ನಿಪ್ಪಾಣಿ :ನಿಪ್ಪಾಣಿ ನಗರದಲ್ಲಿ ಅಧಿಕ ಶ್ರಾವಣ ಮಾಸದ ನಿಮಿತ್ತ ಶ್ರೀ ಸದ್ಗುರು ಸಾಯಿಬಾಬಾ ಜೀವನ ದರ್ಶನ ಮತ್ತು ಪ್ರವಚನ ಕಾರ್ಯಕ್ರಮದಲ್ಲಿ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಜಿ ಯವರು ಭಾಗವಹಿಸಿ, ಶ್ರೀ ಸಾಯಿಬಾಬಾ ದೇವರ ದರ್ಶನ ಪಡೆದರು. ಸಾಯಿಬಾಬಾ ಅವರು ಭಾರತ ಕಂಡ ಮಹಾನ್ ಸಂತರಲ್ಲಿ ಒಬ್ಬರು ಎಂದು ಅವರನ್ನು ಪೂಜಿಸಲ್ಪಡುತ್ತಾರೆ.ಅವರ ಜೀವನವು ನಮಗೆ ಧಾರ್ಮಿಕ ಬೆಳವಣಿಗೆ, ಪ್ರೇಮ, ದಯೆ, ಸೇವಾಭಾವನೆ ಮತ್ತು ಸತ್ಯದ ಪಥದ ಮೇಲೆ ನಡೆಸುವ ಉದಾತ್ತ ಜೀವನದ ಬಗ್ಗೆ ಉತ್ತೇಜನ ನೀಡುವ ಮೂಲಕ ಅವರ ಸೇವಾ ಮನೋಭಾವನೆಗಳು ಪ್ರೆರಣಾದಾಯಕವಾಗಿವೆ.
ಈ ಸಮಾರಂಭದಲ್ಲಿ ನಿಪ್ಪಾಣಿ ಸಮಾಧಿ ಮಠದ ಪ. ಪೂ. ಶ್ರೀ ಪ್ರಾಣಲಿಂಗ ಮಹಾಸ್ವಾಮೀಜಿಗಳು,ಆಡಿಯ ಸಿದ್ದೇಶ್ವರ ಮಠದ ಪೂಜ್ಯ ಶ್ರೀ ಮ.ನಿ.ಪ್ರ. ಸಿದ್ದೇಶ್ವರ ಮಹಾಸ್ವಾಮಿಜಿಗಳು, ಗುಳೇದಗುಡ್ಡ ಕೋಟೆಕಲ್ಲ ಮಠದ ಶ್ರೀ ಮ.ನಿ.ಪ್ರ.ಅಭಿನವ ಒಪ್ಪತೇಶ್ವರ ಮಹಾಸ್ವಾಮೀಜಿಗಳು, ಭೋಜ ಉಗಮೇಶ್ವರ ಮಠದ ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮೀಜಿಗಳು,ಶ್ರೀ ದತ್ತಪೀಠ ತಮನಾಕವಾಡಾ ಮಠದ ಸದ್ಗುರು ಸಚ್ಚಿದಾನಂದ ಬಾಬಾ ಮಹಾರಾಜ ಅವರ ದಿವ್ಯ ಸಾನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಶ್ರೀ ಮಹಾಲಿಂಗ ಕೋಟಿವಾಲೆ, ಡಾ. ಸಾಯಿನಾಥ ಪಾಟೀಲ,ಶ್ರೀ ಶರದ ಮೆಹತಾ,ಶ್ರೀ ಜನಾರ್ದನ ಭಾಟಲೆ, ಶ್ರೀ ರಾಮ ಚವ್ಹಾಣ, ನಗರಸಭೆ ಸದಸ್ಯರು, ಸ್ಥಳೀಯ ಮುಖಂಡರು, ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.