Breaking News

ಲಕ್ಷ್ಮೀ ಹೆಬ್ಬಾಳಕರ ಆದಾಯ ₹7.15 ಕೋಟಿಗೆ ಏರಿಕೆ

Spread the love

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಆದಾಯದಲ್ಲಿ ಗಣನೀಯ ಏರಿಕೆ ಕಂಡಿದೆ. 2018ರಲ್ಲಿ ₹36.58 ಲಕ್ಷ ಆದಾಯ ಹೊಂದಿದ್ದ ಅವರು, 2022ರ ಹೊತ್ತಿಗೆ ₹7.15 ಕೋಟಿ ಏರಿಸಿಕೊಂಡಿದ್ದಾರೆ.

ಅಂದರೆ ಐದು ವರ್ಷಗಳಲ್ಲಿ ₹6.70 ಕೋಟಿ ಆದಾಯ ಏರಿಕೆ ಕಂಡಿದೆ.

2019ರಲ್ಲಿ ₹41.67 ಲಕ್ಷ, 2020ರಲ್ಲಿ ₹ 43.71 ಲಕ್ಷ, 2021ರಲ್ಲಿ ₹42.14 ಲಕ್ಷ ಆದಾಯ ಹೊಂದಿದ್ದಾಗಿ ಅವರು ಸಲ್ಲಿಸಿದ ಅಫಿಡವಿಟ್‌ನಲ್ಲಿದೆ. ಆದರೆ, 2022ರಲ್ಲಿ ಏಕಾಏಕಿ ಏರಿಕೆ ಕಂಡಿದೆ.

ವಿವಿಧ ಬ್ಯಾಂಕುಗಳಲ್ಲಿ ₹10.86 ಕೋಟಿ ಇಟ್ಟಿದ್ದು, ಕೈಯಲ್ಲಿ ₹11.51 ಲಕ್ಷ ಹಣ ಇಟ್ಟುಕೊಂಡಿದ್ದಾರೆ. ಅವರ ಪತಿ ಹೆಸರಲ್ಲಿ ಕೇವಲ ₹ 26.80 ಲಕ್ಷದ ಆಸ್ತಿ ಇದೆ. ₹27.55 ಲಕ್ಷ ಬೆಲೆಬಾಳುವ ಕೃಷಿ ಭೂಮಿ, ₹18 ಲಕ್ಷದಷ್ಟು ಕೃಷಿಯೇತರ ಜಮೀನು ಹೊಂದಿದ್ದಾರೆ. ₹ 10.86 ಕೋಟಿ ಮೌಲ್ಯದ ಚರಾಸ್ತಿ, ₹1.90 ಕೋಟಿ ಮೌಲ್ಯದ ಸ್ಥಿರಾಸ್ತಿ ಅವರಿಗಿದೆ.

ಲಕ್ಷ್ಮೀ ಒಬ್ಬರೇ ಒಟ್ಟು 5.63 ಕೋಟಿಗೂ ಅಧಿಕ ಸಾಲ ಪಡೆದಿದ್ದಾರೆ. ಇದರಲ್ಲಿ ಗೃಹಸಾಲ ₹ 72.58 ಲಕ್ಷ, ವಾಹನ ಸಾಲ ₹ 8.19 ಲಕ್ಷ ಸೇರಿದಂತೆ ವಿವಿಧ ಬ್ಯಾಂಕುಗಳು, ಸಹಕಾರ ಸಂಘ, ಖಾಸಗಿ ಮೂಲಗಳಿಂದಲೂ ಸಾಲ ಮಾಡಿದ್ದಾರೆ. ಅಲ್ಲದೇ, ₹1.20 ಕೋಟಿಯಷ್ಟು ಸರ್ಕಾರಿ ಕಟಬಾಕಿ ಉಳಿಸಿಕೊಂಡಿದ್ದಾರೆ.

ಲಕ್ಷ್ಮೀ ಮೇಲೆ ಮೂರು ಅಪರಾಧ ಪ್ರಕರಣಗಳು ದಾಖಲಾಗಿದ್ದು, ಯಾವುದರಲ್ಲೂ ತೀರ್ಪು ಬಂದಿಲ್ಲ.


Spread the love

About Laxminews 24x7

Check Also

ಸೌಕರ್ಯ, ಸಿಬ್ಬಂದಿ: ಕೊರತೆ ಆಸ್ಪತ್ರೆಗೇ ಬೇಕಿದೆ ಚಿಕಿತ್ಸೆ!

Spread the love ಚಿಕ್ಕೋಡಿ: ಪಟ್ಟಣದ ಹೊರವಲಯದಲ್ಲಿ ₹20 ಕೋಟಿ ವೆಚ್ಚದಲ್ಲಿ ಐದು ಎಕರೆಯಲ್ಲಿ ತಲೆ ಎತ್ತಿರುವ ತಾಯಿ ಮತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ