Breaking News

ಅನುಮತಿ ಪಡೆಯದೆ ಗಡ್ಡ ಬಿಟ್ಟಿದ್ದಕ್ಕೆ ಎಸ್‍ಐ ಅಮಾನತು

Spread the love

 

ಲಕ್ನೋ: ಅನುಮತಿ ಪಡೆಯದೆ ಗಡ್ಡ ಬಿಟ್ಟಿದ್ದಕ್ಕೆ ಉತ್ತರ ಪ್ರದೇಶದ ಪೊಲೀಸ್ ಸಬ್ ಇನ್‍ಸ್ಪೆಕ್ಟರ್‍ನನ್ನು ಅಮಾನತುಗೊಳಿಸಿ, ಪೊಲೀಸ್ ಲೈನ್ ಗೆ ಕಳುಹಿಸಲಾಗಿದೆ.

ಪೊಲೀಸ್ ಇನ್‍ಸ್ಪೆಕ್ಟರ್ ಇಂಟೆಸರ್ ಅಲಿ ಅವರಿಗೆ ಈ ಹಿಂದೆ ಮೂರು ಬಾರಿ ಎಚ್ಚರಿಕೆ ನೀಡಲಾಗಿದ್ದು, ಗಡ್ಡವನ್ನು ತೆಗೆಯಿರಿ ಇಲ್ಲವೆ ಅನುಮತಿ ಪಡೆಯಿರಿ ಎಂದು ತಿಳಿಸಲಾಗಿದೆ. ಆದರೆ ಅಲಿ ಯಾವುದೇ ರೀತಿಯ ಅನುಮತಿ ಪಡಡೆದಿಲ್ಲ. ಅಲ್ಲದೆ ಗಡ್ಡವನ್ನು ಸಹ ತೆಗೆದಿಲ್ಲ.

ಘಟನೆ ಕುರಿತು ಎಸ್.ಪಿ.ಬಾಘ್ಪತ್ ಅಭಿಷೇಕ್ ಸಿಂಗ್ ಈ ಕುರಿತು ಪ್ರತಿಕ್ರಿಯಿಸಿದ್ದು, ಅನುಮತಿ ಪಡೆದು ಗಡ್ಡವನ್ನು ಬಿಡಬಹುದು. ಯಾವುದೇ ಪೊಲೀಸ್ ಅಧಿಕಾರಿ ಗಡ್ಡ ಬಿಡಬೇಕೆಂದರೆ ಇದೇ ರೀತಿ ಅನುಮತಿ ಪಡೆಯಬೇಕು. ಇಂಟೆಸರ್ ಅಲಿ ಅವರಿಗೆ ಈ ಹಿಂದೆ ಹಲವು ಬಾರಿ ಎಚ್ಚರಿಕೆ ನೀಡಲಾಗಿತ್ತು. ಅನುಮತಿ ಪಡೆಯಿತಿ ಇಲ್ಲವೇ ಗಡ್ಡ ತೆಗೆಯಿರಿ ಎಂದು ಹೇಳಲಾಗಿತ್ತು. ಆದರೆ ಅಲಿ ಅನುಮತಿ ಪಡೆಯದೆ ಗಡ್ಡವನ್ನು ಬಿಟ್ಟಿದ್ದ ಎಂದು ತಿಳಿಸಿದ್ದಾರೆ.

ಈ ಕುರಿತು ಇತ್ತೀಚೆಗೆ ಅವರಿಗೆ ಶೋಕಾಸ್ ನೋಟಿಸ್ ಸಹ ನೀಡಲಾಗಿತ್ತು. ಇದಕ್ಕೂ ಉತ್ತರಿಸಿರಲಿಲ್ಲ. ಎಸ್‍ಐ ಅಲಿ ಅಶಿಸ್ತಿನಿಂದ ವರ್ತಿಸಿದ್ದಕ್ಕೆ ಅಮಾನತುಗೊಳಿಸಲಾಗಿದೆ. ಅಲ್ಲದೆ ಪ್ರಕರಣದ ಕರಿತು ತನಿಖೆಗೆ ಸಹ ಆದೇಶಿಸಲಾಗಿದೆ ಎಂದು ವಿವರಿಸಿದರು.

ಈ ಕುರಿತು ಅಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಗಡ್ಡ ಬಿಡಲು ಅನುಮತಿ ನೀಡುವಂತೆ ಕೋರಿ ನಾನು ಅರ್ಜಿ ಸಲ್ಲಿಸಿದ್ದೇನೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಆರೋಪಿಸಿದ್ದಾರೆ. ಪೊಲೀಸ್ ಕೈಪಿಡಿಯ ಪ್ರಕಾರ ಸಿಖ್ಖರು ಮಾತ್ರ ಗಡ್ಡ ಬಿಡಲು ಅನುಮತಿ ನೀಡಲಾಗಿದೆ. ಉಳಿದಂತೆ ಗಡ್ಡ ಬಿಡಲು ಎಲ್ಲ ಪೊಲೀಸ್ ಅಧಿಕಾರಿಗಳು ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

 


Spread the love

About Laxminews 24x7

Check Also

ಶಹಾಪುರ-ವಡಗಾವಿ ಮುಖ್ಯ ರಸ್ತೆಗೆ ದೇವರ ದಾಸಿಮಯ್ಯನವರ ಹೆಸರಿಡುವಂತೆ ಆಗ್ರಹಿಸಿ ಮನವಿ

Spread the loveಬೆಳಗಾವಿ : ನಗರದ ಶಹಾಪುರ-ವಡಗಾವಿ ಮುಖ್ಯ ರಸ್ತೆಗೆ ದೇವರ ದಾಸಿಮಯ್ಯನವರ ಹೆಸರಿಡುವಂತೆ ಆಗ್ರಹಿಸಿ ಜಿಲ್ಲಾ ನೇಕಾರರ ಬಳಗದ ಸದಸ್ಯರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ