Breaking News

ಹೊಸ ಲುಕ್​ನಲ್ಲಿ ಯೋಗರಾಜ್ ಭಟ್

Spread the love

ಯೋಗರಾಜ್​ ಭಟ್ ಕರಟಕ ದಮನಕ ಸಿನಿಮಾದಲ್ಲಿ ಅಜ್ಜಯ್ಯ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹೊಸ ಲುಕ್​ನಲ್ಲಿ ಯೋಗರಾಜ್ ಭಟ್
ಮಧುರವಾದ ಪ್ರೇಮಕಥೆ ಜೊತೆಗೆ ಫಿಲಾಸಫಿ ಮೂಲಕ ಕನ್ನಡ ಚಿತ್ರರಂಗದಲ್ಲಿ ವಿಕಟಕವಿ ಎಂದೇ ಜನಪ್ರಿಯರಾಗಿರುವ ನಿರ್ದೇಶಕ ಯೋಗರಾಜ್ ಭಟ್.

ಸದ್ಯ ಗರಡಿ ಸಿನಿಮಾ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಗರಡಿ ಚಿತ್ರದ ಮೊದಲ ಹಾಡನ್ನು ಭಟ್ರು ಅನಾವರಣಗೊಳಿಸಿದ್ದಾರೆ.

ತಮಟೆ ಬಾರಿಸುವ ಮೂಲಕ ತಮ್ಮ ಗರಡಿ ಚಿತ್ರದ ಪ್ರಚಾರ ಮಾಡಿದ ಭಟ್ರ ಹೊಸ ಅವತಾರಕ್ಕೆ ಸಿನಿ ಸ್ನೇಹಿತರು, ಅಭಿಮಾನಿಗಳು ಹುಬ್ಬೇರಿಸಿದ್ದಾರೆ‌. ಈವರೆಗೂ ಮೀಸೆಯಲ್ಲೇ ಕಾಣಿಸಿಕೊಂಡಿದ್ದ ಭಟ್ರು ಇದೇ ಮೊದಲ ಬಾರಿಗೆ ಮೀಸೆ ತೆಗೆದಿದ್ದಾರೆ. ಅವರ ಈ ಹೊಸ ಅವತಾರದ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ.

ಕರಟಕ ದಮನಕ ಸಿನಿಮಾದಲ್ಲಿ ನಟನೆ
ಅಷ್ಟಕ್ಕೂ ಡೈರೆಕ್ಟರ್​ ಯೋಗರಾಜ್​ ಭಟ್​ ಮೀಸೆ ತೆಗೆದಿರೋದು ಯಾಕೆ ಗೊತ್ತಾ?. ಒಂದು ಪಾತ್ರಕ್ಕಾಗಿ ಎಂದರೆ ನೀವು ನಂಬಲೇಬೇಕು. ಹೌದು, ಯೋಗರಾಜ್​​ ಭಟ್ಟರಿಗೆ ಅಭಿನಯ ಹೊಸದಲ್ಲ. ಈಗಾಗಲೇ ದೇವ್ರು ಚಿತ್ರದಿಂದ ಹಿಡಿದು ಹಲವು ಚಿತ್ರಗಳಲ್ಲಿ ಅವರು ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಲೇ ಬಂದಿದ್ದಾರೆ. ಇದೀಗ ಅವರು ದೊಡ್ಡದೊಂದು ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ಅದೇ ಪಾತ್ರದ ಗೆಟಪ್​ಗಾಗಿ ಅವರು ಮೀಸೆ ತೆಗೆದಿದ್ದಾರಂತೆ

ನಿರ್ದೇಶಕ ಯೋಗರಾಜ್ ಭಟ್
ಯೋಗರಾಜ್ ಭಟ್ ಮೀಸೆ ತೆಗೆದು ಹೊಸ‌ ಲುಕ್​ನಲ್ಲಿ ಕಾಣಿಸಿಕೊಂಡಿರೋ ಪರಿಣಾಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಅಂದ ಹಾಗೆ, ಭಟ್ಟರು ಮೀಸೆ ತೆಗೆದಿದ್ದು ತಮ್ಮದೇ ‘ಕರಟಕ ದಮನಕ’ ಚಿತ್ರಕ್ಕಾಗಿ. ಶಿವ ರಾಜ್​ಕುಮಾರ್​ ಮತ್ತು ಪ್ರಭುದೇವ ಅಭಿನಯದಲ್ಲಿ ಯೋಗರಾಜ್​ ಭಟ್​ ಈ ‘ಕರಟಕ ದಮನಕ’ ಚಿತ್ರವನ್ನು ನಿರ್ದೇಶಿಸುತ್ತಿರುವುದು ನಿಮಗೆ ಗೊತ್ತೇ ಇದೆ. ಆ ಚಿತ್ರದಲ್ಲಿ ಅವರು ಅಜ್ಜಯ್ಯ ಎಂಬ ಪಾತ್ರವನ್ನು ಮಾಡಿದ್ದಾರೆ.

ಈ ಪಾತ್ರ ಇಡೀ ಚಿತ್ರದಲ್ಲಿ ಕೆದರಿದ ಕೂದಲು ಮತ್ತು ಉದ್ದ ಗಡ್ಡದಲ್ಲಿ ಕಾಣಿಸಿಕೊಳ್ಳುತ್ತದೆಯಂತೆ. ಗಡ್ಡದ ವಿಗ್​ ಹೇಗೂ ಇದ್ದೇ ಇದೆ. ಇನ್ನು, ಮೀಸೆ ಮೇಲೆ ಮೀಸೆ ಅಂಟಿಸಿದರೆ ಅದು ಸರಿಯಾಗಿ ಕಾಣಿಸುತ್ತಿರಲಿಲ್ಲವಂತೆ. ಅದೇ ಕಾರಣಕ್ಕೆ, ಅದೆಷ್ಟೋ ವರ್ಷಗಳ ನಂತರ ಅವರು ಮೀಸೆ ತೆಗಿದಿದ್ದೇನೆಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ