Breaking News

ಕಾಲೇಜು ಉಪನ್ಯಾಸಕಿಯ ಅನುಮಾನಾಸ್ಪದ ಸಾವು. ಅಂಕೋಲಾದಲ್ಲಿ ಪ್ರಕರಣ ದಾಖಲು

Spread the love

ಅಂಕೋಲಾ: ಯಾದಗಿರಿ ಜಿಲ್ಲೆಯ ಹುಣಸಗಿಯ ಎಸ್. ಕೆ.ಕಾಲೇಜಿನಲ್ಲಿ ಜೀವಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದ ತಾಲೂಕಿನ ಅಂಗಡಿಬೈಲ್ ನ ಯುವತಿ ಮೃತ ಪಟ್ಟಿದ್ದು ಸಾವಿನ ಕುರಿತಂತೆ ಸಂಶಯ ವ್ಯಕ್ತಪಡಿಸಿದ ಯುವತಿಯ ಮನೆಯವರು ಅಂಕೋಲಾ ಪೊಲೀಸ್ ಠಾಣೆಗೆ ಆಗಮಿಸಿ ಮರಣೋತ್ತರ ಪರೀಕ್ಷೆ ನಡೆಸುವಂತೆ ಒತ್ತಾಯಿಸಿದ್ದಾರೆ.

 

ಅಂಗಡಿಬೈಲ್ ನಾಕಮನೆ ನಿವಾಸಿ ನಿವೇದಿತಾ ನರಸಿಂಹ ಭಟ್ಟ (24) ಮೃತ ದುರ್ದೈವಿಯಾಗಿದ್ದು ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎಸ್. ಸಿ ಪದವಿ ಬಂಗಾರದ ಪದಕ ವಿಜೇತೆಯಾಗಿದ್ದ ಈಕೆ ಕಳೆದ ಎರಡು ವರ್ಷಗಳಿಂದ ಹುಣಸಗಿಯಲ್ಲಿ ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಳು ಜೂನ್ ತಿಂಗಳಲ್ಲಿ ಐ ಎ ಎಸ್ ಬರೆಯಲು ತಯಾರಿ ನಡೆಸುತ್ತಿದ್ದ ಯುವತಿ ಮೃತ ಪಟ್ಟಿರುವುದಾಗಿ ಮೃತಳ ತಂದೆಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದು ಸುಮಾರು ಹತ್ತಿಪ್ಪತ್ತು ಜನ ಸೇರಿ ಟ್ರಾಕ್ಸ್ ವಾಹನದಲ್ಲಿ ಮೃತ ದೇಹವನ್ನು ಅಂಗಡಿಬೈಲಿಗೆ ತಂದು ಮನೆಯವರಿಗೆ ಒಪ್ಪಿಸಲು ಬಂದ ಸಂದರ್ಭದಲ್ಲಿ ಸಾವಿನ ಕುರಿತಂತೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಮಾತನಾಡುತ್ತಿರುವುದರಿಂದ ಸಂಶಯಗೊಂಡು ಇದೊಂದು ಅಸಹಜ ಸಾವಾಗಿದ್ದು ತನಿಖೆ ನಡೆಸುವಂತೆ ಮೃತಳ ಕುಟುಂಬದವರು ಆಗ್ರಹಿಸಿದ್ದಾರೆ.

ಮೃತದೇಹವನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದ್ದು ಈ ಕುರಿತು ಹೆಚ್ಚಿನ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ