ಬೆಳಗಾವಿ ಜಿಲ್ಲೆಯ ರಾಯಭಾಗ ಪಟ್ಟಣದಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ತಾಯಿ ಮತ್ತು ಬಾಲಾಪರಾಧಿ ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಚಿಕ್ಕೋಡಿ: ತಾಯಿಗಿಂತ ಮಿಗಿಲಾದ ದೇವರಿಲ್ಲ ಅಂತಾರೆ. ಆದರೆ, ಇಲ್ಲಿ ತಾಯಿಯೇ ಬೆಳೆದು ನಿಂತ ಮಗನ ಜೀವ ತೆಗೆದು ಇದೀಗ ಜೈಲುಪಾಲಾಗಿರುವ ವಿಲಕ್ಷಣ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಯಭಾಗ ಪಟ್ಟಣದ ನಿವಾಸಿ ಹರಿಪ್ರಸಾದ್ ಬೋಸ್ಲೆ (21) ಕೊಲೆಯಾದ ಯುವಕ. ಸುಧಾ ಬೋಸ್ಲೆ ಜೈಲುಪಾಲಾದ ತಾಯಿ. ಕೊಲೆಗೆ ಸಹಕರಿಸಿದ ವೈಶಾಲಿ ಸುಲೀನ ಮಾನೆ, ಗೌತಮ್ ಸುನೀಲ್ ಮಾನೆ, ಹಾಗೂ ಒಬ್ಬ ಬಾಲಾಪರಾಧಿ ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುವುದಾಗಿ ಬೆಳಗಾವಿ ಎಸ್ಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, ಆರಂಭದಲ್ಲಿ ಈ ಪ್ರಕರಣವನ್ನು ಸಹಜ ಸಾವೆಂದು ಪರಿಗಣಿಸಿಸಲಾಗಿತ್ತು. ಆದರೆ, ಕೊಲೆಗೀಡಾದ ಯುವಕನ ಸಂಬಂಧಿಕರು ಸಂಶಯಗೊಂಡು ರಾಯಭಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅದರಂತೆಯೇ ತನಿಖೆ ಕೈಗೊಂಡಾಗ ತಾಯಿ ಸುಧಾ ಬೋಸ್ಲೆಯೇ ಪುತ್ರ ಹರಿಪ್ರಸಾದ್ ಬೋಸ್ಲೆ ಅವರನ್ನು ಕೊಲೆ ಮಾಡಿರುವುದು ಗೊತ್ತಾಗಿದೆ. ಅಲ್ಲದೇ ಈ ಕೊಲೆಗೆ ಸಹಕರಿಸಿದ ಓರ್ವ ಬಾಲಾಪರಾಧಿ ಸೇರಿದಂತೆ ವೈಶಾಲಿ ಸುಲೀನ ಮಾನೆ, ಗೌತಮ್ ಸುನೀಲ್ ಮಾನೆ ಎಂಬುವರನ್ನು ಬಂಧಿಸಿರುವುದಾಗಿ ಅವರು ತಿಳಿಸಿದ್ದಾರೆ.