ಮುಂಗಾರು ಮಳೆ ವಿಫಲ ಹಿನ್ನಲೆ, ಕುಡಿಯೋ ನೀರು ಜಾನುವಾರುಗಳ ಮೇವಿಗಾಗಿ ಪ್ರತಿಭಟನೆ ನಡೆಸಿರುವ ಘಟನೆ ಮಹಾರಾಷ್ಟ್ರ ರಾಜ್ಯ ಸಾಂಗ್ಲಿ ಜಿಲ್ಲೆ ಜತ್ ಪಟ್ಟಣದಲ್ಲಿ ಬೃಹತ್ ಹೋರಾಟ ನಡೆಸಲಾಯಿತು.
ಜತ್ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿಕ್ರಮ್ ದಾದಾ ಸಾವಂತ್ ನೇತೃತ್ವದಲ್ಲಿ ಹೋರಾಟ ನಡೆಯಿತು. ಮಹಾರಾಷ್ಟ್ರ ಸರ್ಕಾರ ಕುಡಿಯೋ ನೀರು ಹಾಗೂ ಜಾನುವಾರುಗಳಿಗೆ ಮೇವು ಪೂರೈಕೆ ಮಾಡಬೇಕೆಂದು ಒತ್ತಾಯಿಸಿದರು. ಕರ್ನಾಟಕದ ಗಡಿ ಭಾಗದ ಗ್ರಾಮಗಳಿಗೆ ಮಹಾರಾಷ್ಟ್ರ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ.
ಎಂದು ಆರೋಪಿಸಿದರು. ನಿರ್ಲಕ್ಷ್ಯ ಮಾಡಿದ್ದಕ್ಕೆ ಈ ಹಿಂದೆ ನಾವು ಕರ್ನಾಟಕಕ್ಕೆ ಸೇರಲು ಮುಂದಾಗಿ ದ್ದೇವು, ಆಗ ಎಲ್ಲಾ ಸೌಕರ್ಯ ಕೊಡೋದಾಗಿ ಭರವಸೆಯನ್ನು ಮಹಾರಾಷ್ಟ್ರ ಸರ್ಕಾರ ನೀಡಿತ್ತು.
ಈಗ ಬರಗಾಲ ಉಂಟಾಗಿದ್ದು ಗಡಿ ಭಾಗದ ಗ್ರಾಮಗಳ ಜನರು ಕುಡಿಯೋ ನೀರಿಗಾಗಿ ಹಾಹಾಕಾರ ಪಡುತ್ತಿದ್ದಾರೆ. ಜಾನುವಾರುಗಳಿಗೆ ಮೇವು ಇಲ್ಲವಾಗಿದೆ. ಕುಡಿಯೋ ನೀರು ಜಾನುವಾರುಗಳಿಗೆ ಮೇವು ನೀಡಬೇಕೆಂದು ಮಹಾ ಸರ್ಕಾರಕ್ಕೆ ಒತ್ತಾಯಿಸಿದರು.
ಸ್ಥಳಿಯ ಶಾಸಕ ವಿಕ್ರಮ್ ದಾದಾ ಸಾವಂತ ನೇತೃತ್ವದಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಮಹಾರಾಷ್ಟ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಪ್ರತಿಭಟನೆ ಕೂಗಿದರು. ಮಹಿಶ್ಯಾಳ ಏತ ನೀರಾವರಿ ಯೋಜನೆ ಅನುಷ್ಟಾನಕ್ಕೆ ಒತ್ತಾಯಿಸಿದರು.