ಕರ್ನಾಟಕದಲ್ಲಿ (Karnataka) ದಲ್ಲಿ ನೀಡಿದ 5 ಗ್ಯಾರಂಟಿ ಸಕ್ಸಸ್ ಅದ ಬೆನ್ನಲ್ಲೇ ಕಾಂಗ್ರೆಸ್ ಮಧ್ಯಪ್ರದೇಶದಲ್ಲಿ(Madhya Pradesh) ಮತ್ತೊಂದು ನಿರ್ಣಾಯಕ ವಿಧಾನಸಭಾ ಚುನಾವಣೆಯತ್ತ ಮುಖಮಾಡಿದ್ದು, ಸೋಮವಾರ ಐದು ಭರವಸೆಗಳನ್ನು ಘೋಷಿಸಿದೆ.
ಒಂದು ಗ್ಯಾಸ್ ಸಿಲಿಂಡರ್ ಬೆಲೆ ₹ 500 ಮತ್ತು ರಾಜ್ಯದ ಪ್ರತಿಯೊಬ್ಬ ಮಹಿಳೆಗೆ ತಿಂಗಳಿಗೆ ₹ 1500 ಸೇರಿದಂತೆ ಐದು ಭರವಸೆಗಳನ್ನು ಕಾಂಗ್ರೆಸ್ ನೀಡಿದೆ.
1. ಗ್ಯಾಸ್ ಸಿಲಿಂಡರ್ ₹500
2. ಪ್ರತಿ ಮಹಿಳೆಗೆ ತಿಂಗಳಿಗೆ ₹ 1500
3. 100 ಯೂನಿಟ್ ಉಚಿತ ವಿದ್ಯುತ್, 200 ಯೂನಿಟ್ ಗೆ ಅರ್ಧ ಹಣ
4. ಕೃಷಿ ಸಾಲ ಮನ್ನಾ
5. ಹಳೆಯ ಪಿಂಚಣಿ ಯೋಜನೆ ಜಾರಿ
ಅದೇ ರೀತಿ ಜೂನ್ 12 ರಂದು ಹಿರಿಯ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ನರ್ಮದಾ ನದಿಗೆ ಪ್ರಾರ್ಥನೆ ಸಲ್ಲಿಸಿದ ನಂತರ ಜಬಲ್ಪುರದಲ್ಲಿ ರೋಡ್ ಶೋ ಮತ್ತು ರ್ಯಾಲಿಯೊಂದಿಗೆ ಮಧ್ಯಪ್ರದೇಶದಲ್ಲಿ ಪಕ್ಷದ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಲಿದ್ದಾರೆ.
2023 ರ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎಂದು ರಾಜ್ಯಸಭಾ ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಹೇಳಿದ್ದಾರೆ.
Laxmi News 24×7