ಚಿಕ್ಕೋಡಿಯಿಂದ ಕೇರೂರ ಮಾರ್ಗವಾಗಿ ಕಾಡಾಪೂರ ಕಡೆಗೆ ತುಂಬಿ ಹೊರಟ್ಟಿದ್ದ ಬಸ್‌ನಿಂದ ವೃದ್ದೆಯೊಬ್ಬಳು ಜಾರಿ ಬಿದ್ದ ಘಟನೆ ನಡೆದಿದೆ.
ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಪ್ರಭಾವಯಲ್ಲೆಡೆ ಜೋರಾಗಿಯೇ ಇದೆ ಉಚಿತ ಬಸ್ ಪ್ರಯಾಣ ಹಿನ್ನಲೆಯಲ್ಲಿ ಬೆಳಗಾವಿಯ ಚಿಕ್ಕೋಡಿ ಡಿಪೋ ದಿಂದ ಸರ್ಕಾರಿ ಸಾರಿಗೆ ಬಸ್ ಗಳು ಸಂಪೂರ್ಣ ತುಂಬಿ ಹೋಗುತ್ತಿವೆ.
ಇನ್ನು ಅದೃಷ್ಟವಂಶ ವೃದ್ದೆ ಪ್ರಾಣಪಾಯದಿಂದ ಪಾರಾಗಿದ್ದಾಳೆ. ಇಂತಹ ಘಟನೆಗಳಿಂದ ಯಾರಿಗಾದರೂ ಏನಾದರು ಆದರೆ ಯಾರು ಜವಾಬ್ದಾರರು ಎಂದು ಸಾರ್ವಜನಿಕರು ಆಕ್ರೋಶ ಹೊರಹಕಿದ್ದಾರೆ.
ಶಕ್ತಿ ಯೋಜನೆಯ ಹಿನ್ನಲೆಯಲ್ಲಿ ಸರಿಯಾದ ಸಮಯಕ್ಕೆ ಬಸ್ ಗಳು ಬಾರದ್ದರಿಂದ ಈ ರೀತಿಯ ಘಟನೆಗಳು ನಡೆಯುತ್ತಿವೆ ಎಂದು ಸಾರಿಗೆ ಸಂಸ್ಥೆ ವಿರುದ್ಧ ಜನ ಬೇಜಾರು ವ್ಯೆಕ್ತ ಪಡಿಸಿದರು.
ಇನ್ನು ಸರ್ಕಾರಕ್ಕೆ ಹೆಚ್ಚಿನ ಬಸಗಳನ್ನ ಬಿಡುವಂತೆ ಸ್ಥಳೀಯರಾದ ಮಂಜುನಾಥ ಪರಗೌಡ ಆಗ್ರಹಿಸಿದರು.