Breaking News

ರಾಹುಲ್ ಗಾಂಧಿ ಹುಚ್ಚ:ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ

Spread the love

ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದ್ದು ಪ್ರಚಾರದ ಭರಾಟೆಯಲ್ಲಿ ವಿವಾದಾತ್ಮಕ ಮಾತುಗಳ ಹೊರಬರುತ್ತಿವೆ. ನಿನ್ನೆಯಷ್ಟೆ ಪ್ರಧಾನಿ ಮೋದಿ ಅವರನ್ನ ವಿಷಸರ್ಪ ಎಂದಿದ್ದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದಿದ್ದರು. ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಮಾತುಗಳನ್ನಾಡಿದ್ದಾರೆ. ಕೊಪ್ಪಳದಲ್ಲಿ ಇಂದು ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಕಾಂಗ್ರೆಸ್ ನಲ್ಲಿ ರಾಹುಲ್ ಗಾಂಧಿ ಹುಚ್ಚ ಎಂದು ಹೇಳಿಕೆ ನೀಡಿದ್ದಾರೆ. ಹಾಗೆಯೇ ಮಾಜಿ ಸಚಿವ  ಬಸವರಾಜ ರಾಯರೆಡ್ಡಿ  ವಿರುದ್ದ ಕಿಡಿಕಾರಿದ ಯತ್ನಾಳ್, ಬಸವರಾಜ ರಾಯರೆಡ್ಡಿ ನಮ್ಮ ಮೀಸಲಾತಿಗೆ ವಿರೋಧ ಮಾಡಿದ್ರು . ಇದಕ್ಕಾಗಿಯೇ ನಾನು ಅವರನ್ನ ವಿರೋಧ ಮಾಡುತ್ತೇನೆ  ಕಾಂಗ್ರೆಸ್ ಅವಧಿ ಮುಗಿದಿದೆ ಎಂದು ಮೋದಿ ಹೇಳಿದ್ದಾರೆ. ಕಾಂಗ್ರೆಸ್ ನವರು ಇನ್ಯಾವಾ ಗ್ಯಾರಂಟಿ ಮುಂದುವರೆಸುತ್ತಾರೆ ಎಂದು ಲೇವಡಿ ಮಾಡಿದರು.ಸಿದ್ದರಾಮಯ್ಯನವರು ಲಿಂಗಾಯತರನ್ನ ಭ್ರಷ್ಟಾ ಅಂತಾರೆ. ನನಗೆ , ಬಿಎಸ್ ವೈಗೆ, ಬೊಮ್ಮಾಯಿಗೆ ಬೈಯಲಿ. ಆದರೆ ಇಡೀ ಲಿಂಗಾಯತ ಸಮುದಾಯವನ್ನ ಭ್ರಷ್ಟರು ಅಂತೀರಾ..? ನಿಮಗೆ ಧಮ್  ಇದ್ರೆ ಲಿಂಗಾಯತ ಸಿಎಂ ಎಂದು ಘೋಷಣೆ ಮಾಡಿ ಎಂದು ಯತ್ನಾಳ್ ಸವಾಲು ಹಾಕಿದರು.


Spread the love

About Laxminews 24x7

Check Also

ಕಾಗವಾಡ ತಾ.ಶೇಡಬಾಳದ ಬಿಎಸ್ಎಫ್ ಯೋಧ ಅನಾರೋಗ್ಯದಿಂದ ನಿಧನ

Spread the love ಕಾಗವಾಡ ತಾ.ಶೇಡಬಾಳದ ಬಿಎಸ್ಎಫ್ ಯೋಧ ಅನಾರೋಗ್ಯದಿಂದ ನಿಧನ ಬಿಎಸ್ಎಫ್ ಯೋಧ ದಗಡು ಪೂಜಾರಿ ರಜೆಯ ಮೇಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ