Breaking News

ಭದ್ರಾವತಿ: ರೌಡಿಶೀಟರ್ ಬರ್ಬರ ಹತ್ಯೆ

Spread the love

ಶಿವಮೊಗ್ಗ: ರೌಡಿ‌ಶೀಟರ್ ಮುಜೀಬ್ (32) ಎಂಬಾತನನ್ನು‌ ಮಾರಕಾಸ್ತ್ರಗಳಿಂದ‌ ಕೊಚ್ಚಿ‌ ಕೊಲೆಗೈದ ಘಟನೆ ಕಳೆದ ರಾತ್ರಿ ಭದ್ರಾವತಿಯಲ್ಲಿ ನಡೆದಿದೆ. ಬೊಮ್ಮನಕಟ್ಟೆ ಬಳಿಯ ಹಳೆ ನಂಜಾಪುರದಲ್ಲಿ ಘಟನೆ ಜರುಗಿದೆ.

ಮುಜೀಬ್ ಈ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಪ್ರಮುಖ‌ ಆರೋಪಿಯಾಗಿದ್ದ.

ಇಂದು ಬೆಳಗ್ಗೆ ಸ್ಥಳೀಯರು ಶವ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೇಪರ್‌ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಜೀಬ್‌ಗೆ ಎರಡು ಮದುವೆಯಾಗಿದ್ದು, ಮೊದಲನೇ ಪತ್ನಿಗೆ ಇಬ್ಬರು ಮತ್ತು ಎರಡನೇ ಪತ್ನಿಗೆ ಒಂದು‌ ಮಗುವಿದೆ.

ಪ್ರೀತಿಸಿ ಮದುವೆಯಾದ ಪತ್ನಿ ಕೊಂದ: 13 ವರ್ಷಗಳ ಹಿಂದೆ ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಶಿವಮೊಗ್ಗ ಮೂಲದ ಶಹಜಹಾನ್​ ಮತ್ತು ಹಾವೇರಿ ಮೂಲದ ರಫೀಕ್​ ಅಹಮ್ಮದ್ ಎಂಬವರು​ ಪ್ರೀತಿಸಿ ಮದುವೆಯಾಗಿದ್ದರು. ರಫೀಕ್ ಕಳೆದ ಮೂರು ವರ್ಷಗಳ ಹಿಂದಷ್ಟೇ ಕೋಲಾರದ ಮಾಲೂರು ಪಟ್ಟಣದ ವೆಂಕಟೇಶ್​ ಎಂಬವರ ಬಳಿ ಜೆಸಿಬಿ ಆಪರೇಟರ್​ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ. ರಾಜೀವ್​ ನಗರದ ನಾಸೀರ್ ಎಂಬವರ ಮನೆ ಬಾಡಿಗೆಗೆ ಪಡೆದು ಪತ್ನಿ ಶಹನಾಜ್‌ಳೊಂದಿಗೆ ಸಂಸಾರ ಸಾಗಿಸುತ್ತಿದ್ದನು.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ