Breaking News

ಇಂದು ನಾದಬ್ರಹ್ಮ ಹಂಸಲೇಖ ಅವರ 72ನೇ ವರ್ಷದ ಜನ್ಮದಿನ

Spread the love

ಇಂದು ನಾದಬ್ರಹ್ಮ ಹಂಸಲೇಖ ಅವರ 72ನೇ ವರ್ಷದ ಜನ್ಮದಿನ. ಈ ವಿಶೇಷ ದಿನದಂದು ಸಂಗೀತ ಮಾಂತ್ರಿಕನ ಸಾಧನೆಯ ಕಿರು ಪರಿಚಯ ನಿಮಗಾಗಿ..

ಸಂಗೀತ ಲೋಕದ ದೇವರು, ನಾದಬ್ರಹ್ಮ ಹಂಸಲೇಖ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 1951ರ ಜೂನ್​ 23ರಂದು ಜನಿಸಿದ ಇವರು 72ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

ಹಂಸಲೇಖ ಎಂದಾಕ್ಷಣ ನಮ್ಮ ಮುಂದೆ ಸುಂದರ ಸಂಗೀತ ಲೋಕವೇ ಅನಾವರಣಗೊಳ್ಳುತ್ತದೆ. ಭಾರತೀಯ ಚಿತ್ರರಂಗದ ಪ್ರಸಿದ್ಧ ಸಂಗೀತ ನಿರ್ದೇಶಕದಲ್ಲಿ ಹಂಸಲೇಖ ಒಬ್ಬರು. ಇವರ ಸಂಗೀತಕ್ಕೆ ತಲೆದೂಗದವರಿಲ್ಲ.

ಸಂಗೀತ ಮಾಂತ್ರಿಕ ಜನನ: ಸಂಗೀತ ಲೋಕದ ಮಹಾಗುರು ಹಂಸಲೇಖ ಅವರ ಮೂಲ ಹೆಸರು ಗಂಗರಾಜು. ವಿದ್ಯಾಭ್ಯಾಸ ಮುಗಿಸಿದ ಬಳಿಕ ಆರಂಭದಲ್ಲಿ ತನ್ನ ತಂದೆಯ ಪ್ರಿಂಟಿಂಗ್ ಪ್ರೆಸ್​ನಲ್ಲಿ ಕೆಲಸ ಮಾಡಲು ಆರಂಭಿಸಿದರು. ಬಳಿಕ ತನ್ನ ಅಣ್ಣನ ಆರ್ಕೆಸ್ಟ್ರಾ ತಂಡವನ್ನು ಸೇರಿದರು. ಆರ್ಕೆಸ್ಟ್ರಾ ತಂಡ ಸೇರಿಕೊಂಡ ಬಳಿಕ ಹಂಸಲೇಖ ಅವರು ಕವನಗಳನ್ನು ಬರೆಯುವುದು, ಅದಕ್ಕೆ ರಾಗ ಸಂಯೋಜಿಸುವುದನ್ನು ಅಭ್ಯಾಸ ಮಾಡಿಕೊಂಡರು. ಇದು ಅವರ ಸಂಗೀತ ಪಯಣಕ್ಕೆ ಅಡಿಗಲ್ಲು ಹಾಕಿಕೊಟ್ಟಿತು.

ತಮ್ಮ ಗುರುಗಳಾದ ಲಾವಣಿ ನೀಲಕಂಠಪ್ಪ ನೀಡಿದ ‘ಸ್ವಾನ್’ (ಹಂಸ) ಕಂಪನಿಯ ಲೇಖನಿಯಿಂದ ಕವಿತೆಗಳನ್ನು ಬರೆಯುತ್ತಿದ್ದರಿಂದ ಸ್ವತಃ ‘ಹಂಸಲೇಖನಿ’ ಎಂದು ಹೆಸರು ಬದಲಿಸಿಕೊಂಡರು. ಕೆಲವು ದಿನಗಳ ನಂತರ ಅವರ ಗುರುಗಳು ಆ ಹೆಸರನ್ನು ‘ಹಂಸಲೇಖ’ ಎಂದು ಬದಲಿಸಿದರು. ಅಂದಿನಿಂದ ಇಂದಿನಿವರೆಗೂ ಗೋವಿಂದರಾಜು ಹಂಸಲೇಖ ಆಗಿಯೇ ಸಂಗೀತ ಪ್ರೇಮಿಗಳ ಮನಸಲ್ಲಿ ನೆಲೆಸಿದ್ದಾರೆ.

ನಾದಬ್ರಹ್ಮ ಸಂಗೀತ ಪಯಣ: ಹಂಸಲೇಖ ಅವರು ಕೇವಲ ಸಂಗೀತ ನಿರ್ದೇಶಕರು ಮಾತ್ರವಲ್ಲ, ಅವರೊಬ್ಬ ಅದ್ಭುತ ಪದಪುಂಜಗಳನ್ನು ಪೋಣಿಸುವ ಸಾಹಿತಿ ಕೂಡ ಆಗಿದ್ದಾರೆ. ಹಲವು ಚಿತ್ರಗಳಿಗೆ ಸಾಹಿತ್ಯ ರಚನೆ ಮಾಡಿದ್ದಾರೆ. 1973 ರಲ್ಲಿ ನಿರ್ದೇಶಕ ಎಂ.ಎನ್​ ಪ್ರಸಾದ್ ಅವರು ಹಂಸಲೇಖ ಅವರಿಗೆ ಮೊಟ್ಟ ಮೊದಲ ಬಾರಿಗೆ ಚಿತ್ರವೊಂದಕ್ಕೆ ಹಾಡು ರಚಿಸುವ ಅವಕಾಶ ಕೊಟ್ಟರು. ತ್ರಿವೇಣಿ ಸಂಗಮ ಚಿತ್ರದ ನೀನಾ ಭಗವಂತ ಹಾಡು ಹಂಸಲೇಖ ಅವರು ಮೊದಲು ಸಂಗೀತ ಸಂಯೋಜಿಸಿದ ಹಾಡು.

1985ರಲ್ಲಿ ಬಿಡುಗಡೆಯಾದ ರವಿಚಂದ್ರನ್​ ಅಭಿನಯದ ನಾನು ನನ್ನ ಹೆಂಡ್ತಿ ಸಿನಿಮಾಗೆ ಸಂಭಾಷಣೆಗಾರ ಹಾಗೂ ಗೀತ ಸಾಹಿತಿಯಾಗಿ ಅವರು ಸಿನಿಮಾ ಕೆರಿಯರ್​ ಆರಂಭಿಸಿದರು. 1987 ರಲ್ಲಿ ಬಿಡುಗಡೆಯಾದ ಪ್ರೇಮಲೋಕ ಸಿನಿಮಾ ಅವರಿಗೆ ಖ್ಯಾತಿ ತಂದುಕೊಟ್ಟಿತು. ಹಂಸಲೇಖ ಅವರ ಪತ್ನಿ ಲತಾ ಹಂಸಲೇಖ ಕೂಡಾ ಗಾಯಕಿ. ದಂಪತಿಗೆ ಅಲಂಕಾರ್ ಎಂಬ ಪುತ್ರ ತೇಜಸ್ವಿನಿ ಹಾಗೂ ನಂದಿನಿ ಎಂಬ ಇಬ್ಬರು ಪುತ್ರಿಯರಿದ್ದಾರೆ.

‘ಸ್ಪರ್ಶ’, ‘ಆಕಸ್ಮಿಕ’ , ‘ಹಾಲುಂಡ ತವರು’, ‘ನಾನು ನನ್ನ ಕನಸು’, ‘ರಸಿಕ’, ‘ಗಟ್ಟಿಮೇಳ’, ‘ರಾಜಾಹುಲಿ’ ‘ಗಾನಯೋಗಿ ಪಂಚಾಕ್ಷರಿ ಗವಾಯಿ’ ಸೇರಿ ಬಹಳಷ್ಟು ಸಿನಿಮಾದ ಹಾಡುಗಳಿಗೆ ಹಂಸಲೇಖ ಸಂಗೀತ ನೀಡಿದ್ದಾರೆ. ‘ಶ್ರೀ ಮಂಜುನಾಥ’, ‘ಹಾಲುಂಡ ತವರು’ ಸೇರಿ ಬಹಳಷ್ಟು ಸಿನಿಮಾದ ಹಾಡುಗಳಿಗೆ ಸಾಹಿತ್ಯ ಕೂಡಾ ರಚಿಸಿದ್ದಾರೆ. ಹಂಸಲೇಖ ಅವರು ಕನ್ನಡ ಮಾತ್ರವಲ್ಲದೇ ಮಲಯಾಳಂ, ತೆಲುಗು ಮತ್ತು ತಮಿಳು ಸೇರಿ ಒಟ್ಟು 500 ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನಿದೇರ್ಶನ ಮಾಡಿದ್ದಾರೆ. ಸಂಗೀತ ಲೋಕದ ಸಾಧನೆಗಾಗಿ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಕೂಡ ಇವರನ್ನು ಅರಸಿ ಬಂದಿವೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ