Breaking News

“ನಾರ್ಮಲ್ ಹೆರಿಗೆಗಳನ್ನು ಮಾಡಿಸಬೇಕು. ಅನಿವಾರ್ಯ ಸಂದರ್ಭವಿದ್ದಾಗ ಮಾತ್ರ ಸಿಜೇರಿಯನ್ ಮಾಡಬೇಕು. :ದಿನೇಶ್ ಗುಂಡೂರಾವ್,

Spread the love

ಮೈಸೂರಿನ ಕೆ.ಆರ್.ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗೆ ಸಚಿವ ದಿನೇಶ್ ಗುಂಡೂರಾವ್, ಶಾಸಕರಾದ ಕೆ. ಹರೀಶ್ ಗೌಡ ಹಾಗು ಅನಿಲ್ ಚಿಕ್ಕಮಾದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೈಸೂರು : ನಗರದ ಜಿಲ್ಲಾಸ್ಪತ್ರೆಗೆ ಇಂದು ಭೇಟಿ ಕೊಟ್ಟ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಹೆರಿಗೆ ವಾರ್ಡ್‌ನಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯ ವಿಚಾರಿಸಿದರು.

“ನಾರ್ಮಲ್ ಹೆರಿಗೆಗಳನ್ನು ಮಾಡಿಸಬೇಕು. ಅನಿವಾರ್ಯ ಸಂದರ್ಭವಿದ್ದಾಗ ಮಾತ್ರ ಸಿಜೇರಿಯನ್ ಮಾಡಬೇಕು. ರೋಗಿಗಳಿಗೆ ಹೊರಗೆ ಔಷಧಿ ತೆಗೆದುಕೊಂಡು ಬನ್ನಿ ಎಂದು ಚೀಟಿ ಬರೆದುಕೊಡಬಾರದು” ಎಂದು ಸಚಿವರು ಆಸ್ಪತ್ರೆಯ ಅಧೀಕ್ಷಕರಿಗೆ ಸೂಚನೆ ನೀಡಿದರು.

 ರೋಗಿಗಳೊಂದಿಗೆ ಮಾತುಕತೆ ನಡೆಸುತ್ತಿರುವ ಸಚಿವ ದಿನೇಶ್ ಗುಂಡೂರಾವ್ಮೈಸೂರು ಪ್ರವಾಸದಲ್ಲಿರುವ ದಿನೇಶ್ ಗುಂಡೂರಾವ್ ಅವರು, ಕೆ.ಆರ್. ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾ ಆಸ್ಪತ್ರೆಯ ವಾರ್ಡ್‌ಗಳಿಗೆ ಭೇಟಿ ನೀಡಿ ರೋಗಿಗಳ ಯೋಗಕ್ಷೇಮ ವಿಚಾರಿಸಿದರು. ಸ್ವಚ್ಛತೆ ಕಾಪಾಡಿಕೊಂಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


Spread the love

About Laxminews 24x7

Check Also

ಇಟ್ಟಿಗೆ ತುಂಬಿದ ಟ್ರ‍್ಯಾಕ್ಟರ್ -‌ ಟ್ರೇಲರ್ ಮಧ್ಯೆ ಸಿಲುಕಿ ಚಾಲಕ ದುರ್ಮರಣ

Spread the loveಹಾವೇರಿ: ಇಟ್ಟಿಗೆ ತುಂಬಿದ ಟ್ರ‍್ಯಾಕ್ಟರ್  ಮತ್ತು ಟ್ರೇಲರ್ ನಡುವೆ ಸಿಲುಕಿ ಚಾಲಕ  ಸಾವನ್ನಪ್ಪಿರುವ ಘಟನೆ ಹಾವೇರಿ  ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ