Breaking News

ಬೆಂಗಳೂರು ನಗರದಲ್ಲಿ ಐವರು ಶಂಕಿತ ಉಗ್ರರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಇವರಿಂದ ವಶಕ್ಕೆ ಪಡೆದಿರುವ ಗ್ರೆನೇಡ್​ ಕುರಿತು ತನಿಖೆ ನಡೆಸಲಿದ್ದಾರೆ.

Spread the love

ಬೆಂಗಳೂರು : ರಾಜಧಾನಿಯಲ್ಲಿ‌ ಶಂಕಿತ ಉಗ್ರರ ಬಂಧನದ ಬಳಿಕ ಅವರಿಂದ ವಶಕ್ಕೆ ಪಡೆಯಲಾದ ಗ್ರೆನೇಡ್ ಹಿಂದಿನ ರಹಸ್ಯ ತಿಳಿಯಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.

ಆರೋಪಿಗಳಿಗೆ ಗ್ರೆನೇಡ್ ಸಿಕ್ಕಿದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೆಸಲಿದ್ದಾರೆ.

ಸಿಸಿಬಿ ಪೊಲೀಸರು ಸದ್ಯ ನಾಲ್ಕು ಗ್ರೆನೇಡ್​​ಗಳನ್ನು ಶಂಕಿತರಿಂದ ವಶಕ್ಕೆ ಪಡೆದಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದ ಬಳಿಕ ವಿಧಿ ವಿಜ್ಞಾನ ಪ್ರಯೋಗಾಲಯ (FSL) ಹಾಗೂ ರಾಷ್ಟ್ರೀಯ ಬಾಂಬ್ ಡಾಟಾ ಸೆಂಟರ್ (NBDC)ಗಳು ಈ ಪರಿಶೀಲನೆ ಆರಂಭಿಸಲಿವೆ. ಮೊದಲಿಗೆ ಗ್ರೆನೇಡ್​​ಗಳನ್ನು ನಿಷ್ಕ್ರಿಯಗೊಳಿಸುವ ಕೆಲಸ ಮಾಡಲಾಗುತ್ತದೆ. ನಂತರ ಅವುಗಳ ತಯಾರಿಕೆಗೆ ಬಳಕೆಯಾಗಿರುವ ಕಚ್ಚಾ ವಸ್ತುಗಳ ವಿಂಗಡಣೆ ಮಾಡಲಾಗುತ್ತದೆ.

ಬಳಿಕ ಪ್ರತಿಯೊಂದು ಕಚ್ಚಾವಸ್ತು ಎಲ್ಲಿ ತಯಾರಾಗಿರಬಹುದು ಎಂಬ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ. ಗ್ರೆನೇಡ್ ಮಾದರಿಯನ್ನು ಬಳಿಕ ‘ಎನ್​ಬಿಡಿಸಿ’ ಡಾಟಾಗಳ ಜೊತೆಗೆ ಅನಾಲಿಸಿಸ್ ಮಾಡಲಾಗುತ್ತದೆ. ದೇಶದಲ್ಲಿ ಸಂಭವಿಸುವ ಪ್ರತೀ ಸ್ಫೋಟಗಳ ಡಾಟಾ ನಿರ್ವಹಣೆ ಮಾಡುವ ‘ಎನ್​​ಬಿಡಿಸಿ’ ಈ ಮಾದರಿಯ ಗ್ರೆನೇಡ್ ಎಲ್ಲಿಯಾದರೂ ಬಳಕೆಯಾಗಿದೆಯಾ ಎಂಬುದರ ಕುರಿತು ಕೂಲಂಕಷವಾಗಿ ಪರಿಶೀಲನೆ ನಡೆಸುತ್ತದೆ.

ಈ ಎಲ್ಲಾ ಪರಿಶೀಲನೆಗಳ ನಂತರ ಗ್ರೆನೇಡ್ ಎಲ್ಲಿಯದ್ದು? ಹೇಗೆ ತಯಾರಾಗಿದೆ? ಈ ಮಾದರಿಯ ಸ್ಫೋಟಕ ಈ ಹಿಂದೆ ಎಲ್ಲಿಯಾದರೂ ಬಳಕೆಯಾಗಿದೆಯೇ ?.. ಸ್ಫೋಟ ಮತ್ತು ಅದರ ಪರಿಣಾಮವೇನು ಎಂಬ ಮಾಹಿತಿ ಲಭ್ಯವಾಗಲಿದೆ ಎಂದು ಸಿಸಿಬಿಯ ಉನ್ನತ ಮೂಲಗಳು ತಿಳಿಸಿವೆ.

 


Spread the love

About Laxminews 24x7

Check Also

ರಾಯಬಾಗ: ರೇಬಿಸ್ ಲಸಿಕಾ ಅಭಿಯಾನಕ್ಕೆ ಚಾಲನೆ

Spread the love ರಾಯಬಾಗ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ರಾಮಕೃಷ್ಣ ಪಬ್ಲಿಕ್ ಸ್ಕೂಲ್ ಬೆಕ್ಕೇರಿ ಇವರ ಸಹಯೋಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ