ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದು, ಬಿಜೆಪಿ ಸ್ವಲ್ಪ ಮಟ್ಟಿಗೆ ನಷ್ಟ ಅನುಭವಿಸಿದೆ. ಬಿಜಾಪುರ ಸಂಸದ ರಮೇಶ್ ಜಿಗಜಿಣಗಿ ಪ್ರತಿಕ್ರಿಯಿಸಿ, ಉತ್ತರ ಕರ್ನಾಟಕ ಸ್ವಲ್ಪ ಜಾಸ್ತಿ
ಈ ಇಬ್ಬರು ನಾಯಕರ ಪಕ್ಷಾಂತರ ಮಾಡಿದ್ದು ಲೋಕಸಭೆ ಚುನಾವಣೆ ಮೇಲೆ ಯಾವ ಪರಿಣಾಮ ಬೀರುವುದಿಲ್ಲ ಜನ ಕಾಂಗ್ರೇಸ್ ಗೆ ಓಟು ಹಾಕಿದ್ದು ಗ್ಯಾರಂಟಿ ಭರವಸೆಯ ಹಿನ್ನೆಲೆಯಲ್ಲಿ ಆಯ್ಕೆ ಮಾಡಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಮೇಲೆ ರಾಜ್ಯ ಸರ್ಕಾರ ನಡೆಸುತ್ತಿದೆ. ಕಾಂಗ್ರೆಸ್ ದೇಶವನ್ನೇ ಮಾರಿಕೊಳ್ಳುತ್ತದೆ ಎಂದು ಟೀಕಿಸಿದರು.
ಈ ಬಾರಿಯೂ ಮೋದಿಯನ್ನು ಸೋಲಿಸಲು ಸಾಧ್ಯವಿಲ್ಲ. ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರ ಬಂದರೆ ಖಂಡಿತ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಶೇ.100ರಷ್ಟು ಗ್ಯಾರಂಟಿ ಹೇಳಿದರು. ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಇನ್ನು ಹುಡುಗಾ.. ಹುಡುಗಿ ಎಂದು ರಾಜಕೀಯವಾಗಿ ಇನ್ನೂ ಚಿಕ್ಕವರು ಎಂದ ಸಂಸದ ಜಿಗಜಿಣಗಿ ಎಂದು ಪರೋಕ್ಷವಾಗಿ ವ್ಯಂಗ್ಯವಾಡಿದರು.
ನಿಮ್ಮ ದಲಿತ ಸಿಎಂ ಬೇಡಿಕೆ ಇನ್ನೂ ಈಡೇರ್ತಿಲ್ಲವಲ್ಲ..ಎಂಬ ಮಾಧ್ಯಮದವರ ಪ್ರಶ್ನೆಗೆ.. ದಲಿತರ ಬಗ್ಗೆ.. ಈ ದೇಶದಲ್ಲಿ ಜನರ ಭಾವನೆ ಏನಿದೆ ಅನ್ನೋದು ನಮಗೂ ಗೊತ್ತಿದೆ ಅಷ್ಟು ಸುಲಭವಾಗಿ ದಲಿತರನ್ನ ಒಪ್ಕೋಳ್ತಾರಾ ಒಪ್ಪಿಕೊಳ್ಳೋದಿಲ್ಲ.ಈ ಬಾರಿ ನೂರಕ್ಕ ನೂರಾ ಒಂದು ಪರ್ಸೆಂಟ್ ದಲಿತ
ಸಿಎಂ ಆಗೇ ಅಗ್ತಾರೆ, ಅದನ್ನ ಯಾರೂ ತಪ್ಪಿಸಲು ಸಾಧ್ಯವಿಲ್ಲ. ಬಿಜೆಪಿ ಮುಂದಿನ ಸಲ ದಲಿತ ಸಿಎಂ ಕುರಿತಂತೆ ಪ್ರಸ್ಥಾಪಿಸಲಿದೆ ಇನ್ನು ಈ ಕುರಿತು ಬಹಳ ಮಾತನಾಡುವುದು ಬೇಡ ಎಂದು ಖಾರವಾಗಿ ಪ್ರತಿಕ್ರಯಿಸಿದರು