Breaking News

ಎರಡು ದಿನಗಳ ಕಾಲ ಬೆಳಗಾವಿ ಪ್ರದೇಶಗಳಲ್ಲಿ ನೀರು ಸರಬರಾಜು ಮಾಡುವ ಷೆಡ್ಯೂಲ್‌ನಲ್ಲಿ ವ್ಯತ್ಯಯ

Spread the love

ಬೆಳಗಾವಿ : ಹಿಡಕಲ್ ಕಚ್ಚಾ ನೀರು ಸರಬರಾಜಿನ 1000 ಎಮ್.ಎಮ್. MS ಮುಖ್ಯ ಕೊಳವೆಯು ಅಂಕಲಗಿ ಹತ್ತಿರ ಗಣನೀಯ ಪ್ರಮಾಣದಲ್ಲಿ ಸೊರಿಕೆ ಉಂಟಾಗಿದ್ದು, ದುರಸ್ಥಿ ಕಾರ್ಯ ಕೈಗೊಳ್ಳಲಾಗುವುದು. ಇದರಿಂದ ಪ್ರಸ್ತುತ ಇರುವ ನೀರು ಸರಬರಾಜು ಷೆಡ್ಯೂಲ್ ಮುಂದಿನ ಎರಡು ದಿನಗಳಿಗೆ ಮುಂದುವರಿಯುತ್ತದೆ.

ಹಾಗಾಗಿ ಎರಡು ದಿನಗಳ ಕಾಲ ಬೆಳಗಾವಿ ನಗರದ ಕೆಳಕಂಡ ಪ್ರದೇಶಗಳಲ್ಲಿ ನೀರು ಸರಬರಾಜು ಮಾಡುವ ಷೆಡ್ಯೂಲ್‌ನಲ್ಲಿ ವ್ಯತ್ಯಯ ಉಂಟಾಗುವುದು.
ಸರಬರಾಜು ವ್ಯತ್ಯಯ ಉಂಟಾಗುವ ದಕ್ಷಿಣ -ಪ್ರದೇಶಗಳು:

ಬ್ರಹ್ಮ ನಗರ, ಮಜಗಾಂವ, ಭಾರತ್ ನಗರ, ಕಪಿಲೇಶ್ವರ ಕಾಲೋನಿ, ದಕ್ಷಿಣ ಡೆಮೊ ವಲಯ, ಆರ್‌ಸಿ ನಗರ 1 ಮತ್ತು 2ನೇ ಹಂತಕ್ಕೆ ಒಳಪಡುವ ಉಪ ಪ್ರದೇಶಗಳು, ನಜರ್ ಕ್ಯಾಂಪ್, ಸಮೃದ್ಧಿ ಕಾಲೋನಿ, ಯಳ್ಳೂರು ರಸ್ತೆ, ರಾನಡೆ ಕಾಲೋನಿ, ಹಿಂದವಾಡಿ, ನಾನಾವಾಡಿ. ಚಿದಂಬರ್ ನಗರ, ಶಹಾಪುರ, ವಡಗಾಂವ್, ಹಳೆ ಬೆಳಗಾವಿ.

ಸರಬರಾಜು ವ್ಯತ್ಯಯ ಉಂಟಾಗುವ ಉತ್ತರ- ಪ್ರದೇಶಗಳು:

ಸಹ್ಯಾದ್ರಿ ನಗರ, ಕುವೆಂಪು ನಗರ, ಟಿವಿ ಕೇಂದ್ರ, ಸದಾಶಿವ ನಗರ, ಬಸವ ಕಾಲೋನಿ, ಕಲ್ಮೇಶ್ವರ ನಗರ, ಸುಭಾಸ್ ನಗರ, ಅಶೋಕ್ ನಗರ, ಎಂಎಂ ಬಡಾವಣೆ ಏರಿಯಾ, ಹೊಸ ಗಾಂಧಿ ನಗರ, ಕಣಬರ್ಗಿ, ಕುಡಚಿ ಹಾಗೂ ಸುಭಾಷ್ ನಗರ, ವೀರಭದ್ರ ನಗರ, ಅಲರವಾಡ ಎಂಇಎಸ್ ಕಂಟೋನ್ಮೆಂಟ್ ಮತ್ತು ಸೈನಿಕ ನಗರ ಕಂಟೋನ್ಮೆಂಟ್ ಪ್ರದೇಶ, ಹಿಂಡಾಲ್ಕೊ ಕಾರ್ಖಾನೆ,. ಕೆಎಐಡಿಬಿ ಕೈಗಾರಿಕಾ ಪ್ರದೇಶ, ಎನ್-ರೂಟ್ ವಿಲೇಜ್ ಟ್ಯಾಪಿಂಗ್ಸ್, ಡಿಫೈಯನ್ಸ್ ಏರಿಯಾ, ಸೈನಿಕ್ ನಗರ, ಕೆಎಲ್‌ಇ ಆಸ್ಪತ್ರೆ, ಬಿಮ್ಸ್ ಆಸ್ಪತ್ರೆ. ಆರ್.ಸಿ ನಗರ ಹಾಗೂ ಎಲ್ಲಾ ಸಗಟು ನೀರು ಪೂರೈಕೆ ಸಹಿತ.

ಆದ್ದರಿಂದ ಸಾರ್ವಜನಿಕರು ಇಂತಹ ಅನಿವಾರ್ಯ ಸಮಯದಲ್ಲಿ ಸಹಕರಿಸಬೇಕು ಎಂದು ಮಹಾನಗರ ಪಾಲಿಕೆ ಮತ್ತು ಕೆ.ಯು.ಐ.ಡಿ.ಎಫ್.ಸಿ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

https://youtu.be/Z3YxUWBfv6Q


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ