಗೇಡಿಗಳು ಕಲ್ಲು ತೂರಿದ ಹಿನ್ನೆಲೆಯಲ್ಲಿ ಚನ್ನಮ್ಮ ವೃತ್ತದಲ್ಲಿ ರಾಜ್ಯೋತ್ಸವ ಆಚರಿಸುತ್ತಿದ್ದ ಗುಂಪು ಗುಂಪಾಗಿ ಸೇರಿದ ಯುವಕರ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ. ಪೊಲೀಸ್ ಲಾಠಿ ಏಟು ಬೀಳುತ್ತಿದ್ದಂತೆ ಯುವಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಪೊಲೀಸರ ನಡೆಗೆ ಕರವೇ ಜಿಲ್ಲಾಧ್ಯಕ್ಷ ಅಸಮಧಾನ ವ್ಯಕ್ತವಾಡಿಸಿದ್ದು, ಎಂಇಎಸ್ ಮುಖಂಡರು ಪ್ರತಿಭಟನಾ ಸಭಾ ನಡೆಸಿದರು ಅದಕ್ಕೆ ಅಡ್ಡಿ ಪಡಿಸದೇ ಪೊಲೀಸರು ರಾಜ್ಯೋತ್ಸವ ಆಚರಣೆಗೆ ಬಂದ ಯುವಕರ ಮೇಲೆ ಲಾಠಿ ಬೀಸಿದ್ದಾರೆ. ಎಂಇಎಸ್ ಸಭೆಗೆ ಅಡ್ಡಿಪಡಿಸಲು ಮುಂದಾದ ಕನ್ನಡಪರ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೆಂತಾ ನ್ಯಾಯ ಎಂದು ಅಸಮಧಾನ ವ್ಯಕ್ತಪಡಿಸಿದ್ರು.