Breaking News

5 ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಅನುಷ್ಠಾನಕ್ಕೆ ತರಲು ಬದ್ಧವಾಗಿದೆ: ಜಮೀರ್ ಅಹ್ಮದ್ ಖಾನ್

Spread the love

ತುಮಕೂರು: ಚುನಾವಣೆ ವೇಳೆ ಕಾಂಗ್ರೆಸ್ ಭರವಸೆ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಈಗಾಗಲೇ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆಗಳನ್ನು ನಡೆಸಲಾಗುತ್ತಿದೆ ಇದಕ್ಕಾಗಿ ಪೂರಕವಾದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.

ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 5 ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಅನುಷ್ಠಾನಕ್ಕೆ ತರಲು ಬದ್ಧವಾಗಿದೆ ಎಂದರು.

ಸಿದ್ದಗಂಗಾ ಮಠಕ್ಕೆ ನಾನು ಹೊಸದಾಗಿ ಬರ್ತಿಲ್ಲ. ನಾನು 2006ರಲ್ಲಿ ಮಂತ್ರಿಯಾಗಿದ್ದೆ ಅವಾಗ ಶಿವಕುಮಾರ ಸ್ವಾಮೀಜಿಗಳು ಇದ್ದರು, ಇಲ್ಲಿಗೆ ಬಂದು ಅವರ ಆಶೀರ್ವಾದ ಪಡೆದುಕೊಂಡು ಹೋಗಿದ್ದೆ. 2018ರಲ್ಲೂ ಸಚಿವನಾಗೋಕೆ ದೇವರು ಅವಕಾಶ ಮಾಡಿಕೊಟ್ಟಿತ್ತು. ಆಗಲೂ ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡು ಹೋಗಿದ್ದೆ. ಇವತ್ತು ಮಂತ್ರಿಯಾಗಿದ್ದೇನೆ, ಇವತ್ತು ಬಂದು ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡಿದ್ದೇನೆ. ನಾನು ಯಾವಾಗ, ಯಾವಾಗ ಮಂತ್ರಿಯಾಗಿದ್ದೇನೆ ಅವಾಗ ಇಲ್ಲಿಗೆ ಬಂದು ಆಶೀರ್ವಾದ ಪಡೆದುಕೊಂಡಿದ್ದೇನೆ ಎಂದರು.

ಶ್ರೀಸಿದ್ದಲಿಂಗ ಶ್ರೀಗಳ ಬಳಿ ಇಲ್ಲಿನ ವ್ಯವಸ್ಥೆ ಬಗ್ಗೆ ಮಾತನಾಡಿದ್ದೇನೆ. ಕಳೆದ ವರ್ಷ 10 ಸಾವಿರ ಮಕ್ಕಳು ಇದ್ದರಂತೆ. ಈ ವರ್ಷ ಅಡ್ಮೀಶನ್ ಜಾಸ್ತಿ ಬರ್ತಿದೆಯಂತೆ. ಅದಕ್ಕೆಲ್ಲಾ ಅರೆಂಜ್ಮೆಂಟ್ ಮಾಡಬೇಕಾಗುತ್ತದೆ. ಈಗ ಸದ್ಯಕ್ಕೆ ಇಲ್ಲಿ 10 ಸಾವಿರ ಮಕ್ಕಳನ್ನ ಇಟ್ಟುಕೊಂಡಿದ್ದಾರೆ. ನಾನು ಕೂಡಾ ಅವರ ಬಳಿ ರಿಕ್ವೆಸ್ಟ್ ಮಾಡಿದ್ದೇನೆ. ಬರುವ ವರ್ಷ ಇಲ್ಲಿ ಹೆಚ್ಚಿನ ಕಟ್ಟಡ ಕಟ್ಟಿ ಹೆಚ್ಚಿನ ಮಕ್ಕಳಿಗೆ ಶಿಕ್ಷಣ ಕೊಡಿ ಎಂದು ಹೇಳಿದ್ದೇನೆ. ಇಲ್ಲಿ ಲಕ್ಷಾಂತರ ಜನ ಬಂದು ಊಟ ಮಾಡ್ತಾರೆ. ಯಾರಿಗೂ ಇಲ್ಲಿ ಊಟ ಇಲ್ಲ ಅಂತ ಸಮಸ್ಯೆಯಾಗಿಲ್ಲ. ಸಿದ್ದಗಂಗಾ ಮಠಕ್ಕೆ ಬಿಡುಗಡೆಯಾಗಿದ್ದ ಅನುದಾನವನ್ನ ಸರ್ಕಾರ ತಡೆಹಿಡಿದ ವಿಚಾರವಾಗಿ ಮಾತನಾಡಿ, ಈ ಬಗ್ಗೆ ನಾನು ಮುಖ್ಯಮಂತ್ರಿಗಳಿಗೆ ವಿಚಾರ ತಿಳಿಸುತ್ತೇನೆ. ನಾವು ಎಜುಕೇಶನ್​ಗೆ ಹೆಚ್ಚಿನ ಒತ್ತು ಕೊಡ್ಬೇಕು. ಅನುದಾನ ತಡೆಹಿಡಿದ ಬಗ್ಗೆ ಸ್ವಾಮೀಜಿಗಳ ಬಳಿ ಚರ್ಚೆ ಮಾಡಿಲ್ಲ ಎಂದು ಹೇಳಿದರು.

ಕಾಂಗ್ರೆಸ್​ ಗ್ಯಾರಂಟಿಗಳ ಜಾರಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ನೀವು ಮಾಧ್ಯಮದವರು ಜಾಸ್ತಿ ಆತುರ ಬಿಳ್ತಿದ್ದೀರಾ. 5 ಗ್ಯಾರಂಟಿ ಯೋಜನೆಗಳನ್ನ ಹೇಳಿದ್ದೇವೆ‌. ಕ್ಯಾಬಿನೆಟ್​ನಲ್ಲಿ ಒಪ್ಪಿಗೆ ನೀಡಿದ್ದೇವೆ. ಇದನ್ನ ಹೇಗೆ ಮಾಡ್ಬೇಕು ಅಂತ ಸಂಬಂಧಪಟ್ಟ
ಅಧಿಕಾರಿಗಳ ಜೊತೆ ಮುಖ್ಯಮಂತ್ರಿಗಳು ಚರ್ಚೆ ಮಾಡ್ತಿದ್ದಾರೆ. ಆದಷ್ಟು ಬೇಗ ಮಾನ್ಯ ಮುಖ್ಯಮಂತ್ರಿಗಳು 5 ಗ್ಯಾರಂಟಿಗಳನ್ನ ಜಾರಿ ಮಾಡೋಕೆ ಪ್ರಯತ್ನ ಮಾಡ್ತಾರೆ. ದಯಮಾಡಿ ಜಾರಿಯಾಗುವವರೆಗೂ ಕಾಯಬೇಕು ಎಂದು ಮನವಿ ಮಾಡಿದರು.

ಇನ್ನು ಸರ್ಕಾರ ರಚೆನೆಯಾಗಿ ಎರಡು ವಾರ ಆಗಿದೆ ಅಷ್ಟೇ. ಇದೆಲ್ಲಾ ಒಂದೆರಡು ದಿನಗಳಲ್ಲಿ ಆಗಲು ಸಾಧ್ಯವಿಲ್ಲ. ಮೊದಲನೇ ಕ್ಯಾಬಿನೆಟ್​ನಲ್ಲಿ ಮುಖ್ಯಮಂತ್ರಿಗಳು ಇದನ್ನ ಅಪ್ರುವ್ ಮಾಡಿದ್ದಾರೆ. ಅದನ್ನ ಹೇಗೆ ಮಾಡ್ಬೇಕು ಅಂತ ನಿನ್ನೆಯೂ ಸಹ ಅಧಿಕಾರಿಗಳ ಜೊತೆ ಮುಖ್ಯಮಂತ್ರಿಗಳು 3 ಗಂಟೆ ಮಿಟಿಂಗ್ ಮಾಡಿದ್ದಾರೆ ಎಂದು ತಿಳಿಸಿದರು. ಡಿಸಿಎಂ ಆಕಾಂಕ್ಷಿ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಡಿಸಿಎಂ ಆಕಾಂಕ್ಷಿಯಾಗಿರಲಿಲ್ಲ. ಇವಾಗ ಕೊಟ್ಟಿರುವ ಖಾತೆ ನನಗೆ ತೃಪ್ತಿ ತಂದಿದೆ. ಮಾನ್ಯ ಮುಖ್ಯಮಂತ್ರಿಗಳು ಬಡವರಿಗೆ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ನನಗೆ ಬಹಳ ಖುಷಿ ಇದೆ ಎಂದರು.

ಇದಕ್ಕೂ ಮೊದಲು ಸಿದ್ದಗಂಗಾ ಮಠಕ್ಕೆ ನೂತನ ಸಚಿವ ಜಮೀರ್ ಅಹ್ಮದ್ ಭೇಟಿ ನೀಡಿ, ಶ್ರೀ ಶಿವಕುಮಾರ ಶ್ರೀಗಳ ಗದ್ದುಗೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಸಿದ್ದಗಂಗಾ ಶ್ರೀಗಳಿಗೆ ವಿಶೇಷವಾಗಿ ತಂದಿದ್ದ ಮಲ್ಲಿಗೆ ಹಾರ ಸಮರ್ಪಣೆ ಮಾಡಿದ ಅವರು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದರು. ಇದೇ ವೇಳೆ ಸಚಿವ ಜಮೀರ್ ಅಹ್ಮದ್​ಗೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಸಾತ್ ನೀಡಿದರು.

 


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ