Breaking News

UPSC-2022 ಫಲಿತಾಂಶ ಪ್ರಕಟ – ಬೆಳಗಾವಿಯ ಮೂವರ ಸಾಧನೆ

Spread the love

ಗೋಕಾಕ್ ತಾಲೂಕಿನ ಅರಭಾವಿಮಠ ಗ್ರಾಮದ ಯುವತಿ ಶೃತಿ ಯರಗಟ್ಟಿ ಯುಪಿಎಸ್ಸಿ – AIR 362, ಕಾಗವಾಡ ತಾಲೂಕಿನ ಉಗಾರ ಗ್ರಾಮದ ಆದಿನಾಥ್ ತಮದಡ್ಡಿ – AIR 566 ಹಾಗು ಶಮಣೆವಾಡಿ ಗ್ರಾಮದ ಅಕ್ಷಯ್ ಪಾಟೀಲ AIR 746 ರ್ಯಾಂಕ್ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಬೆಂಗಳೂರು (ಮೇ 23, 2023): ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) 2022 ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ.  933 ಅಭ್ಯರ್ಥಿಗಳು ಈ ವರ್ಷದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದಾರೆ ಎಂದು ಯುಪಿಎಸ್‌ಸಿ ಮಾಹಿತಿ ನೀಡಿದೆ. ಈ ಪೈಕಿ ಈ ಪರೀಕ್ಷೆಯಲ್ಲಿ ಮಹಿಳೆಯರ ಮೇಲುಗೈ ಕಂಡುಬಂದಿದೆ. ರಾಜ್ಯದಲ್ಲೂ ಅನೇಕ ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. 

 

ಯುಪಿಎಸ್ ಸಿ ಪರೀಕ್ಷೆಯಲ್ಲಿ ರಾಮನಗರ ಮೂಲದ ಯುವಕ ಚಲುವರಾಜು 238ನೇ ಸ್ಥಾನ ಪಡೆದಿದ್ದಾರೆ. ಹಾರೋಹಳ್ಳಿ ತಾಲೂಕಿನ ದೊಡ್ಡಬಾದಿಗೆರೆ ಗ್ರಾಮದ ನಿವಾಸಿ ಚಲುವರಾಜು 3ನೇ ಬಾರಿಯ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರಾಗಿರೋ ಯುವಕ. ಪಿಯುಸಿ ವರೆಗೂ ಸರ್ಕಾರಿ ಶಾಲೆಯಲ್ಲೇ ವಿಧ್ಯಾಭ್ಯಾಸ ನಡೆಸಿದ್ದು, ಮೂಲತಃ ರೈತಕುಟುಂಬದಿಂದ ಬಂದಿದ್ದಾರೆ. 


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ