ನವದೆಹಲಿ: ಶನಿವಾರ ರಾತ್ರಿಯಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನವದೆಹಲಿಯ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ಗೆ ಮಳೆ ನೀರು ನುಗ್ಗಿದೆ.
ಈ ವೇಳೆ ಮಹಿಳೆಯೊಬ್ಬರು ವಿದ್ಯುತ್ ಕಂಬವನ್ನು ಸ್ಪರ್ಶಿಸಿ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಪೂರ್ವ ದೆಹಲಿಯ ಪ್ರೀತ್ ವಿಹಾರ್ ನಿವಾಸಿ ಸಾಕ್ಷಿ ಅಹುಜಾ ಎಂದು ಗುರುತಿಸಲಾಗಿದೆ.
ಸಾಕ್ಷಿ ಅಹುಜಾ ಅವರು ತಮ್ಮ ಕುಟುಂಬ ಸದಸ್ಯರು ಮತ್ತು ಮೂವರು ಮಕ್ಕಳೊಂದಿಗೆ ಬೆಳಗ್ಗೆ 5.30 ಕ್ಕೆ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ. ನೀರಿನಿಂದ ತುಂಬಿದ ಪ್ಲಾಟ್‌ಫಾರ್ಮ್‌ನಲ್ಲಿ ನಡೆಯಲು ಆಸರೆಯಾಗಿ ವಿದ್ಯುತ್ ಕಂಬವನ್ನು ಹಿಡಿದಿದ್ದಾರೆ. ತಕ್ಷಣ ಅವರು ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಾರೆ. ನಂತರ ಅದು ಸಾಕ್ಷಿ ಸಾವಿಗೆ ಕಾರಣವಾಗಿದೆ.
ನವದೆಹಲಿಯ ರೈಲು ನಿಲ್ದಾಣದ ನಿರ್ಗಮನ ಸಂಖ್ಯೆ ಒಂದರ ಬಳಿ ಈ ದುರ್ಘಟನೆ ಸಂಭವಿಸಿದೆ. ವಿಷಯ ತಿಳಿದು ಕುಟುಂಬಸ್ಥರು ಸ್ಥಳಕ್ಕಾಗಮಿಸಿದಾಗ ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ಕಂಡುಕೊಂಡಿದ್ದಾರೆ. “ತಕ್ಷಣ ಅವರ ಸಹೋದರಿ ಮಾಧ್ವಿ ಚೋಪ್ರಾ ಗಾಯಗೊಂಡ ಸಾಕ್ಷಿ ಅಹುಜಾ ಅವರನ್ನು ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು” ಎಂದು ಪೊಲೀಸರು ತಿಳಿಸಿದ್ದಾರೆ.
Laxmi News 24×7