Breaking News

ಇಂದು ಸಮಾಜದಲ್ಲಿ ಸತ್ಯ ಹೇಳುವವರಿಗೆ ಭಯ ಹುಟ್ಟಿಸಲಾಗುತ್ತಿದೆ: ಬಸವನಾಡಿನಲ್ಲಿ ರಾಹುಲ್ ಗಾಂಧಿ

Spread the love

ಬಾಗಲಕೋಟೆ: ಬಸವಣ್ಣ ಸತ್ಯದ‌ ಪರವಾಗಿ ಹೋರಾಡಿದವರು. ಇಂದು ಸಮಾಜದಲ್ಲಿ ಸತ್ಯ ಹೇಳುವವರಿಗೆ ಭಯ ಹುಟ್ಟಿಸಲಾಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.

ಕೂಡಲಸಂಗಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಬಸವಣ್ಣನವರ ಜಯಂತಿಯಲ್ಲಿ ಭಾಗಿಯಾಗಿರುವುದು ಖುಷಿ ಕೊಟ್ಟಿದೆ.

ನನ್ನನ್ನು ಆಹ್ವಾನಿಸಿದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರಜಾಪ್ರಭುತ್ವ, ಶರಣ ತತ್ವವನ್ನು ಬಸವಣ್ಣ ರಕ್ಷಣೆ ಮಾಡಿದರು. ಪ್ರಜಾಪ್ರಭುತ್ವ, ಸಂಸತ್ತು ಎಲ್ಲದಕ್ಕೂ ಬಸವಣ್ಣ ಪ್ರೇರಣೆ. ಸಮಾಜದಲ್ಲಿ ಅಂಧತ್ವವಿದ್ದಾಗ ಬಸವಣ್ಣನವರ ಬೆಳಕಿನ‌ ಹಾದಿ ತೋರಿದರು ಎಂದರು.

ಇನ್ನೊಬ್ಬರನ್ನು ಪ್ರಶ್ನೆ ಮಾಡೋದು ಸುಲಭ. ತಮ್ಮನ್ನು ತಾವು ಪ್ರಶ್ನೆ ಮಾಡಿಕೊಳ್ಳೋದು ಕಷ್ಟದ ಕೆಲಸ. 8ನೇ ವಯಸ್ಸಿನಲ್ಲೇ ಜನಿವಾರ ಧರಿಸಲು ನಿರಾಕರಣೆ ಮಾಡಿದರು. 8ನೇ ವಯಸ್ಸಿನಲ್ಲಿ ಬಸವಣ್ಣನವರಿಗೆ ಇಂಥ ಯೋಚನೆ ಹೇಗೆ ಬಂತು ಎಂದು ಪ್ರಶ್ನಿಸಿದೆ ಆಗ ತನ್ನ ಸ್ನೇಹಿತನ‌ ಮೇಲೆ ಆಕ್ರಮಣ ನಡೆದಿತ್ತು. ಅವರ ಮೇಲಿನ ಶೋಷಣೆಯಿಂದ ಜಾಗೃತರಾದರು. ಪೂರ್ತಿ ಜೀವನ ತಮ್ಮನ್ನು ತಾವು ಜಾತಿವಾದ, ಲೋಕತಂತ್ರ, ಶೋಷಣೆ, ಸಮಾಜದ ಬಗ್ಗೆ ತಮ್ಮನ್ನು ತಾವು‌ ಪ್ರಶ್ನೆ ಮಾಡಿಕೊಂಡರು. ಆ ಪ್ರಶ್ನೆಗೆ ಉತ್ತರ ಕಂಡಕೊಂಡು ಜೀವನದಲ್ಲಿ ಪಾಲಿಸಿದರು.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ