Breaking News

ವಾಮಾನ ಇಲಾಖೆ ಮಾಹಿತಿ ನೀಡಿರುವ ಪ್ರಕಾರ ಅಕಾಲಿಕ ಮುಂಗಾರಿನ ಪರಿಣಾಮ ಗುಜರಾತ್​ನಲ್ಲಿ ಇನ್ನೆರಡು ದಿನ ಗಾಳಿ ಮಳೆಯಾಗಲಿದೆ.

Spread the love

ಅಹಮದಾಬಾದ್​ (ಗುಜರಾತ್): ಶುಭಮನ್​ ಗಿಲ್​, ರಶೀದ್​ ಖಾನ್​, ಹಾರ್ದಿಕ್​ ಪಾಂಡ್ಯರ ಚುರುಕಿನ ಆಟ, ಕ್ರಿಕೆಟ್​ನ ಮಾಸ್ಟರ್​ ಮೈಂಡ್​ ಎಮ್​ಎಸ್​ ಧೋನಿ ಅವರ ಚಾಣಾಕ್ಷ ನಡೆಯ ಪಂದ್ಯವನ್ನು ನೋಡಲು ನಿನ್ನೆ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂಗೆ ಬಂದಿದ್ದ ಅಭಿಮಾನಿಗಳಿಗೆ ವರುಣ ಬೇಸರ ಉಂಟುಮಾಡಿದ್ದ.

ಆದರೆ, ಪಂದ್ಯವನ್ನು ಸೋಮವಾರ (ಇಂದು)ದ ಮೀಸಲು ದಿನಕ್ಕೆ ಮುಂದೂಡಲಾಯಿತು. ಹಾಗಾದರೆ ಇಂದಿನ ಹವಾಮಾನ ವರದಿ ಏನಿದೆ..?

 

ಗುಜರಾತ್​ನಲ್ಲಿ ಅಕಾಲಿಕ ಮಳೆ ಅನಾಹುತ ಸೃಷ್ಟಿಸುತ್ತಿದೆ. ಚಂಡಮಾರುತದ ಚಲನೆಯಿಂದಾಗಿ, ಕಳೆದ ಕೆಲವು ದಿನಗಳಿಂದ ಸುಡುವ ಶಾಖದ ನಡುವೆ ಗುಜರಾತ್ ಮೋಡ ಕವಿದ ವಾತಾವರಣ ಇತ್ತು. ನಿನ್ನೆ ಅದು ನೀರಾಗಿದ್ದು, ಐಪಿಎಲ್​ ಪಂದ್ಯವನ್ನು ತೊಯ್ದಿದೆ. ಗುಜರಾತ್​ನ ಹವಮಾನ ವರದಿಯ ಪ್ರಕಾರ ಇಂದು ನಾಳೆ ಮಳೆಯಾಗುವ ಸಂಭವ ಇದೆ. ಫೈನಲ್​ ನೋಡಲು ಬರುವ ಅಭಿಮಾನಿಗಳಿಗೆ ಇಂದು ಬೇಸರ ಉಂಟುಮಾಡ್ತಾನಾ ವರುಣಾ ಇಲ್ಲ, ಫಲಿತಾಂಶಕ್ಕಾಗಿ ಚುಟುಕು ಪಂದ್ಯಕ್ಕಾದರೂ ಬಿಡುವು ಕೊಡುತ್ತಾನಾ ಕಾದುನೋಡಬೇಕಿದೆ.

“ಮುಂದಿನ ಎರಡು ದಿನಗಳಲ್ಲಿ ಅಹಮದಾಬಾದ್ ನಗರದಲ್ಲಿ ಸಂಜೆ ಗಾಳಿಯೊಂದಿಗೆ ಮಳೆಯಾಗುವ ನಿರೀಕ್ಷೆಯಿದೆ. ಅಕಾಲಿಕ ಮಾನ್ಸೂನ್ ರೂಪುಗೊಂಡಿದೆ, ಇದರ ಪರಿಣಾಮ ಇನ್ನೂ ಎರಡು ದಿನಗಳವರೆಗೆ ಮಳೆ ಇರುತ್ತದೆ. ಈ ಎರಡು ದಿನಗಳಲ್ಲಿ ಗಾಳಿಯ ವೇಗ ಗಂಟೆಗೆ 40-50 ಕಿಮೀ ಇದ್ದು, ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿದೆ. ಇಂತಹ ಪರಿಸ್ಥಿತಿಯಲ್ಲಿ ಮಳೆಯಿಂದಾಗಿ ಫೈನಲ್ ಪಂದ್ಯಕ್ಕೆ ಅಡ್ಡಿಯಾಗಬಹುದು ಎಂದು ಹವಾಮಾನ ಇಲಾಖೆ ನಿರ್ದೇಶಕ ವಿಜಿನ್ ಲಾಲ್ ತಿಳಿಸಿದ್ದಾರೆ.

ಕಚ್ ಜೊತೆಗೆ ಉತ್ತರ ಗುಜರಾತ್ ಮತ್ತು ಸೌರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 40 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯನ್ನು ಹವಾಮಾನ ಇಲಾಖೆ ವ್ಯಕ್ತಪಡಿಸಿದೆ. ಅಮ್ರೇಲಿ, ಭಾವನಗರ, ಕಚ್, ಬನಸ್ಕಾಂತ, ಪಟಾನ್, ಮೆಹ್ಸಾನಾ, ಸಬರ್ಕಾಂತದಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಮೇ 30 ರಂದು ಕಚ್ ಮತ್ತು ಬನಸ್ಕಾಂತ ಜಿಲ್ಲೆಗಳಲ್ಲಿ ಅಕಾಲಿಕ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ವ್ಯಕ್ತಪಡಿಸಿದೆ.

ನಿನ್ನೆ ಸಂಜೆ ಸರಿಯಾಗಿ ಪಂದ್ಯದ ಟಾಸ್​ಗೆ ಅರ್ಧ ಗಂಟೆಗೂ ಮುನ್ನ ಮಳೆ ಸುರಿಯಲಾರಂಭಿಸಿತು. ನಡುವೆ ಒಮ್ಮೆ ಕೊಂಚ ಸಮಯ ಬಿಡುವು ಕೊಟ್ಟಿತಾದರೂ, ಮೈದಾನದ ನೀರು ಆರುವ ಮುನ್ನ ಮತ್ತೆ ಗುಡುಗು, ಗಾಳಿ ಸಹಿತ ರಾತ್ರಿ 12ರ ಸುರಿದಿತ್ತು. ಇಂದು ಸಹ ಮೋಡ ಕವಿದ ವಾತಾವರಣದ ಮುನ್ಸೂಚನೆ ಇದ್ದು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ವರದಿ ಹೇಳೀದೆ. 5 ಓವರ್​ನ ಪಂದ್ಯಕ್ಕಾದರೂ ಅವಕಾಶ ಸಿಕ್ಕರೆ ಮಿಲಿಯನ್​ ಡಾಲರ್​ ಲೀಗ್​​ನ ಫೈನಲ್​ಗೆ ಒಂದು ಅರ್ಧ ಕಲ್ಪಿಸಿದಂತಾಗಲಿದೆ.

ಇಂದೂ ಉಭಯ ತಂಡಗಳು ಅಹಮದಾಬಾದ್​ನಲ್ಲೇ ಫೈನಲ್​ ಆಡಲಿವೆ. ಮಳೆಯಿಂದಾಗಿ ಮೀಸಲು ದಿನವೂ ಪಂದ್ಯ ಆಡಲಾಗದಿದ್ದರೆ, ಲೀಗ್ ಹಂತದ ನಂತರ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡ ವಿಜಯಶಾಲಿಯಾಗಲಿದೆ. ಈ ಮೂಲಕ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್​ಗೆ ಎರಡನೇ ಬಾರಿಗೆ ಐಪಿಎಲ್​ ಚಾಂಪಿಯನ್​ ಎಂದು ಘೋಷಿಸಲಾಗುತ್ತದೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ