Breaking News

ಲಂಚ ಪಡೆಯುತ್ತಿದ್ದ ಆರೋಗ್ಯ ಅಧೀಕ್ಷಕನ ಬಂಧನ

Spread the love

ಚೆನ್ನೈ: ನರ್ಸಿಂಗ್ ವಿದ್ಯಾರ್ಥಿಗಳನ್ನು ತರಬೇತಿಗೆ ಕಳುಹಿಸಲು ಲಂಚ ಪಡೆದಿದ್ದ ಆರೋಗ್ಯ ಅಧೀಕ್ಷಕರೊಬ್ಬರನ್ನು ಬಂಧಿಸಲಾಗಿದೆ.

ತಮಿಳುನಾಡಿನ ವೆಲ್ಲೂರಿನಲ್ಲಿ ಈ ಘಟನೆ ನಡೆದಿದೆ. ವಿಜಿಲೆನ್ಸ್‌ ಗೆ ಬಂದ ನರ್ಸಿಂಗ್ ಸಂಸ್ಥೆಯೊಂದರ ದೂರು ಆಧರಿಸಿ ಜಿಲ್ಲಾ ಆರೋಗ್ಯ ಅಧೀಕ್ಷಕ ಕೃಷ್ಣಮೂರ್ತಿ ಅವರನ್ನು ಬಂಧಿಸಲಾಗಿದೆ.

ಎಲ್ಲ ನರ್ಸಿಂಗ್ ಸಂಸ್ಥೆಗಳಲ್ಲಿ ಮೂರು ತಿಂಗಳ ಆಸ್ಪತ್ರೆಯಲ್ಲಿ ತರಬೇತಿ ಕಡ್ಡಾಯವಾಗಿದ್ದು ಇದಕ್ಕೆ ಜಿಲ್ಲಾ ಆರೋಗ್ಯ ಅಧೀಕ್ಷಕರು ಅನುಮತಿ ನೀಡಬೇಕು. ಈ ಅನುಮತಿ ನೀಡಲು ಕೃಷ್ಣಮೂರ್ತಿ ಲಂಚ ಕೇಳಿದ್ದ ಬಗ್ಗೆ ವೆಲ್ಲೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಪಿಆರ್ ನರ್ಸಿಂಗ್ ಸಂಸ್ಥೆಯ ಪ್ರಾಚಾರ್ಯೆ ಶರಣ್ಯ ಅವರು ವಿಜಿಲೆನ್ಸ್‌ ಗೆ ದೂರು ಸಲ್ಲಿಸಿದ್ದರು.

ಕೃಷ್ಣಮೂರ್ತಿ ನರ್ಸಿಂಗ್ ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದು ಲಂಚದ ಹಣವನ್ನೂ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ತನಿಖೆ ಮುಂದುವರಿದಿದೆ.


Spread the love

About Laxminews 24x7

Check Also

25 ಸಾವಿರ ಲಂಚ ಪಡೆದು ರೆಡ್ ಹ್ಯಾಂಡಾಗಿ ಲೋಕಾ ಬಲೆಗೆ  ಸಿಕ್ಕಿಬಿದ್ದ ಪಿಡಿಓ

Spread the loveಬಾಕಿ ಸಂಬಳ ನೀಡಲು ಲಂಚ ಪಡೆದ ಪಿಡಿಓ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಹುಣಸೂರು ತಾಲೂಕು ಮುಳ್ಳೂರು ಗ್ರಾಮ ಪಂಚಾಯ್ತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ