Breaking News

ಬಸ್​ನಲ್ಲಿ ಮೂರ್ಛೆ ಹೋದ ಪ್ರಯಾಣಿಕ: ಆಸ್ಪತ್ರೆಗೆ ಸೇರಿಸಿ ಪ್ರಾಣ ಕಾಪಾಡಿದ ಚಾಲಕ – ನಿರ್ವಾಹಕ.

Spread the love

ತುಮಕೂರು : ಚಲಿಸುತ್ತಿದ್ದ ಬಸ್​ನಲ್ಲಿ ಮೂರ್ಛೆ ಹೋದ ಪ್ರಯಾಣಿಕನನ್ನು ತಕ್ಷಣ ಚಿಕಿತ್ಸೆ ಕೊಡಿಸಲು ಬಸ್​ನ ಚಾಲಕ ಮತ್ತು ನಿರ್ವಾಹಕ ಸಮಯ ಪ್ರಜ್ಞೆ ಮೆರೆದಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

ಬಸ್​ನಲ್ಲಿಯೇ ಮೂರ್ಛೆ ತಪ್ಪಿ ಬಿದ್ದು ಪ್ರಯಾಣಿಕನಿಗೆ ತೀವ್ರ ರಕ್ತಸ್ರಾವವಾಗಿತ್ತು. ಕೂಡಲೇ ಪ್ರಯಾಣಿಕರ ಸಮೇತ ಬಸ್​ ಅನ್ನು ಆಸ್ಪತ್ರೆ ಕಡೆ ಓಡಿಸಿದ ಚಾಲಕ, ಪ್ರಶಂಸೆಗೆ ಪಾತ್ರರಾಗಿದ್ದಾರೆ.

ತುಮಕೂರಿನ ತಿಪಟೂರು ಪಟ್ಟಣದಲ್ಲಿ ಘಟನೆ ನಡೆದಿದೆ. ಆಂಬ್ಯುಲೆನ್ಸ್ ರೀತಿ ಬಸ್ ಚಲಾಯಿಸಿ ಡ್ರೈವರ್​ ಪ್ರಯಾಣಿಕನ ಪ್ರಾಣ ಉಳಿಸಿದ್ದಾರೆ. ಶಿವಮೊಗ್ಗದಿಂದ-ಬೆಂಗಳೂರಿಗೆ ಬರುತ್ತಿದ್ದ ಕೆಎಸ್​ಆರ್​ಟಿಸಿ ಬಸ್ ಇದಾಗಿತ್ತು. ಈ ವೇಳೆ, ಬಸ್ ತಿಪಟೂರು ನಿಲ್ದಾಣ ತಲುಪಿದಾಗ ಉಸಿರಾಡಲು ಸಾಧ್ಯವಾಗದೇ ಪ್ರಯಾಣಿಕ ಮೂರ್ಛೆ ತಪ್ಪಿದ್ದರು. ಬಿದ್ದ ರಭಸಕ್ಕೆ ಮೂಗಿನಲ್ಲಿ ರಕ್ತ ಸ್ರಾವವಾಗಿತ್ತು. ಕೂಡಲೇ ಗಮನಿಸಿದ ನಿರ್ವಾಹಕ ಓಂಕಾರ್ ಚಾಲಕನಿಗೆ ತಿಳಿಸಿದ್ದಾರೆ.

ಚಾಲಕ-ನಿರ್ವಾಹಕನ ಮಾನವೀಯತೆಗೆ ಸಾರ್ವಜನಿಕರಿಂದ ಪ್ರಶಂಸೆ: ಕೂಡಲೇ ಚಾಲಕ ಪ್ರಕಾಶ್ ಬಸ್ ಅನ್ನು ತಿಪಟೂರು ತಾಲೂಕು ಆಸ್ಪತ್ರೆಗೆ ಚಲಾಯಿಸಿದ್ದಾರೆ. ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ಸೇರಿಸಿದ ಪರಿಣಾಮ ಈಶ್ವರ್ ರೆಡ್ಡಿ ಪ್ರಾಣ ಉಳಿದಿದೆ. ಚಾಲಕ- ನಿರ್ವಾಹಕರ ಮಾನವೀಯತೆಯನ್ನು ಸಾರ್ವಜನಿಕರು ಪ್ರಶಂಸಿಸಿದ್ದಾರೆ.

ಬಸ್​​ ಚಲಾಯಿಸುವಾಗ ಮೂರ್ಛೆ ಬಂದು ಒದ್ದಾಡಿದ ಚಾಲಕ: ಬಸ್​​ ಚಲಾಯಿಸುವಾಗ ಚಾಲಕನಿಗೆ ಮೂರ್ಛೆರೋಗ ಬಂದ ಪರಿಣಾಮ ಬಸ್ ನಿಯಂತ್ರಣ ಕಳೆದುಕೊಂಡು ಮುಂದಿದ್ದ ವಾಹನಕ್ಕೆ (ಜನವರಿ 23-2023) ಗುದ್ದಿತ್ತು. ಕೂಡಲೇ ಗಮನಿಸಿದ ​​​ಮತ್ತೋರ್ವ ಚಾಲಕ ಬಸ್​ ತಡೆದು ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದರು.

ಎರಡು ದ್ವಿಚಕ್ರ ವಾಹನಗಳು ಜಖಂ: ಧಾರವಾಡದಿಂದ ಹುಬ್ಬಳ್ಳಿಗೆ ಬರುತ್ತಿದ್ದ ವೇಳೆ ಉಣಕಲ್​​ ಬಳಿ ಬೇಂದ್ರೆ ಸಾರಿಗೆ ಬಸ್​ ಚಾಲಕನಿಗೆ ಮೂರ್ಛೆರೋಗ ಬಂದಿತ್ತು. ಪರಿಣಾಮ ಬಸ್​ ನಿಯಂತ್ರಣ ತಪ್ಪಿ ವಾಹನಗಳಿಗೆ ಡಿಕ್ಕಿ ಹೊಡೆದಿತ್ತು. ಆಗ ಅಲ್ಲೇ ಇದ್ದ ಮತ್ತೋರ್ವ ಚಾಲಕ ಬಸ್​​​ ತಡೆದು ನಿಲ್ಲಿಸಿದ್ದರು. ಘಟನೆಯಲ್ಲಿ ಎರಡು ದ್ವಿಚಕ್ರ ವಾಹನಗಳು ಜಖಂಗೊಂಡಿದ್ದವು. ಇತ್ತ ಪಿಡ್ಸ್​​​ ಬಂದು ಅಸ್ವಸ್ಥಗೊಂಡಿದ್ದ ಚಾಲಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದರು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದರು.


Spread the love

About Laxminews 24x7

Check Also

ಹಾವೇರಿ: ಶರಣ ಚೌಡಯ್ಯ ಐಕ್ಯ ಮಂಟಪಕ್ಕೆ ಜಲದಿಗ್ಬಂಧನ, ತೆಪ್ಪದಲ್ಲಿ ತೆರಳಿ ಭಕ್ತರಿಂದ ಪೂಜೆ

Spread the loveಹಾವೇರಿ: ಸಂತರ, ಶರಣರ ಮತ್ತು ದಾರ್ಶನಿಕರ ಜಿಲ್ಲೆ ಹಾವೇರಿ. ಇಲ್ಲಿ ಸರ್ವಜ್ಞ, ಅಂಬಿಗರ ಚೌಡಯ್ಯ, ಕನಕದಾಸರು, ಶಿಶುನಾಳ ಶರೀಫರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ