ಬೆಳಗಾವಿ ವಡಗಾಂವ ಆನಂದನಗರ, ಎರಡನೇ ಕ್ರಾಸ್, ನಲ್ಲಿಗಳಲ್ಲಿ ಚರಂಡಿ ಮಿಶ್ರಿತ ನೀರು ಬರುತ್ತಿದ್ದು, ನಾಗರಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ನಗರಸಭೆ ಅಧಿಕಾರಿಗಳಿಗೆ ಹಲವು ಬಾರಿ ತೀಳಿಸಿದರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.
ಹೌದು, ಕಳೆದ ಎಂಟು ದಿನಗಳಿಂದ ಆನಂದನಗರ 2ನೇ ಕ್ರಾಸ್ನಲ್ಲಿ ಅಪಾರ ಪ್ರಮಾಣದ ಚರಂಡಿ ನೀರು ಹರಿಯುತ್ತಿದೆ. ಈ ನೀರು ಸುತ್ತಮುತ್ತಲಿನ ಮನೆಗಳ ಬಾವಿಗಳಿಗೆ ನುಗ್ಗುತ್ತಿದ್ದು, ಬಾವಿಗಳ ನೀರು ಕೂಡ ಕಲುಷಿತಗೊಂಡಿದೆ. ಹೀಗಾಗಿ ಬಳಕೆಗೆ ಬೇಕಾದ ನೀರನ್ನು ಎಲ್ಲಿಂದ ತರುವುದು ಎಂಬ ಪ್ರಶ್ನೆ ಇಲ್ಲಿನ ನಿವಾಸಿಗಳ ಮುಂದೆ ನಿಂತಿದೆ.
ಹಲವೆಡೆ ಚರಂಡಿ ಪಕ್ಕದಲ್ಲೇ ಸಾರ್ವಜನಿಕ ನಲ್ಲಿಗಳಿವೆ. ಆ ಹೊಂಡಗಳಲ್ಲಿ ಚರಂಡಿ ನೀರು ಸಂಗ್ರಹಗೊಂಡು ಈ ಚರಂಡಿ ನೀರು ಈ ನಲ್ಲಿಯ ಮೂಲಕ ಮುಖ್ಯ ಪೈಪ್ಲೈನ್ಗೆ ಸೇರಿ ಸಾಯಿ ಕಾಲೋನಿ ಹಾಗೂ ಆನಂದನಗರ 2ನೇ ಕ್ರಾಸ್ಗೆ ನೀರು ಹೋಗುತ್ತಿದೆ.
ಹೀಗಾಗಿ ಈ ನೀರು ಕುಡಿಯುವುದರಿಂದ ಈ ಭಾಗದ ನಾಗರಿಕರ ಆರೋಗ್ಯಕ್ಕೆ ಈ ಏರುಪೇರು ಆಗುತ್ತಿದೆ ಭಾಗದ ನಿವಾಸಿಗಳು ಚಳಿ ಜ್ವರ, ಡೆಂಗ್ಯೂ, ಮಲೇರಿಯಾ, ಸಂಡಾ, ವಾಂತಿಭೇದಿ ಮುಂತಾದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ನಗರಸಭೆ ಅಧಿಕಾರಿಗಳಿಗೆ ತಿಳಿಸಿದರೂ ಚರಂಡಿ ನೀರು ನಿಲ್ಲಿಸಿಲ್ಲ ಹಲವೆಡೆ ಈ ಚರಂಡಿ ನೀರು ಗುಂಡಿಯಲ್ಲಿ ಸಂಗ್ರಹಗೊಂಡಿದ್ದು, ಆ ಸ್ಥಳಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ ಸೊಳ್ಳೆಗಳ ಕಾಟದಿಂದ ಹಲವು ಮಂದಿ ಭೇದಿ, ಡೆಂಗ್ಯೂ, ಮಲೇರಿಯಾ, ಚಳಿ ಜ್ವರದಂತಹ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಇಲ್ಲಿನ ನಿವಾಸಿಗಳು ದೂರುತ್ತಾರೆ. ಆದ್ದರಿಂದ ನಗರಸಭೆ ಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನಹರಿಸಿ ಈ ಚರಂಡಿ ಮಿಶ್ರಿತ ನೀರನ್ನು ನಿಲ್ಲಿಸಬೇಕು ಎಂಬುದು ಇಲ್ಲಿನ ನಾಗರಿಕರ ಆಗ್ರಹಿಸಿದ್ದಾರೆ