ಬೆಂಗಳೂರು: ಕನ್ನಡ್ ಗೊತ್ತಿಲ್ಲ. ಇದು ನಾವು ಹೇಳುತ್ತಿರುವುದು ಅಲ್ಲ. ನಮ್ಮ ಜನಪ್ರಿಯ ಶಾಸಕರ ಕನ್ನಡ ಪ್ರೀತಿ, ಕನ್ನಡ ಪರಿಣಿತಿ ನೋಡಿ ನೆಟ್ಟಿಗರು ಹೇಳುತ್ತಿರುವ ಡೈಲಾಗ್.
ಕನ್ನಡ ಗೊತ್ತಿಲ್ಲದ ನಮ್ಮ ಕರುನಾಡ ಶಾಸಕರು ಪ್ರಮಾಣ ವಚನ ಸ್ವೀಕರಿಸಲು ಪರದಾಡಿದರು. ಇವರುಗಳ ಮಧ್ಯೆ ಕಷ್ಟಪಟ್ಟು ಕನ್ನಡದಲ್ಲೇ ಪ್ರಮಾಣ ಸ್ವೀಕರಿಸಿ ಕನ್ನಡ ಪ್ರೇಮ ಪ್ರದರ್ಶಿಸಿದ ಕೆಲವರು ಶ್ಲಾಘನೆಗೂ ಪಾತ್ರರಾಗಿದ್ದಾರೆ.
ಈ ಬಾರಿಯ ವಿಧಾನಸಭೆಗೆ ‘ಕನ್ನಡ್ ಗೊತ್ತಿಲ್ಲ’ದ ಶಾಸಕರು ಎಂಟ್ರಿ ಕೊಟ್ಟಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಮಂತ್ರಿ ಆಗೋವಾಗ ಇಂಗ್ಲೀಷಿನಲ್ಲಿ ಪ್ರಮಾಣವಚನ ಬಿಗಿದು ಟ್ರೋಲ್ ಆಗಿದ್ದರು. ಯಾವಾಗ ಜನರ ಆಕ್ರೋಶ ಹೆಚ್ಚಾಯಿತೋ ಮತ್ತೆ ಸ್ಪೀಕರ್ ಕಚೇರಿಯಲ್ಲಿ ಗೌಪ್ಯವಾಗಿ ಒಬ್ಬರೇ ಪ್ರಮಾಣ ವಚನ ಸ್ವೀಕರಿಸಿದರು.
![,[object Object], ,[object Object],[object Object],ಅದೇನೋ ಅಂತಾರಲ್ಲ, ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಅಂತ ಕಾಂಗ್ರೆಸ್ ಶಾಸಕ ರಹೀಂ ಖಾನ್ಗೂ ಕನ್ನಡ ಗೊತ್ತಿಲ್ಲ ಅನ್ನಿಸುತ್ತೆ. ಬೀದರ್ ಶಾಸಕರು ಥೇಟ್ ಜಮೀರ್ ರೀತಿಯಲ್ಲೇ ಇಂಗ್ಲಿಷ್ನಲ್ಲೇ ಪ್ರಮಾಣ ವಚನ ಸ್ವೀಕರಿಸಿದರು.](https://images.news18.com/kannada/uploads/2023/05/MLA-Rahim-Khan.jpg?im=Resize,width=904,aspect=fit,type=normal)
ರಹೀಂ ಖಾನ್ಗೆ ‘ಕನ್ನಡ್’ ಗೊತ್ತಿಲ್ಲ!:
ಅದೇನೋ ಅಂತಾರಲ್ಲ, ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಅಂತ ಕಾಂಗ್ರೆಸ್ ಶಾಸಕ ರಹೀಂ ಖಾನ್ಗೂ ಕನ್ನಡ ಗೊತ್ತಿಲ್ಲ ಅನ್ನಿಸುತ್ತೆ. ಬೀದರ್ ಶಾಸಕರು ಥೇಟ್ ಜಮೀರ್ ರೀತಿಯಲ್ಲೇ ಇಂಗ್ಲಿಷ್ನಲ್ಲೇ ಪ್ರಮಾಣ ವಚನ ಸ್ವೀಕರಿಸಿದರು.
![,[object Object], ,[object Object],[object Object],ಕಾಂಗ್ರೆಸ್ನಲ್ಲಿ ಮಾತ್ರವಲ್ಲ ಬಿಜೆಪಿಯಲ್ಲೂ ಕನ್ನಡ ಓದೋಕೆ ಬಾರದ ಶಾಸಕರುಂಟು. ಹುಕ್ಕೇರಿ ಶಾಸಕ, ಉಮೇಶ್ ಕತ್ತಿ ಮಗ ನಿಖಿಲ್ ಕತ್ತಿಗೆ ಕನ್ನಡ ಭಾಷೆ ಬರಲ್ಲ ಅನ್ನಿಸುತ್ತದೆ. ಆದ್ದರಿಂದ ಇಂಗ್ಲಿಷ್ನಲ್ಲೇ ಪ್ರಮಾಣ ವಚನ ಸ್ವೀಕರಿಸಿದರು.](https://images.news18.com/kannada/uploads/2023/05/Katti-nikhil-umesh.jpg?im=Resize,width=904,aspect=fit,type=normal)
ಕತ್ತಿ ಮಗನಿಗೆ ಕನ್ನಡ್ ಬರಲ್ಲ!:
ಕಾಂಗ್ರೆಸ್ನಲ್ಲಿ ಮಾತ್ರವಲ್ಲ ಬಿಜೆಪಿಯಲ್ಲೂ ಕನ್ನಡ ಓದೋಕೆ ಬಾರದ ಶಾಸಕರುಂಟು. ಹುಕ್ಕೇರಿ ಶಾಸಕ, ಉಮೇಶ್ ಕತ್ತಿ ಮಗ ನಿಖಿಲ್ ಕತ್ತಿಗೆ ಕನ್ನಡ ಭಾಷೆ ಬರಲ್ಲ ಅನ್ನಿಸುತ್ತದೆ. ಆದ್ದರಿಂದ ಇಂಗ್ಲಿಷ್ನಲ್ಲೇ ಪ್ರಮಾಣ ವಚನ ಸ್ವೀಕರಿಸಿದರು.
![,[object Object], ,[object Object],[object Object],ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಂಗೆ, ಬರಗಾಲದಲ್ಲಿ ನೀರು ಉಕ್ಕಿದಂಗೆ ಒಬ್ಬರು ಶಾಸಕರು ಎಲ್ಲರ ಗಮನ ಸೆಳೆದರು. ಖಾನಾಪುರ ಬಿಜೆಪಿ ಶಾಸಕ ವಿಠ್ಠಲ ಹಲಗೆಕರ್ ಮೂಲತಃ ಮರಾಠಿ ಭಾಷಿಕರು. ಆದರೂ ತಡವರಿಸುತ್ತ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದಾಗ ಶಾಸಕರು ಮೇಜು ಕುಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.](https://images.news18.com/kannada/uploads/2023/05/Vithal-Somanna-Halgekar.jpg?im=Resize,width=904,aspect=fit,type=normal)
ಮರಾಠಿ ಶಾಸಕನ ಕನ್ನಡ ಪ್ರೇಮ:
ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಂಗೆ, ಬರಗಾಲದಲ್ಲಿ ನೀರು ಉಕ್ಕಿದಂಗೆ ಒಬ್ಬರು ಶಾಸಕರು ಎಲ್ಲರ ಗಮನ ಸೆಳೆದರು. ಖಾನಾಪುರ ಬಿಜೆಪಿ ಶಾಸಕ ವಿಠ್ಠಲ ಹಲಗೆಕರ್ ಮೂಲತಃ ಮರಾಠಿ ಭಾಷಿಕರು. ಆದರೂ ತಡವರಿಸುತ್ತ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದಾಗ ಶಾಸಕರು ಮೇಜು ಕುಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

ಮೊದಲ ದಿನದ ಸದನ ಮುಕ್ತಾಯವಾಗುತ್ತಿದ್ದಂತೆ ಮಂಗಳವಾರಕ್ಕೆ ಮುಂದೂಡಿದ ಸ್ಪೀಕರ್ ಆರ್.ವಿ ದೇಶಪಾಂಡೆ ಅವರು, ಸದನಕ್ಕೆ ಬಾರದೆ ಇರುವ ಶಾಸಕರು ಮಂಗಳವಾರ ಬಂದು ಪ್ರಮಾಣ ವಚನ ಸ್ವೀಕಾರ ಮಾಡಿ ಎಂದು ಸೂಚನೆ ನೀಡಿದರು. ಮೊದಲ ದಿನ ಸದನದಲ್ಲಿ 182 ಶಾಸಕರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.