ಬೆಳಗಾವಿ: ಲಕ್ಷ್ಮಣ ಸವದಿ ಉದ್ದ ಅಂಗಿ ಹಾಕಿಕೊಂಡು ಬರುತ್ತಿದ್ದಕ್ಕೆ ದೊಡ್ಡವನು ಅಂತಾ ತಿಳಿದಿದ್ದರು. ಆದರೆ ಬಿಜೆಪಿ ನಾಯಕರಿಗೆ ಆತ ಮೋಸ ಮಾಡಿದ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿ ಅಥಣಿಯಲ್ಲಿ ಮಾತನಾಡಿದ ರಮೇಶ್ ಜರಕಿಹೊಳಿ, ಲಕ್ಷ್ಮಣ ಸವದಿಗೆ ಬಿಜೆಪಿಯಲ್ಲಿ ಏನು ಅನ್ಯಾಯ ಆಗಿತ್ತು? ಮಹೇಶ್ ಕುಮಟಳ್ಳಿಗೆ ಅನ್ಯಾಯವಾಗಿತ್ತು. ಸವದಿ ಸೋತಿದ್ದರೂ ಆತನಿಗೆ ಎಲ್ಲಾ ಸ್ಥಾನಮಾನ ನೀಡಲಾಗಿತ್ತು. ಒಳ್ಳೆಯ ಉದ್ದೇಶಕ್ಕಾಗಿ ಡಿಸಿಎಂ ಮಾಡಿದರು. ಆದರೆ ಆತ ಪಂಚಾಯಿತಿಗೂ ಲಾಯಕ್ಕಿಲ್ಲ ಅಂತ ಅವರಿಗೆ ಗೊತ್ತಿರಲಿಲ್ಲ. ಇಷ್ಟೆಲ್ಲ ಕೊಟ್ಟಿದ್ದಾಗ್ಯೂ ಆತ ಬಿಜೆಪಿಗೆ ದ್ರೋಹ ಬಗೆದು ಹೋಗಿದ್ದಾನೆ ಎಂದು ಕಿಡಿಕಾರಿದರು.
ಸವದಿ ಶಕುನಿ ಕೆಲಸ ಮಾಡಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಹೈಕಮಾಂಡ್ ಸಂಬಂಧ ಒಡೆಯುವಂತೆ ಮಾಡಿದ. ಬಿಜೆಪಿ ನಾಯಕರಿಗೆ ಮೋಸ ಮಾಡಿದ್ದು ಲಕ್ಷ್ಮಣ ಸವದಿ ಎಂದು ಆರೋಪಿಸಿದ್ದಾರೆ.
Laxmi News 24×7