Home / Uncategorized / ಬಿಜೆಪಿ ಶಾಸಕ ಹೊಸದುರ್ಗ ಕ್ಷೇತ್ರದ ಗೂಳಿಹಟ್ಟಿ ಶೇಖರ ರಾಜಿನಾಮೆ

ಬಿಜೆಪಿ ಶಾಸಕ ಹೊಸದುರ್ಗ ಕ್ಷೇತ್ರದ ಗೂಳಿಹಟ್ಟಿ ಶೇಖರ ರಾಜಿನಾಮೆ

Spread the love

ಶಿರಸಿ: ಶಾಸಕ ಸ್ಥಾನಕ್ಕೆ ಹೊಸದುರ್ಗ ಕ್ಷೇತ್ರದ ಗೂಳಿಹಟ್ಟಿ ಶೇಖರ ರಾಜಿನಾಮೆ ನೀಡಿದರು.

ಗುರುವಾರ ಸಂಜೆ ಶಿರಸಿಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ರಾಜಿನಾಮೆ ಸಲ್ಲಿಸಿದರು. ಬಿಜೆಪಿ ಟಿಕ್ಟ್ ತಪ್ಪಿದ್ದರಿಂದ ಬೇಸರಗೊಂಡು ಅವರು ರಾಜಿನಾಮೆ ನೀಡಿದರು.2023ರ ವಿಧಾನಸಭಾ ಚುನಾವಣೆಗೆ ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.ಷಡ್ಯುಲ್ ಕ್ಯಾಸ್ಟ್ ನವರು ಎಸ್.ಸಿ ಕ್ಷೇತ್ರದಲ್ಲಿ ನಿಲ್ಲಬೇಕು.‌ ಎಸ್‌ಟಿ ಕ್ಷೇತ್ರದಲ್ಲಿ ಎಸ್.ಟಿ ಜನಾಂಗದವರು ಚುನಾವಣೆಗೆ ನಿಲ್ಲಬೇಕು. ಜನರಲ್ ನವರು ಜನರಲ್ ನಲ್ಲಿ ನಿಲ್ಲಬೇಕು.‌ ಈ ನಿಯಮ ನಾವೇ ಮಾಡಿಕೊಂಡಿದ್ದೇವೆ. ಈ ನಿಯಮದಡಿ ಪಕ್ಷ ನಿಯಮ ಮಾಡಿಕೊಂಡಿದೆ. ಷಡ್ಯುಲ್ ಕ್ಯಾಷ್ಟ್ ನವನಾಗಿ ಜನರಲ್ ನಲ್ಲಿ ಟಿಕೆಟ್ ಕೇಳಿರುವುದು ನನ್ನ ತಪ್ಪಿದೆ. ಪಕ್ಷದಲ್ಲಿ ಸಾಮಾಜಿಕ ನ್ಯಾಯ ತತ್ವ ಸಿದ್ದಾಂತ ಗಳು ಅವರದ್ದೇ ಆಗಿರುತ್ತದೆ.‌‌ ಪಕ್ಷದಲ್ಲಿ ಜನರಲ್ ನಲ್ಲಿ ಟಿಕೇಟ್ ಕೇಳಿದ್ದರಿಂದ ಬೇರೆಯವರಿಗೆ ಅವಕಾಶ ಮಾಡಿಕೊಟ್ಟಿದೆ.‌ ಹೀಗಾಗಿ ಜನರ ಮಧ್ಯದಿಂದ ಬಂದವನಾಗಿ ಜನರ ಮಧ್ಯೆ ಇರಬೇಕು ಎನ್ನುವ ದೃಷ್ಟಿಯಿಂದ ಕ್ಷೇತ್ರದ ಮತದಾರ ಆಕಾಂಕ್ಷೆಯಂತೆ ಈ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತೇನೆಂದು ಗೂಳಿಹಟ್ಟಿ ಶೇಖರ್ ಹೇಳಿದರು.

2008ರಿಂದಲೂ ಸ್ವತಂತ್ರವಾಗಿ ಸ್ಪರ್ಧಿಸುತ್ತ ಬಂದಿದ್ದೇನೆ. 2018 ರಲ್ಲಿ ಬಿಜೆಪಿ ಪಕ್ಷದಿಂದ ಅವಕಾಶ ಕೊಟ್ಟಿದ್ರು. ಈಗ ನಾನು ಸ್ಪರ್ಧಿಸುವ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿದೆ. ಸಾಮಾಜಿಕ ನ್ಯಾಯದ ಅಡಿಯಲ್ಲಿ ಈಗ ಟಿಕೆಟ್ ಮಿಸ್ ಆಗಿದೆ. ನಾನು ಈ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಅನ್ನೋ ನಿರ್ಧಾರ ಮಾಡಿದ್ದೇನೆ. ಆದ್ದರಿಂದ ರಾಜೀನಾಮೆ ಕೊಟ್ಟು ಮತ್ತೆ ಚುನಾವಣಾ ಕಣಕ್ಕೆ ಇಳಿಯುತ್ತೇನೆ. ಬಿಜೆಪಿ ಪಕ್ಷ ನನಗೆ ಅವಕಾಶ ಕೊಟ್ಟಿದೆ. ಆದ್ದರಿಂದ ಪಕ್ಷ ಅಥವಾ ನಾಯಕರ ಮೇಲೆ ಯಾವುದೇ ಬೇಸರವಿಲ್ಲ, ಈಗಾಗಲೇ ಒಂದು ಸುತ್ತಿನ ಕಾರ್ಯಕರ್ತರ ಸಭೆ ನಡೆಸಿದ್ದೇನೆ. ನಾಳೆ ಇನ್ನೊಂದು ಸುತ್ತಿನ ಸಭೆ ನಡೆಸಿ ಯಾವ ರೀತಿ ಸ್ಪರ್ಧಿಸಬೇಕು ಅನ್ನೋ ತೀರ್ಮಾನ ಮಾಡುತ್ತೇನೆ ಎಂದು ಹೇಳಿದರು.


Spread the love

About Laxminews 24x7

Check Also

ಪಂಚಾಯತ್‌ಗಳ ಬಲವರ್ಧನೆಗೆ ರಾಜ್ಯ ಸರಕಾರ ಚಿತ್ತ ಹರಿಸಲಿ

Spread the love ರಾಜ್ಯದಲ್ಲಿ ಜುಲೈ ಒಂದರಿಂದ ಅನ್ವಯವಾಗುವಂತೆ ಜನನ ಮತ್ತು ಮರಣ ಪ್ರಮಾಣ ಪತ್ರ ನೀಡುವ ಅಧಿಕಾರವನ್ನು ಗ್ರಾಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ