Breaking News

ಐಷಾರಾಮಿ ರೈಲು ಗೋಲ್ಡನ್ ಚಾರಿಯಟ್ ಪುನಃ ಸಂಚಾರ ಆರಂಭಿಸಲಿದ್ದು, ಜನವರಿಯಿಂದ ಆರಂಭ

Spread the love

ಬೆಂಗಳೂರು,ಅ.22- ಐಷಾರಾಮಿ ರೈಲು ಗೋಲ್ಡನ್ ಚಾರಿಯಟ್ ಪುನಃ ಸಂಚಾರ ಆರಂಭಿಸಲಿದ್ದು, ಜನವರಿಯಿಂದ ಆರಂಭವಾಗುವ ಸಂಚಾರಕ್ಕೆ ಈಗಾಗಲೇ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ ಪ್ರಾರಂಭವಾಗಿದೆ. ಕಳೆದ 9 ತಿಂಗಳಿನಿಂದ ಐಷಾರಾಮಿ ರೈಲು ಗೋಲ್ಡನ್ ಚಾರಿಯಟ್ ರೈಲು ಸಂಚಾರ ಸ್ಥಗಿತವಾಗಿತ್ತು. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಹೊಸ ವಿನ್ಯಾಸ, ಸೇವೆಗಳ ಜೊತೆ ರೈಲು ಸಂಚಾರಕ್ಕೆ ಪುನಃ ಚಾಲನೆ ನೀಡಲಾಗುತ್ತಿದೆ.

ಪುನಃ ಸಂಚಾರ ಆರಂಭಿಸಲಿದೆ ಐಷಾರಾಮಿ ಗೋಲ್ಡನ್ ಚಾರಿಯಟ್ಪುನಃ ಸಂಚಾರ ಆರಂಭಿಸಲಿದೆ ಐಷಾರಾಮಿ ಗೋಲ್ಡನ್ ಚಾರಿಯಟ್ ಬೆಂಗಳೂರು ನಗರದಿಂದ ಮೂರು ಪ್ರವಾಸಿ ಪ್ಯಾಕೇಜ್‍ಗಳಲ್ಲಿ ರೈಲು ಸಂಚಾರ ನಡೆಸಲಿದೆ. ಎರಡು ಪ್ಯಾಕೇಜ್ಗಳು ಕರ್ನಾಟಕದ ಪ್ರವಾಸಿತಾಣಗಳ ದರ್ಶನ ಮಾಡಿಸಲಿವೆ. ಮತ್ತೊಂದು ಪ್ಯಾಕೇಜ್ ತಮಿಳುನಾಡು ಮತ್ತು ಕೇರಳ ರಾಜ್ಯದ ಸಂಚಾರವನ್ನು ಒಳಗೊಂಡಿದೆ.

2018ರಲ್ಲಿ ಗೋಲ್ಡನ್ ಚಾರಿಯಟ್ ರೈಲನ್ನು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಐಆರ್ಸಿಟಿಸಿಗೆ ಹಸ್ತಾಂತರ ಮಾಡಿತ್ತು. ಯೋಜನೆಯಂತೆ 2020ರ ಜನವರಿಂದ ರೈಲು ಸಂಚಾರ ನಡೆಸಬೇಕಿತ್ತು. ಈಗ ರೈಲು ಸಂಚಾರಕ್ಕೆ ದಿನಾಂಕ ನಿಗದಿಯಾಗಿದೆ. ಐಆರ್‍ಸಿಟಿಸಿಗೆ 2021ರ ಜನವರಿಯಿಂದ ಮಾರ್ಚ್ ತನಕ ಗೋಲ್ಡನ್ ಚಾರಿಯಟ್ ರೈಲನ್ನು ಓಡಿಸಲಿದೆ. ಹೊಸ ಮಾದರಿಯಲ್ಲಿ, ನೂತನ ವಿನ್ಯಾಸ, ಸೇವೆಗಳ ಜೊತೆ ರೈಲು ಸಂಚಾರ ನಡೆಸಲಿದ್ದು, ಬುಕ್ಕಿಂಗ್ ಆರಂಭವಾಗಿದೆ.

ಬೆಳಗಾವಿ ಸಂಸದ ದಿ. ಸುರೇಶ್ ಅಂಗಡಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದಾಗ ಗೋಲ್ಡನ್ ಚಾರಿಯಟ್ ರೈಲು ಸಂಚಾರ ಆರಂಭಿಸುವ ಕುರಿತು ಪ್ರಕ್ರಿಯೆ ಆರಂಭವಾಗಿತ್ತು. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್ಟಿಡಿಸಿ) ಜೊತೆಗೆ ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‍ಟಿಸಿ) ಒಪ್ಫಂದ ಮಾಡಿಕೊಂಡಿತ್ತು.

ಗೋಲ್ಡನ್ ಚಾರಿಯಟ್ ರೈಲಿನ ವಿನ್ಯಾಸವನ್ನು ಬದಲಾವಣೆ ಮಾಡಲಾಗಿದೆ. ಪ್ರವಾಸಿ ಪ್ಯಾಕೇಜ್ಗಳ ದರ ಸಹ ಕಡಿಮೆ ಇದೆ. ಸ್ಮಾರ್ಟ್ ಟಿವಿ, ಸಿಸಿಟಿವಿ, ಫೈರ್ ಅಲಾರಾಂ ಸೇರಿವಂತೆ ಹಲವು ಹೊಸ ಸೇವೆಗಳನ್ನು ಸಹ ಪರಿಚಯಿಸಲಾಗಿದೆ. ಗೋಲ್ಡನ್ ಚಾರಿಯಟ್ ವೆಬ್‍ಸೈಟ್‍ನಲ್ಲಿ ಪ್ಯಾಕೇಜ್ ವಿವರ ಲಭ್ಯವಿದೆ, ಮುಂಗಡ ಬುಕ್ಕಿಂಗ್ ಸಹ ಆರಂಭವಾಗಿದೆ.

ಐಷಾರಾಮಿ ಗೋಲ್ಡನ್ ಚಾರಿಯಟ್ ರೈಲು ನಿರ್ವಹಣೆಯನ್ನು 10 ವರ್ಷಗಳ ಕಾಲ ಮಲ್ಪೆ ಗ್ರೂಪ್ ಆಫ್ ಹೋಟೆಲ್‍ಗೆ ನೀಡಲಾಗಿತ್ತು. 18 ಬೋಗಿಗಳ ರೈಲು ಸಂಚಾರದಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿತ್ತು. 2018ರ ಸೆಪ್ಟೆಂಬರ್‍ನಲ್ಲಿ ಒಪ್ಪಂದ ಅಂತ್ಯಗೊಂಡಿತ್ತು. ಬಳಿಕ ಐಆರ್‍ಟಿಸಿಗೆ ನಿರ್ವಹಣೆಯನ್ನು ನೀಡಲಾಗಿದೆ.


Spread the love

About Laxminews 24x7

Check Also

ಅರಭಾವಿ ಆಂಜನೇಯ ದೇವರ ಕಾರ್ತೀಕೋತ್ಸವದಲ್ಲಿ ಪಾಲ್ಗೊಂಡ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love  ಮೂಡಲಗಿ- ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಅರಭಾವಿ ಆಂಜನೇಯ ದೇವಸ್ಥಾನಕ್ಕೆ ತೆರಳಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ