Breaking News

ಮದ್ಯಕ್ಕೆ ಹಣ ಹೊಂದಿಸಲು ಆರು ತಿಂಗಳ ಮಗು ಮಾರಾಟ..

Spread the love

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.

ಮದ್ಯ ಸೇವಿಸಲು ಹಣ ಹೊಂದಿಸುವ ಉದ್ದೇಶದಿಂದ ಆರು ತಿಂಗಳ ಮಗುವನ್ನು ಮಾರಾಟ ಮಾಡಿದ ಆರೋಪದ ಮೇಲೆ ಮೂವರನ್ನು ಭಾನುವಾರ ಬಂಧಿಸಲಾಗಿದೆ. ಈ ಬಂಧಿತ ಆರೋಪಿಗಳು ಮಗುವಿನ ಅಪ್ಪ, ಅಮ್ಮ ಹಾಗೂ ಅಜ್ಜನೇ ಆಗಿದ್ದಾರೆ.

ಬಂಧಿತರನ್ನು ಜೈದೇಬ್ ಚೌಧರಿ (ತಂದೆ), ಸತಿ ಚೌಧರಿ (ತಾಯಿ) ಮತ್ತು ಕನೈ ಚೌಧರಿ (ಅಜ್ಜ) ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಅಜ್ಜ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ ಎಂದು ಪೊಲೀಸರು ಬಂಧಿಸಿದ್ದಾರೆ. ಇಡೀ ಪ್ರಕರಣದಲ್ಲಿ ಮಕ್ಕಳ ಕಳ್ಳಸಾಗಣೆ ದಂಧೆಯ ಕೈವಾಡದ ಶಂಕೆಯನ್ನೂ ಪೊಲೀಸರು ವ್ಯಕ್ತಪಡಿಸಿದ್ದಾರೆ. ಆದರೆ, ಮಾರಾಟವಾದ ಮಗು ಇನ್ನೂ ಪತ್ತೆಯಾಗಿಲ್ಲ.

ಉತ್ತರ 24 ಪರಗಣ ಜಿಲ್ಲೆಯ ಪಾನಿಹತಿ ಮೂಲದ ಜೈದೇಬ್ ಚೌಧರಿ ಮತ್ತು ಸತಿ ಚೌಧರಿ ದಂಪತಿಯ ಮಗು ಕೆಲ ದಿನಗಳಿಂದ ಕಾಣೆಯಾಗಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಹೀಗಾಗಿ ಅಕ್ಕ-ಪಕ್ಕದ ಮನೆಯವರು ಮಗುವಿನ ಬಗ್ಗೆ ವಿಚಾರಿಸಿದಾಗ ಆ ದಂಪತಿ ಸಂಬಂಧಿಕರ ಮನೆಯಲ್ಲಿದೆ ಎಂದು ತಿಳಿಸಿದ್ದಾರೆ. ಆದರೆ, ಈ ದಂಪತಿ ಏನೋ ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅನುಮಾನಗೊಂಡಿದ್ದಾರೆ. ಅಂತೆಯೇ, ಈ ವಿಷಯವನ್ನು ಸ್ಥಳೀಯ ಕೌನ್ಸಿಲರ್​ ಗಮನಕ್ಕೆ ತಂದಿದ್ದಾರೆ. ಈ ಕೌನ್ಸಿಲರ್​ ಮಗು ಕಾಣೆಯಾದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಸದ್ಯ ಹಾಲಿ – ಮಾಜಿ ಶಾಸಕರ ದಂಡೇ ದುಂಬಾಲು ಬಿದ್ದಿದೆ.

Spread the loveಬೆಳಗಾವಿ : ಅದೊಂದು ಕಾಲ ಇತ್ತು, ಜಿಲ್ಲೆಯ ಪ್ರಭಾವಿ ನಾಯಕರ ಶಿಷ್ಯರು, ಆಪ್ತರು, ದ್ವಿತೀಯ ಸಾಲಿನ ನಾಯಕರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ