ಮಲಗಿದಲ್ಲೇ ಪ್ರಾಣ ಬಿಟ್ಟ ಮದ್ಯವ್ಯಸನಿ ದಂಪತಿ

Spread the love

ಧಾರವಾಡ: ತಾಲ್ಲೂಕಿನ ಸಲಕಿನಕೊಪ್ಪ ಗ್ರಾಮದ ಸಮೀಪದಲ್ಲಿ ಕುಡಿತದ ದಾಸರಾಗಿದ್ದ ದಂಪತಿ ಮಲಗಿದ ಸ್ಥಳದಲ್ಲೇ ಪ್ರಾಣ ಬಿಟ್ಟಿರುವ ಘಟನೆ ಸೋಮವಾರ ನಡೆದಿದೆ.

ಧಾರವಾಡ ಭವಾನಿನಗರದ ನಿವಾಸಿಗಳಾಗಿದ್ದ ರಾಜು ರೇವಾಳ (46) ಹಾಗೂ ಗೀತಾ ರೇವಾಳ (40) ಮೃತಪಟ್ಟವರು.

 

ಕಟ್ಟಡ ಕೂಲಿ ಕಾರ್ಮಿಕರಾಗಿದ್ದ ಈ ದಂಪತಿ, ಸಲಕಿನಕೊಪ್ಪ ಗ್ರಾಮಕ್ಕೆ ಮಾವಿನ ತೋಟ ಕಾಯುವ ಕೆಲಸಕ್ಕೆ ಬಂದಿದ್ದರು. ಕುಟುಂಬಸ್ಥರಿಂದ ದೂರವಿದ್ದ ಇಬ್ಬರು ವಿಪರೀತ ಮದ್ಯವ್ಯಸನಿಗಳಾಗಿದ್ದರು. ಅಲ್ಲದೇ ರಾಜು ಎಂಬಾತ ಗ್ಯಾಂಗ್ರಿನ್ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೂ ದಾಖಲಾಗಿದ್ದರು.

ವೈದ್ಯರು ಅವರಿಗೆ ಸಾಕಷ್ಟು ಬುದ್ದಿವಾದ ಹೇಳಿದರೂ ಪ್ರಯೋಜನವಾಗಿರಲಿಲ್ಲ. ನಂತರ ಅವರಿಬ್ಬರೂ ಬಂದು ಸಲಕಿನಕೊಪ್ಪ ಗ್ರಾಮದ ಬಳಿ ತಂಗಿದ್ದರು. ತೀವ್ರ ಅನಾರೋಗ್ಯದಿಂದ ಮಂಗಳವಾರ ರಾಜು ಮೃತಪಟ್ಟರೆ, ಪತಿಯ ಅಗಲಿಕೆಯ ದುಃಖದಲ್ಲಿ ವಿಪರೀತ ಮದ್ಯ ಸೇವಿಸಿ ಗೀತಾ ಕೂಡಾ ಪ್ರಾಣ ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love

About Laxminews 24x7

Check Also

ಮಹಾಶಿವರಾತ್ರಿ ಆಚರಣೆ ಯಾಕೆ ಗೊತ್ತಾ?

Spread the love ಮಹಾಶಿವರಾತ್ರಿಯನ್ನು  ದೇಶಾದ್ಯಂತ ಶ್ರದ್ಧಾ-ಭಕ್ತಿಗಳಿಂದ ಆಚರಿಸಲಾಗುತ್ತದೆ. ಪಂಚಾಂಗದ ಪ್ರಕಾರ ಪ್ರತಿ ಮಾಸದಲ್ಲಿ ಶಿವರಾತ್ರಿ ಇರುತ್ತದೆ. ಇದಕ್ಕೆ ಮಾಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ