Breaking News

ವಿದ್ಯುತ್ ಕಂಬಕ್ಕೆ ಮಾರ್ಕೆಟ್​ನಲ್ಲಿ 20 ಸಾವಿರ ರೂ. ಬೆಲೆ ಇದ್ದರೆ, 60-70 ಸಾವಿರ ರೂ. ಹಾಕಿದ್ದಾರೆ

Spread the love

ಬೆಳಗಾವಿ: ಬೆಳಗಾವಿ ಅಷ್ಟೇ ಅಲ್ಲದೇ ಎಲ್ಲ ಕಡೆ ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲಿ ಮೂಲ ನೀಲನಕ್ಷೆ ಪ್ರಕಾರ ಆಗಿಲ್ಲ. ಮೊನ್ನೆ ಕ್ಯಾಬಿನೆಟ್​ನಲ್ಲೂ ಈ ಬಗ್ಗೆ ಚರ್ಚೆ ಆಗಿದೆ. ಅದಕ್ಕೆ ಸರ್ಕಾರದಿಂದ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಲೋಕೋಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅಭಿಪ್ರಾಯ ಪಟ್ಟರು.

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿಗಳ ಜೊತೆಗಿನ ಸಭೆ ಬಳಿಕ, ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಕಾಮಗಾರಿಗಳ ಪ್ರಥಮ ಸಭೆ ಮಾಡಿದ್ದೇವೆ. ಅಧಿಕಾರಿಗಳ ಜೊತೆಗೆ ನಮಗೆ ಇದ್ದಿದ್ದ ಸಂಶಯ, ಗೊಂದಲಗಳ ಬಗ್ಗೆ ಚರ್ಚಿಸಿದ್ದೇವೆ. ಮುಂಚೆ ಏನಿದೆ ಅದೇ ಮಾಹಿತಿ‌ ಅಧಿಕಾರಿಗಳು ಕೊಟ್ಟಿದ್ದಾರೆ. ಅದರಲ್ಲಿ ಸಂಶಯ ವ್ಯಕ್ತಪಡಿಸುವ ಸಾಕಷ್ಟು ಅಂಶಗಳಿವೆ. ಎಲ್ಲ ಮಾಹಿತಿ ಪಡೆದುಕೊಂಡು ಸಂಬಂಧಿಸಿದ ತಜ್ಞರ ಜೊತೆಗೆ ಚರ್ಚಿಸುತ್ತೇವೆ.

ಸರ್ಕಾರಕ್ಕೆ ಹೇಳುವಾಗ ನಮಲ್ಲಿ ನಿರ್ದಿಷ್ಟ ದಾಖಲೆ ಬೇಕಾಗುತ್ತದೆ. ಖಂಡಿತವಾಗಲೂ ಎಲ್ಲೋ ಸಮಸ್ಯೆ, ಓವರ್ ಎಸ್ಟಿಮೇಟ್ ಆಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇದೆಲ್ಲ ನೋಡಿ ನಮಗೆ ಆಶ್ಚರ್ಯವಾಗಿದೆ. ಆದರೆ, ಅಧಿಕಾರಿಗಳು ತಮ್ಮದೇ ಆದ ಉತ್ತರ ಕೊಟ್ಟಿದ್ದಾರೆ. ಆದರೆ ಗುಣಮಟ್ಟದ ಕಾಮಗಾರಿಗಳು ಆಗಿಲ್ಲ. ಯೋಜನಾ ವೆಚ್ಚ ಹೆಚ್ಚಾಗಿದೆ. ವಿದ್ಯುತ್ ಕಂಬಕ್ಕೆ ಮಾರ್ಕೆಟ್​ನಲ್ಲಿ 20 ಸಾವಿರ ರೂ. ಬೆಲೆ ಇದ್ದರೆ, 60-70 ಸಾವಿರ ರೂ. ಹಾಕಿದ್ದಾರೆ ಎಂಬುದು ಗೊತ್ತಾಗುತ್ತಿದೆ. ಇದಕ್ಕೆ ಏನಾದರೂ ಮಾಡಬೇಕಾದರೆ ನಮ್ಮಲ್ಲಿ ಟೆಕ್ನಿಕಲ್ ದಾಖಲೆ ಬೇಕಾಗುತ್ತದೆ. ಬೇರೆ ಬೇರೆ ತಜ್ಞರಿಂದ ನಾವು ಮಾಹಿತಿ ತೆಗೆದುಕೊಂಡು ಸರ್ಕಾರದ ಗಮನಕ್ಕೆ ತರುತ್ತೇವೆ ಎಂದರು.

ಸಭೆ ಮಾಡಿ ನಿರ್ದೇಶನ ನೀಡಿದ್ದೇವೆ: ವ್ಯಾಕ್ಸಿನ್ ಡಿಪೋದಲ್ಲಿ ಪಾರ್ಕ್ ನಿರ್ಮಾಣಕ್ಕೆ ಆರೋಗ್ಯ ಇಲಾಖೆ ಅನುಮತಿ ಕೊಟ್ಟಿತ್ತು. ಕಟ್ಟಡ, ಕ್ಲಬ್ ಕಟ್ಟುವುದು ಸೇರಿ ಏನೆನೋ ಹೇಳುತ್ತಿದ್ದರು. ಆದರೆ, ಇದಕ್ಕೆ ಯಾವುದಕ್ಕೂ ಅನುಮತಿ ನೀಡಿರಲಿಲ್ಲ. ಈಗ ಒಂದು ಬಾರಿ ಸಭೆ ಮಾಡಿ ನಿರ್ದೇಶನ ನೀಡಿದ್ದು, ಆಸ್ತಿ ಆರೋಗ್ಯ ಇಲಾಖೆಗೆ ಸಂಬಂಧಿಸಿದ್ದು, ಇಲ್ಲಿ ಏನೆನೋ ಕಟ್ಟಿದರೆ ಮುಂದೆ ನಡೆಸುವವರು ಯಾರು..? ಅವರ ಅನುಮತಿ ಪಡೆದು ಮುಂದುವರಿಯುವಂತೆ ತಿಳಿಸಿದ್ದೇವೆ. ಎಲ್ಲಾ ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆ ತನಿಖೆ ನಡೆಸುವ ಬಗ್ಗೆ ರಾಜ್ಯ ಮಟ್ಟದಲ್ಲೇ ತೀರ್ಮಾನವಾಗಿದೆ ಎಂದು ಮಾಧ್ಯಮಗಳ ಪ್ರಶ್ನೆಯೊಂದಕ್ಕೆ ಈ ರೀತಿ ಸತೀಶ ಉತ್ತರಿಸಿದರು.

‘ಮೇಲ್ನೋಟಕ್ಕೆ ದುರ್ಬಳಕೆ ಆಗಿರುವ ಹಾಗೆ ಕಾಣಿಸ್ತಿದೆ’: ಅನುದಾನ ದುರ್ಬಳಕೆ ಆಗಿರುವ ವಿಚಾರಕ್ಕೆ ಮೇಲ್ನೋಟಕ್ಕೆ ಬಹಳಷ್ಟು ಆಗಿದೆ. ಕಾನ್ಸ್ಟಂಟ್ ರಸ್ತೆ, ಲೈಟ್, ಉದ್ಯಾನ ಸೇರಿ ಏನೆನೋ ಮಾಡುತ್ತೇವೆಂದು ಹೇಳಿದ್ದನ್ನು ನೋಡಿದರೆ ಇದು ದುಬೈಗಿಂತ ದುಬಾರಿ ಎನಿಸುತ್ತಿದೆ. ಹೀಗಾಗಿ ಈ ಸಂಬಂಧ ಒಂದು ಸಮಿತಿ ರಚನೆ ಮಾಡಿ ತನಿಖೆ ಮಾಡಬೇಕಿದೆ ಎಂದರು. ಇನ್ನು ಸ್ಮಾರ್ಟ್ ಸಿಟಿ ಅನುದಾನದಲ್ಲಿ ಎಷ್ಟು ಹಣ ಉಳಿದಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ, ಈಗ ಉಳಿದರೋದು ಜಿರೋ ಜಿರೋ ಜಿರೋ ಎಂದ ಸತೀಶ ಜಾರಕಿಹೊಳಿ, 1 ಸಾವಿರ ಕೋಟಿ ರೂ. ಅನುದಾನ ಹೋಗಿದೆ. ಹೀಗಾಗಿ 20 ಕೋಟಿ ರೂ. ಅನುದಾನಕ್ಕಾಗಿ ಲಕ್ಷ್ಮೀ ಹೆಬ್ಬಾಳ್ಕರ್, ರಾಜು ಸೇಠ್ ಮತ್ತು ನಾನು ಬಡಿದಾಡುತ್ತಿದ್ದೇವೆ. ಆನೆ ಹೋಗಿದೆ, ಕೇವಲ ಬಾಲ ಮಾತ್ರ ಉಳಿದಿದೆ ಎಂದರು.


Spread the love

About Laxminews 24x7

Check Also

ಸೌಕರ್ಯ, ಸಿಬ್ಬಂದಿ: ಕೊರತೆ ಆಸ್ಪತ್ರೆಗೇ ಬೇಕಿದೆ ಚಿಕಿತ್ಸೆ!

Spread the love ಚಿಕ್ಕೋಡಿ: ಪಟ್ಟಣದ ಹೊರವಲಯದಲ್ಲಿ ₹20 ಕೋಟಿ ವೆಚ್ಚದಲ್ಲಿ ಐದು ಎಕರೆಯಲ್ಲಿ ತಲೆ ಎತ್ತಿರುವ ತಾಯಿ ಮತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ