ಬೆಳಗಾವಿ : 12ನೇ ಶತಮಾನದ ಕಲ್ಯಾಣ ಕ್ರಾಂತಿಯ ನಂತರ ಚದುರಿ ಹೋಗಿದ್ದ ವಚನಗಳನ್ನು ಸಂಗ್ರಹಿಸಿ, ವಚನಗಳಿಗೆ ಪುನರ್ಜನ್ಮ ಕೊಟ್ಟಿದ್ದು ವಚನ ಪಿತಾಮಹ ಡಾ ಫ ಗು ಹಳಕಟ್ಟಿಯವರು. ಇವರು 20ನೇ ಶತಮಾನದ ವಚನ ಸಾಹಿತ್ಯದ ಶಿಖರ ಸೂರ್ಯ ಎಂದು ಖ್ಯಾತ ಸಾಹಿತಿ ಡಾ ಸಿ ಕೆ ನಾವಲಗಿ ಅವರು ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಇಂದು ವಚನ ಪಿತಾಮಹ ಡಾ ಫ ಗು ಹಳಕಟ್ಟಿಯವರ ಜನ್ಮದಿನ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದ ಅವರು, ನೂರಾರು ಶಾಸನಗಳನ್ನು ಹಳಕಟ್ಟಿಯವರು ಓದುತ್ತಾರೆ. 165 ಪುಸ್ತಕಗಳನ್ನು ಹೊರತರುತ್ತಾರೆ. ಸ್ವಂತ ಮನೆಯನ್ನು ಮಾರಿ ವಚನಗಳನ್ನು ಉಳಿಸುವ ಕೆಲಸ ಮಾಡುತ್ತಾರೆ ಎಂದರು.
ಹಳಕಟ್ಟಿ ಅವರ ವ್ಯಕ್ತಿತ್ವ ಬಹಳ ದೊಡ್ಡದು: ಒಮ್ಮೆ ನಾಡಿನ ಹಿರಿಯ ಸಾಹಿತಿ ಬಿ ಎಂ ಶ್ರೀಕಂಠಯ್ಯನವರು ವಿಜಯಪುರಕ್ಕೆ ಬಂದಾಗ ಇಲ್ಲಿ ಒಂದೇ ಗುಮ್ಮಟ ಇಲ್ಲ. ಮತ್ತೊಂದು ಗುಮ್ಮಟವಿದೆ. ಅದುವೇ ವಚನ ಗುಮ್ಮಟ ಡಾ. ಫ. ಗು ಹಳಕಟ್ಟಿ ಅವರು. ನಾನು ಮೊದಲು ಆ ಗುಮ್ಮಟ ನೋಡಬೇಕು ಎಂದು ಹೇಳಿದ್ದರಂತೆ ಎಂದು ಸ್ಮರಿಸಿದ ಡಾ. ಸಿ. ಕೆ ನಾವಲಗಿ ಅವರು, ಹಳಕಟ್ಟಿ ಅವರು ಬರೋವರೆಗೂ ವಚನಗಳ ಬಗ್ಗೆ ನಮಗೆ ಗೊತ್ತೆ ಇರಲಿಲ್ಲ. ಏಕಾಂಗಿಯಾಗಿ ವಚನಗಳನ್ನು ಸಂಗ್ರಹಿಸಿ, ವಿಶ್ಲೇಷಿಸಿ ಪ್ರಕಟಿಸಿದ್ದರು. ಈ ಮೂಲಕ ಕನ್ನಡಿಗರ ಕಣ್ಣು ವಚನಗಳತ್ತ ಅರಳುವಂತೆ ಮಾಡಿದ್ದರು. ವಿಶ್ವ ಸಾಹಿತ್ಯಕ್ಕೆ ಕನ್ನಡದ ಕೊಡುಗೆ ಏನು? ಎಂದರೆ ಅದು ವಚನ ಸಾಹಿತ್ಯ. ಕುವೆಂಪು, ಬೇಂದ್ರೆ ಸೇರಿದಂತೆ ಅನೇಕ ಶ್ರೇಷ್ಠ ಸಾಹಿತಿಗಳು ಕೂಡ ವಚನಗಳಿಂದ ಪ್ರೇರಣೆಗೊಂಡಿದ್ದರು. ಅಂತಹ ವಚನಗಳಿಗೆ ಪುನರ್ಜನ್ಮ ಕೊಟ್ಟಿದ್ದ ಹಳಕಟ್ಟಿ ಅವರ ವ್ಯಕ್ತಿತ್ವ ಬಹಳ ದೊಡ್ಡದು ಎಂದು ಬಣ್ಣಿಸಿದರು.
ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮ
ವಚನಧರ್ಮಸಾರ ಪ್ರಕಟಣೆ ಮಾಡುತ್ತಾರೆ: