ರಾಯಬಾಗ: “ಬಿಜೆಪಿ ಹಾಗೂ ಕಾಂಗ್ರೆಸ್ ನವರು ಜನರ ಹಣ ತಿಂದು ಅದೇ ಹಣದಲ್ಲಿ ಚುನಾವಣೆಯಲ್ಲಿ ಹಂಚಲು ಮುಂದಾಗಿದ್ದಾರೆ” ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮೀ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಯಬಾಗ ಪಟ್ಟಣದಲ್ಲಿ ರಾಯಬಾಗ, ಕುಡಚಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಸಮಾವೇಶ ಉದ್ಘಾಟಿಸಿ ಮಾತನಾಡಿ, “ಸ್ವಾತಂತ್ರ್ಯ ಬಂದು 75 ವರ್ಷವಾದರೂ ಜನರ ಬಡತನ ಹೋಗಲಾಡಿಸಲು ಆಗಿಲ್ಲ. ಹಣ ನೀಡಿ ಚುನಾವಣೆ ಮಾತ್ರ ಮಾಡುತ್ತಿದ್ದಾರೆ. ಇದಕ್ಕೆಲ್ಲ ಬ್ರೇಕ್ ಹಾಕಲು ನಾನು ಬಂದಿದ್ದೇನೆ. ಜನರು ನಿರಾಳವಾಗಿ ಜೀವನ ಸಾಗಿಸುವ ಸಲುವಾಗಿ ಕಾರ್ಯ ಮಾಡುತ್ತೇನೆ” ಎಂದರು.
“ಬಿಜೆಪಿ ಸರ್ಕಾರದಲ್ಲಿ ರಸಗೊಬ್ಬರ ತುಟ್ಟಿಯಾಗಿದೆ. ಅದನ್ನು ಸರಿಪಡಿಸಿ ಕಡಿಮೆ ಮಾಡಲಾಗುವುದು. ಭೂಮಿ ಇಲ್ಲದವರಿಗೆ ಕೃಷಿ ಕಾರ್ಮಿಕರಿಗೆ 2 ಸಾವಿರ ರೂ. ನೀಡುವುದು, ಹೊಸ ಬಡಾವಣೆಗಳಿಗೆ ಪುನರ್ವಸತಿ ಕೊಟ್ಟು, ಯಾರಿಗೆ ಮನೆ ಇಲ್ಲ ಅವರಿಗೆ 5 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ಮಂಜೂರು ಮಾಡಲಾಗುವುದು, ವೃದ್ಧಾಪರಿಗೆ, ವಿಧವೆಯರಿಗೆ ಹೆಚ್ಚಿನ ಮಾಸಿಕ ಹೆಚ್ಚಿನ ಹಣ ನೀಡಲಾಗುವುದು. ಆರೋಗ್ಯ ಸಮಸ್ಯೆ ಬಂದರೆ 40 -50 ಲಕ್ಷ ರೂ. ಖರ್ಚು ಬಂದರೂ ಸರ್ಕಾರ ಕಟ್ಟುತ್ತದೆ. ಹೀಗೆ ಹತ್ತು ಹಲವು ಯೋಜನೆಗಳು ಜಾರಿಗೆ ತರಲಾಗುವುದು” ಎಂದರು.
Laxmi News 24×7