Breaking News

ತುಂಗಭದ್ರಾ ಜಲಾಶಯಕ್ಕೆ ಹರಿದು ಬಂದ 18 ಟಿಎಂಸಿ ನೀರು, ರೈತರಿಗೆ ಸಂತಸ

Spread the love

ಬಳ್ಳಾರಿ, ರಾಯಚೂರು ರೈತರಲ್ಲಿ ಕೊಂಚ ಆಶಾಭಾವನೆ ಮೂಡಿದೆ. 10 ದಿನದಲ್ಲಿ 18 ಟಿಎಂಸಿ ನೀರು ಜಲಾಶಯಕ್ಕೆ ಬಂದಿದ್ದು, ರೈತರು ಮೊದಲ ಬೆಳೆ ಭತ್ತದ ನಾಟಿ ಶುರು ಮಾಡಿದ್ದಾರೆ.

 

 

ರಾಜ್ಯಾದ್ಯಂತ ವ್ಯಾಪಕ ಮಳೆ.. ತುಂಗಭದ್ರಾ ಜಲಾಶಯಕ್ಕೆ ಹರಿದು ಬಂದ 18 ಟಿಎಂಸಿ ನೀರು, ರೈತರಿಗೆ ಸಂತಸ

ತುಂಗಭದ್ರಾ ಜಲಾಶಯ

ವಿಜಯನಗರ: ತ್ರಿವಳಿ ರಾಜ್ಯಗಳಿಗೆ ಜೀವನಾಡಿ ಆಗಿರುವ ತುಂಗಭದ್ರಾ ಜಲಾಶಯದ ಒಳಹರಿವಿನ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಭರವಸೆ ಮೂಡಿದೆ. ಜಲಾಶಯಕ್ಕೆ ಹೆಚ್ಚು ನೀರು ಹರಿದು ಬರುತ್ತಿದ್ದಂತೆ ಇತ್ತ ರೈತರು ಮೊದಲನೆ ಬೆಳೆ ಭತ್ತದ ನಾಟಿಗೆ ಗದ್ದೆಗಳನ್ನು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಜಲಾಶಯಕ್ಕೆ ಹರಿದು ಬರುತ್ತಿದೆ ಅಪಾರ ಪ್ರಮಾಣದ ನೀರು: ಆರಂಭದಲ್ಲಿ ಮುಂಗಾರು ಕೈಕೊಟ್ಟಿದ್ದರಿಂದ ಈ ಬಾರಿ ತುಂಗಭದ್ರಾ ಜಲಾಶಯ ತುಂಬುತ್ತದೋ ಇಲ್ಲವೋ ಎಂಬ ನಿರಾಸೆಯಲ್ಲಿದ್ದ ರೈತರಿಗೆ ಕೊಂಚ ಆಶಾಭಾವನೆ ಚಿಗುರಿದೆ. ಮಳೆನಾಡು ಚಿಕ್ಕಮಂಗಳೂರು ಹಾಗೂ ಶಿವಮೊಗ್ಗ ಸೇರಿ ಜಲಾಯನ ಪ್ರದೇಶದಲ್ಲಿ ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಆದ್ದರಿಂದ ತುಂಗಭದ್ರಾ ಒಡಲಲ್ಲಿ ಭತ್ತದ ನಾಟಿ ಸೇರಿ ಇತರ ಬೆಳೆ ಬಿತ್ತನೆಗೆ ಭಾರಿ ಸಿದ್ಧತೆ ನಡೆದಿದೆ. ಈಗಾಗಲೇ ಕೊಳವೆಬಾವಿ ಇರುವ ಜಮೀನುಗಳಲ್ಲಿ ಭತ್ತದ ಸಸಿ ಮಡಿಗಳು ಹಾಕಿಕೊಂಡಿರುವ ರೈತರು, ಕೆಲ ದಿನಗಳಿಂದ ನಾಟಿ ಕಾರ್ಯ ಶುರು ಮಾಡಿದ್ದಾರೆ.

16.52 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಬಹುತೇಕ ಭತ್ತ ಬೆಳೆ ಬೆಳೆಯಲಾಗುತ್ತದೆ. ಜಲಾಶಯಕ್ಕೆ ಒಳಹರಿವು ಹೆಚ್ಚಿದ್ದರಿಂದ ನಾಟಿ ಕಾರ್ಯ ಕೂಡ ಆರಂಭವಾಗಿದೆ. ಅಚ್ಚಕಟ್ಟು ಪ್ರದೇಶದಲ್ಲಿ ರಾಜ್ಯದಲ್ಲಿ 9.15 ಲಕ್ಷ ಹೆಕ್ಟೇರ್ ಪ್ರದೇಶ ನೀರಾವರಿ ಇದ್ದರೆ, ಆಂಧ್ರ ಪ್ರದೇಶದಲ್ಲಿ 6.50 ಲಕ್ಷ ಹೆಕ್ಟೇರ್, ತೆಲಂಗಾಣದಲ್ಲಿ 87 ಸಾವಿರ ಹೆಕ್ಟೇರ್ ಪದೇಶ ಒಟ್ಟು 16.52 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೈತರು ತುಂಗಭದ್ರಾ ಜಲಾಶಯವನ್ನು ನಂಬಿದ್ದಾರೆ. ಈ ಪೈಕಿ ಅಂದಾಜು 12 ಲಕ್ಷ ಹೆಕ್ಟೇರ್‌ನಲ್ಲಿ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಆದ್ದರಿಂದ ಮೊದಲನೇ ಬೆಳೆಗೆ ಬೇಕಾಗಿರುವ ಎಲ್ಲ ಸಿದ್ಧತೆಗಳನ್ನು ರೈತರು ಈಗಾಗಲೇ ಮಾಡಿಕೊಂಡಿದ್ದಾರೆ.


Spread the love

About Laxminews 24x7

Check Also

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

Spread the loveಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ