Breaking News
Home / Uncategorized / ಮೋದಿ ಜನಪ್ರಿಯತೆ ಮಂಕಾಗಿದೆ, ಕರ್ನಾಟಕದಲ್ಲಿ ಮೋದಿ ವರ್ಚಸ್ಸು ನಂಬಿದ್ದ ಬಿಜೆಪಿ ಧೂಳಿಪಟ ಆಯ್ತು: ಸಿಎಂ ಸಿದ್ದರಾಮಯ್ಯ

ಮೋದಿ ಜನಪ್ರಿಯತೆ ಮಂಕಾಗಿದೆ, ಕರ್ನಾಟಕದಲ್ಲಿ ಮೋದಿ ವರ್ಚಸ್ಸು ನಂಬಿದ್ದ ಬಿಜೆಪಿ ಧೂಳಿಪಟ ಆಯ್ತು: ಸಿಎಂ ಸಿದ್ದರಾಮಯ್ಯ

Spread the love

ಚಿಕ್ಕೋಡಿ: ಕರ್ನಾಟಕ ರಾಜ್ಯ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದ ಜನರಿಗೆ ಐದು ಭರವಸೆಗಳನ್ನು ನೀಡಿದ್ದೇವೆ. ಅದರಲ್ಲಿ ಅನ್ನಭಾಗ್ಯ ಯೋಜನೆಯಡಿ ಬಡವರಿಗೆ 10 ಕೆಜಿ ಅಕ್ಕಿಯನ್ನು ನೀಡಲು ನಾವು ಘೋಷಣೆ ಮಾಡಿದ್ದೀವಿ. ಆದರೆ ಕೇಂದ್ರ ಸರ್ಕಾರ ಅಕ್ಕಿಯನ್ನು ನೀಡುತ್ತಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಕೇಳಿದರೆ ಅಕ್ಕಿ ಕೊಡುವುದಕ್ಕೆ ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆ ಮಹಾರಾಷ್ಟ್ರದ ಸಾಂಗ್ಲಿ ನಗರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಅವರು ಮಾತನಾಡಿದರು. ಕೇಂದ್ರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ರೋಶ ಹೊರಹಾಕಿದರು. ಕಾಂಗ್ರೆಸ್ ಸರ್ಕಾರದಿಂದ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಕರ್ನಾಟದಲ್ಲಿ 12ನೇ ಶತಮಾನದಲ್ಲಿ ಬಸವಣ್ಣನವರು ಕ್ರಾಂತಿಕಾರಿ ಬದಲಾವಣೆ ಮಾಡಿದರು. ಇಲ್ಲಿ ಕೂಡ ಸಾವಿತ್ರಿಬಾಯಿ ಫುಲೆ, ಶಾಹು ಮಹಾರಾಜರ, ಅಂಬೇಡ್ಕರ್, ಹಲವು ಬದಲಾವಣೆ ತಂದು ಸಾಮಾಜಿಕ ಕ್ರಾಂತಿ ಮಾಡಿದರು.

ಒಂದು ವೇಳೆ ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ರಚನೆ ಮಾಡದಿದ್ದರೆ ನಾನು ಇಲ್ಲಿ ಬರುತ್ತಿರಲಿಲ್ಲ, ನಾನು ಸಿಎಂ ಆಗುತ್ತಿರಲಿಲ್ಲ, ಅಂಬೇಡ್ಕರ್ ಸಂವಿಧಾನ ಕೊಡುಗೆಯಿಂದ ಬಡವರು ದೀನ ದಲಿತರು ಆರ್ಥಿಕವಾಗಿ ಬೆಳೆಯಲು ಕಾರಣವಾಗಿದೆ. ಸಮಾನತೆ ತತ್ವದಡಿ ಸಮಾಜ ಬೆಳೆಯುವುದಕ್ಕೆ ಸಂವಿಧಾನ ಕಾರಣವಾಗಿದೆ. ನಮ್ಮ ಸಂವಿಧಾನ ಸಮಾನತೆಯನ್ನು ನೋಡಿಕೊಳ್ಳುತ್ತದೆ ಎಂಬ ಕಾರಣಕ್ಕೆ ಬಿಜೆಪಿಯವರು ಸಂವಿಧಾನ ವಿರೋಧ ಮಾಡುತ್ತಾ ಬಂದಿದೆ. ಸಾವರ್ಕರ್ ಸಂವಿಧಾನ ವಿರೋಧ ಮಾಡಿದರು. ಈಗಲೂ ಬಿಜೆಪಿಯವರು ಸಂವಿಧಾನ ವಿರೋಧ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಕಾಂಗ್ರೆಸ್ ನವರು ಸಂವಿಧಾನ ಉಳಿವಿಗಾಗಿ ಶಪಥ ಮಾಡಬೇಕು, ಸಂವಿಧಾನ ಉಳಿದರೆ ನಾವು ಉಳಿಯುವುದಕ್ಕೆ ಸಾಧ್ಯ. ಸಂವಿಧಾನ ಒಂದು ವೇಳೆ ಬದಲಾವಣೆ ಆದರೆ ನಾವು ಯಾರೂ ಉಳಿಯುವುದಿಲ್ಲ. ನಮ್ಮ ಸಂವಿಧಾನ ಉಳಿವಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧತೆ ಆಗಬೇಕು. ಬಿಜೆಪಿಯವರು ಧರ್ಮ ಧರ್ಮದ ನಡುವೆ ಕೋಮುವಾದ ಜಗಳ ಹಚ್ಚಿದ್ದಾರೆ, ಇದರಿಂದ ಜಾಗೃತಿ ವಹಿಸಬೇಕಾಗಿದೆ. ಸಂಘ ಪರಿವಾರದವರು ಜನರ ನಡುವೆ ಧರ್ಮ ಧರ್ಮದ ನಡುವೆ ಅಶಾಂತಿ ಮೂಡಿಸಿದ್ದಾರೆ ಎಂದು ಸಿದ್ದರಾಮಯ್ಯ ದೂರಿದರು.

ದೇಶದಲ್ಲಿ ಹಲವು ರಾಜ್ಯ ಹಾಗೂ ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅವರನ್ನು ಕಿತ್ತೊಗೆಯಬೇಕು. ಕರ್ನಾಟಕದಲ್ಲಿ ಚುನಾವಣೆ ನಡೆದಾಗ ಜನರು ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿ ಬಿಜೆಪಿ ಕಿತ್ತು ಹಾಕಿದರು. ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್​​ನ 135 ಶಾಸಕರನ್ನು ಜನರು ಗೆಲ್ಲಿಸಿದ್ದಾರೆ. ಕರ್ನಾಟದಲ್ಲಿ ಯಾವತ್ತೂ ಬಿಜೆಪಿ ಜನರ ಆಶೀರ್ವಾದಿಂದ ಅಧಿಕಾರಕ್ಕೆ ಬಂದಿಲ್ಲ, ಆಪರೇಷನ್ ಕಮಲ ಮಾಡುವ ಮೂಲಕ ಅವರು ಅಧಿಕಾರಕ್ಕೆ ಬಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಕೋಟ್ಯಂತರ ರೂಪಾಯಿ ಶಾಸಕರಿಗೆ ನೀಡಿ ಖರೀದಿ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಬಿಜೆಪಿ ಅಂದ್ರೆ ಭ್ರಷ್ಟಾಚಾರ, ಕರ್ನಾಟಕದಲ್ಲಿ ಗುತ್ತಿಗೆದಾರ ಸಂಘ 40% ಸರ್ಕಾರ ಎಂದು ಕರೆದಾಗ, ವಿರೋಧ ಪಕ್ಷದ ನಾಯಕನಾಗಿದ್ದೆನು. ಆದರೆ ನಾನು ಆ ರೀತಿ ಕರೆಯಲಿಲ್ಲ, ಅದನ್ನು ಗುತ್ತಿಗೆದಾರ ಸಂಘ ಆ ರೀತಿ ಹೇಳಿದೆ. ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ, ಡಿಸಿಎಂ ಫಡ್ನವಿಸ್ ಸರ್ಕಾರ ಭ್ರಷ್ಟ ಸರ್ಕಾರ ಎಂದು ನಾನು ಕೇಳಿದ್ದೇನೆ. ಈ ಭ್ರಷ್ಟ ಸರ್ಕಾರ ತೆಗೆದು ಹಾಕುವ ಸಮಯ ಬಂದಿದೆ ಎಂದು ಸಿದ್ದರಾಮಯ್ಯ ಕರೆ ನೀಡಿದರು.


Spread the love

About Laxminews 24x7

Check Also

ರೈತರಿಗೆ ಹಾಲಿನ ಪ್ರೋತ್ಸಾಹಧನ ಬಿಡುಗಡೆ ಮಾಡುವಂತೆ ಒತ್ತಾಯ

Spread the love ಬೆಳಗಾವಿ: ರಾಜ್ಯ ಸರ್ಕಾರ ರೈತರಿಗೆ ಶೀಘ್ರವೇ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ