Breaking News

ಉಂಡ ಮನೆಗೆ ಕನ್ನ ಹಾಕಿದ್ದ ಲೇಡಿ ಸೇರಿ ಮೂವರು ಐನಾತಿಗಳ ಬಂಧನ

Spread the love

ಬೆಂಗಳೂರು : ಕೆಲಸ ಮಾಡುತ್ತಿದ್ದ ಮನೆಯಲ್ಲಿಯೇ ಚಿನ್ನಾಭರಣ ಕದ್ದು ಗಿರವಿ ಇಟ್ಟಿದ್ದ ಕಳ್ಳಿ ಹಾಗೂ ಆಕೆಯ ಸಹಚರರನ್ನ ತಲಘಟ್ಟಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ‌.ಶೃತಿ, ಸೋಮಶೇಖರ್ ಹಾಗೂ ಸಿದ್ದೇಗೌಡ ಬಂಧಿತರು. ಆರೋಪಿಗಳಿಂದ 20 ಲಕ್ಷ ಮೌಲ್ಯದ 350 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಎರಡೂವರೆ ವರ್ಷಗಳಿಂದ
ತಲಘಟ್ಟಪುರದ ತೇಜಸ್
ಎಂಬುವವರ ಮನೆಯಲ್ಲಿ ಕೆಲಸಕ್ಕಿದ್ದ ಶೃತಿ ಮನೆಯಲ್ಲಿ ನಂಬಿಕಸ್ಥಗಳಾಗಿದ್ದಳು. ಆದರೆ ದುರಾಸೆಯಿಂದ ಇತ್ತೀಚಿಗೆ ಮನೆಯ ಬೀರುವಿನಲ್ಲಿದ್ದ ಚಿನ್ನಾಭರಣ ಕಳ್ಳತನ ಮಾಡಿದ್ದಳು. ಬಳಿಕ ಕದ್ದ ಚಿನ್ನಾಭರಣವನ್ನ ತನ್ನ ಸಂಬಂಧಿ ಸೋಮಶೇಖರ್ ಹಾಗೂ ಆತನ ಸ್ನೇಹಿತ ಸಿದ್ದೇಗೌಡನ ನೆರವಿನಿಂದ ಕನಕಪುರ ಹಾಗೂ ತಲಘಟ್ಟಪುರಗಳಲ್ಲಿ ಅಡವಿಟ್ಟು ಹಣ ಪಡೆದಿದ್ದಳು.

ಬರ್ತ್‌ಡೇ ಪಾರ್ಟಿ ವೇಳೆ ಪ್ರಿಯತಮೆ ಚಾಟಿಂಗ್ : ಕೊಂದು ಡೆಡ್ ಬಾಡಿ ಜೊತೆ 5 ತಾಸು ಕಳೆದ ಪ್ರೇಮಿ..!

ಏಪ್ರಿಲ್ 6ರಂದು ಬೀರು ಪರಿಶೀಲಿಸಿದಾಗ ಚಿನ್ನಾಭರಣ ಕಳ್ಳತನವಾಗಿರುವುದು ಪತ್ತೆಯಾಗಿತ್ತು. ಮನೆಯ ಬಗ್ಗೆ ಚೆನ್ನಾಗಿ ಅರಿತಿದ್ದ ಕೆಲಸದಾಕೆಯ ಮೇಲೆ ಅನುಮಾನವಿರುವುದಾಗಿ ಆರೋಪಿಸಿ ತಲಘಟ್ಟಪುರ ಠಾಣೆಯಲ್ಲಿ ತೇಜಸ್ ಪ್ರಕರಣ ದಾಖಲಿಸಿದ್ದರು. ಕೆಲಸದಾಕೆ ಶೃತಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಶೃತಿ ಚಿನ್ನ ಕದ್ದಿರುವುದು ಗೊತ್ತಾಗಿದೆ. ಸದ್ಯ ಆರೋಪಿಗಳಿಂದ 20 ಲಕ್ಷ ಮೌಲ್ಯದ 350 ಗ್ರಾಂ ಚಿನ್ನ ಜಪ್ತಿ ಮಾಡಿ ಜೈಲಿಗಟ್ಟಲಾಗಿದೆ.


Spread the love

About Laxminews 24x7

Check Also

ಕೈದಿಗಳಿಗೆ ರಾಜಾತಿಥ್ಯ ಸಿಎಂ, ಗೃಹ ಸಚಿವರು ರಾಜೀನಾಮೆ ನೀಡಲಿ: B.J.P.

Spread the love ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳಿಗೆ ವಿಶೇಷ ಆತಿಥ್ಯ ಖಂಡಿಸಿ ಇಂದು ಸಿಎಂ ಮನೆಗೆ ಬಿಜೆಪಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ