Breaking News

ನನ್ನ ಝಂಡಾ ಬದಲಾವಣೆ ಆಗಬಹುದು, ಅಜೆಂಡಾ ಬದಲಾಗಲ್ಲ: ಹೆಚ್.ವಿಶ್ವನಾಥ್​

Spread the love

ಬೆಳಗಾವಿ: ನನ್ನ ಝಂಡಾ ಬದಲಾವಣೆ ಆಗಬಹುದು ಆದರೆ, ಅಜೆಂಡಾ ಬದಲಾಗದು ಎಂದು ಬಿಜೆಪಿ ಎಂಎಲ್​ಸಿ ಹೆಚ್. ವಿಶ್ವನಾಥ್​ ಹೇಳಿದ್ದಾರೆ. ನನ್ನ ರಕ್ತದ ಕಣಕಣದಲ್ಲೂ ಕಾಂಗ್ರೆಸ್​ ಇದ್ದು, ಬಿಜೆಪಿ ತೊರೆಯುವ ಕಾಲ ಸನ್ನಿಹಿತವಾಗಿದೆ ಎಂಬ ಅವರ ಹೇಳಿಕೆ ಕುರಿತು ಬೆಳಗಾವಿಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿ, ಸಂದರ್ಭಗಳು ಹಾಗು ಹಲವಾರು ಕಾರಣಗಳಿಂದ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಬೇಕಾಯಿತು ಎಂದರು.

 

ವಲಸಿಗರಿಂದ ಬಿಜೆಪಿ ಹಾಳಾಯ್ತು ಎಂದು ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಕೆಂಡಾಮಂಡರಾದ ಹೆಚ್.ವಿಶ್ವನಾಥ್​, ಅವನು ಕೆ.ಎಸ್.ಈಶ್ವರಪ್ಪ ಅಲ್ಲ, ಹೆಚ್.ಎಂ.ಈಶ್ವರಪ್ಪ. ಹೆಚ್.ಎಂ.ಅಂದ್ರೆ ಹುಚ್ಚುಮುಂಡೇದು ಅಂತಾ ಎಂದು ಕಿಡಿಕಾರಿದರು.

ಭಾಷಣ ವೇಳೆ ಜವಾಹರಲಾಲ್ ನೆಹರು ಹೊಗಳಿದ ವಿಚಾರಕ್ಕೆ ಬೆಳಗಾವಿ ಅಧಿವೇಶನದ ಸದನದಲ್ಲಿ ಬಿಜೆಪಿ ಎಂಎಲ್‌ಸಿ ರವಿಕುಮಾರ್​ ಭಾಷಣ ಮಾಡಿದ್ದರು. ಈ ದೇಶದ ಕಡುಭ್ರಷ್ಟ ಪ್ರಧಾನಿ ನೆಹರು ಅಂದಿದ್ರು, ಎಲ್ಲಾದರೂ ಉಂಟಾ ಅದು?. ನಾನದಕ್ಕೆ ಹೇಳಿದ್ದೆ ನೋಡಪ್ಪ ಬ್ರಿಟಿಷರು ಭಾರತ ಬಿಟ್ಟು ಹೋದಾಗ ಭಾರತದ ಜನಸಂಖ್ಯೆ 33 ಕೋಟಿ ಇತ್ತು. ನಾವು ಶಾಲೆಯಲ್ಲಿ ಇರಬೇಕಾದ್ರೆ ಅಮೆರಿಕದ ಜೋಳ, ಗೋಧಿಯಲ್ಲಿ ಉಪ್ಪಿಟ್ಟು ಮಾಡಿಕೊಡುತ್ತಿದ್ದರು ಎಂದು ನೆನಪಿಸಿದರು.

ಅದಕ್ಕೆ ನಾನು ಅವರಿಗೆ ನಿಮ್ಮ ತಂದೆನೋ, ತಾತನೋ ಇದ್ರೆ ಕೇಳು ಅಂದೆ. 9 ವರ್ಷದಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿ ಕರ್ನಾಟಕದ ರಾಜಧಾನಿಗೆ ಏನು ಕೊಟ್ರಿ, ಏನೂ ಕೊಡಲಿಲ್ಲ. ಜವಾಹರಲಾಲ್ ನೆಹರು ರಾಜ್ಯದ ರಾಜಧಾನಿ ಬೆಂಗಳೂರಿಗೆ ನವರತ್ನ ಕೊಟ್ರು. ಹೆಚ್‌ಎಂಟಿ, ಹೆಚ್‌ಎಎಲ್, ಡಿಆರ್‌ಡಿಓ, ನಿಮ್ಹಾನ್ಸ್ ಸೇರಿ ನವರತ್ನ ಕೊಟ್ಟು ಉದ್ಯೋಗಾವಕಾಶ ಕೊಟ್ಟವರು ನೆಹರು. ಈ ರೀತಿ ಮಾತನಾಡಬಾರದು, ಸದನದ ಸದಸ್ಯ ಗಂಭೀರವಾಗಿ ಮಾತನಾಡಬೇಕು ಎಂದಿದ್ದೆ ಎಂದು ಹೆಚ್. ವಿಶ್ವನಾಥ್​ ಹೇಳಿದರು.

ಬಿಜೆಪಿಗೆ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ ಮಾಡಲು ಆಗುತ್ತಿಲ್ಲ ಎಂಬ ಕಾಂಗ್ರೆಸ್ ಟೀಕೆ ಕುರಿತು ಮಾತನಾಡಿ, ಬಿಜೆಪಿ ಯಾವುದೇ ಕಾರಣಕ್ಕೂ ಮತ್ತೆ ಅಧಿಕಾರಕ್ಕೆ ಬರಲ್ಲ, ಬಂದೂ ಇಲ್ಲ. ಒಂದ್ಸಾರಿ ಕುಮಾರಸ್ವಾಮಿ ಹೆಗಲು ಮೇಲೆ ಕುಳಿತುಕೊಂಡು ಬಂದರು. ಒಂದ್ಸಾರಿ ನಮ್ಮ ಹೆಗಲ ಮೇಲೆ ಕುಳಿತುಕೊಂಡು ಬಂದು ಅಧಿಕಾರ ಮಾಡಿದ್ದರು. ಸ್ವಂತ ಬಲದ ಮೇಲೆ ಬಿಜೆಪಿ ಯಾವತ್ತಾದರೂ ಅಧಿಕಾರಕ್ಕೆ ಬಂದಿದೆಯಾ?. ಬಿಜೆಪಿ ಮುಂದೆ ಅಧಿಕಾರಕ್ಕೆ ಬರೋದು ಇಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.


Spread the love

About Laxminews 24x7

Check Also

ಸೌಕರ್ಯ, ಸಿಬ್ಬಂದಿ: ಕೊರತೆ ಆಸ್ಪತ್ರೆಗೇ ಬೇಕಿದೆ ಚಿಕಿತ್ಸೆ!

Spread the love ಚಿಕ್ಕೋಡಿ: ಪಟ್ಟಣದ ಹೊರವಲಯದಲ್ಲಿ ₹20 ಕೋಟಿ ವೆಚ್ಚದಲ್ಲಿ ಐದು ಎಕರೆಯಲ್ಲಿ ತಲೆ ಎತ್ತಿರುವ ತಾಯಿ ಮತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ