Breaking News

2 ಕ್ಷೇತ್ರಗಳ ಗಡಿಯಲ್ಲಿ ತೋಟದ ಮನೆಯಲ್ಲಿ ಅಕ್ರಮ ಕುಕ್ಕರ್ ದಾಸ್ತಾನು ಪತ್ತೆ

Spread the love

ಬೆಳಗಾವಿ : ಸವದತ್ತಿ ತಾಲೂಕಿನ ತೆಗ್ಗಿಹಾಳ ಗ್ರಾಮಕ್ಕೆ ಹೊಂದಿಕೊಂಡಂತೆ ಸವದತ್ತಿ ಹಾಗೂ ರಾಮದುರ್ಗ ತಾಲ್ಲೂಕಿನ ಗಡಿ ಅಂಚಿನಲ್ಲಿರುವ ತೋಟದ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿ‌ ಇಡಲಾಗಿದ್ದ ಕುಕ್ಕರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಖಚಿತ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸ್ ಹಾಗೂ ಎಫ್.ಎಸ್.ಟಿ. ತಂಡವು ಶನಿವಾರ(ಏ.22) ಮಧ್ಯಾಹ್ನ ತೋಟದ ಮನೆಯ ತಗಡಿನ ಷೆಡ್ ನಲ್ಲಿದ್ದ ಸುಮಾರು 1600 ಕುಕ್ಕರ್ ಗಳನ್ನು ಪತ್ತೆ ಮಾಡಿರುತ್ತದೆ.

ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ನಿರ್ದೇಶನದಂತೆ ಎಫ್ . ಎಸ್. ಟಿ ಟೀಮ್ ಹಾಗೂ ಸೌದತ್ತಿ ವಲಯದ ಅಧಿಕಾರಿಗಳ ಸಿಬ್ಬಂದಿಯೊಂದಿಗೆ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 54ರ ಅಡಿಯಲ್ಲಿ  ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶೆಡ್ಡಿನ ಬಾಗಿಲನ್ನು ತೆರೆದು ನೋಡುದಾಗ ಕುಕ್ಕರ್ ಪೆಟ್ಟಿಗೆಗಳಿರುವುದು ಕಂಡುಬಂದಿದೆ.


Spread the love

About Laxminews 24x7

Check Also

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ ಆಹ್ವಾನ ವಿರೋಧಿಸಿ ಮತ್ತೆರಡು ಪಿಐಎಲ್ ಸಲ್ಲಿಕೆ

Spread the loveನಾಡಹಬ್ಬ ಐತಿಹಾಸಿಕ ಮೈಸೂರು ದಸರಾ ಉದ್ಘಾಟನೆಗೆ ಬೂಕರ್‌ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್‌ರನ್ನು ಮುಖ್ಯ ಅತಿಥಿಯಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ