ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಸತತ 14ನೇ ಬಾರಿಗೆ ಧಾರವಾಡ ಜಿಲ್ಲೆಗೆ ನಂಬರ್ ಒನ್ ಸ್ಥಾನವನ್ನು ಪಡೆದಿರುವ ಹುಬ್ಬಳ್ಳಿ ಭೈರಿದೇವರಕೊಪ್ಪದ
ಚೌಗಲಾ ಶಿಕ್ಷಣ ಸಂಸ್ಥೆಯ ವಿದ್ಯಾನಿಕೇತನ ಪಿಯು ಸೈನ್ಸ್ ಕಾಲೇಜಿನ ವಿದ್ಯಾರ್ಥಿ ಸಮೃದ್ಧ ಶೆಟ್ಟಿ 2023ರ ಸಿಇಟಿಯಲ್ಲೂ ಕಮಾಲ್ ಮಾಡಿದ್ದಾನೆ.
ಸಾಮಾನ್ಯ ಪ್ರವೇಶ ಪರೀಕ್ಷೆಯ (CET) ಇಂಜಿನಿಯರಿಂಗ್ ವಿಭಾಗದಲ್ಲಿ ಸಮೃದ್ಧ ಶೆಟ್ಟಿ ರಾಜ್ಯಕ್ಕೆ ಮೂರನೇ ರ್‍ಯಾಂಕ್ ಪಡೆದು ಹಿರಿಮೆ ನೆರೆದಿದ್ದಾನೆ. ಐಐಟಿ ಮೇನ್ಸ್‌ನಲ್ಲೂ ದೇಶಕ್ಕೆ ಈತ 31ನೇ ರ್‍ಯಾಂಕ್ ಪಡೆದು ಸಾಧನೆ ಮಾಡಿದ್ದನು. ಸಮೃದ್ದ ಉಡುಪಿಯ ಮೂಲದವರಾಗಿದ್ದು,ಪುಣೆಯಲ್ಲಿ ವಾಸವಾಗಿದ್ದಾರೆ.
ಉತ್ತರ ಕರ್ನಾಟಕದ ಟಾಪರ್ ಆಗಿ ಹೊರ ಹೊಮ್ಮಿದ್ದು ಕಾಲೇಜಿಗೆ ಕೀರ್ತಿ ತಂದ ಸಮೃದ್ದನನ್ನು ಸಂಸ್ಥೆಯ ಕಾರ್ಯದರ್ಶಿ ಅನಿಲಕುಮಾರ ಚೌಗಲಾ, ಚೇರಮನ್ ಶ್ರೀದೇವಿ ಚೌಗಲಾ, ನಿರ್ದೇಶಕರಾದ
ಗಂಗಾಧರ ಕಮಡೊಳ್ಳಿ, ರಮೇಶ ಭಂಡಿವಾಡ, ಪ್ರಾಂಶುಪಾಲ ಡಾ.ಮುಳಗುಂದ ವಿದ್ಯಾನಿಕೇತನ ಕಾಲೇಜು ಆಡಳಿತ ಮಂಡಳಿಯಿಂದ ಸನ್ಮಾನಿಸಿದರು.
ಒಂದು ಲಕ್ಷ ರೂಪಾಯಿ ಚೆಕ್ ನೀಡಿದ ಕಾಲೇಜಿನ ಅಧ್ಯಕ್ಷ ಅನಿಲ್ ಚೌಗ್ಲಾ , ಜೊತೆಗೆ ವಿದ್ಯಾರ್ಥಿಯ ಎಂಜಿನಿಯರಿಂಗ್ ಫೀಸ್ ಭರಿಸೋದಾಗಿ ಭರವಸೆ ನೀಡಿದರು
ಮೂರನೇ ರಾಂಕ್ ಬಂದಿರೋದಕ್ಕೆ ಸಮೃದ್ಧ್ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದು,
ಸತತ ಅಭ್ಯಾಸ, ಏಕಾಗ್ರತೆಯ ಫಲವಾಗಿ ಸಾಧನೆ ಮಾಡಿದ್ದೇನೆ.
ಮೊದಲ ರಾಂಕ್ ನಿರೀಕ್ಷೆಯಲ್ಲಿದ್ದೆ
ಎಂಜಿನಿಯರಿಂಗ್ ವಿಭಾಗದಲ್ಲಿ ಅಭ್ಯಾಸ ಮುಂದುವರಿಸ್ತೇನೆ ಎಂದರೆ, ಮಗನ ಸಾಧನೆ ಬಗ್ಗೆ ತಂದೆ ತಾಯಿ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.