ಕುಡಿಯುವ ನೀರಿಗಾಗಿ ಹೋರಾಟ ಮಾಡಿದ ಕಳಸಾ ಬಂಡೂರಿ ರೈತರ ಮೇಲೆ ಬಂಧನ ವಾರಂಟ್ ಜಾರಿ ಮಾಡಿ ರೈತರ ಮನೆ ಬಾಗಿಲಿಗೆ ವಾರಂಟ್ ನೋಟಿಸ್ ಅಂಟಿಸುವ ಮೂಲಕ ಮತ್ತೆ ರೈತರಿಗೆ ಕಿರುಕುಳ ನೀಡಲು ಪ್ರಾರಂಭಿಸಿದೆ.
ಹೌದು 2016 ರಲ್ಲಿ ಮಹದಾಯಿ ಕಳಸಾ ಬಂಡೂರಿ ಹೋರಾಟಗಾರರು ಕುಡಿಯುವ ನೀರಿಗಾಗಿ ನಮ್ಮ ಪಾಲಿನ ನೀರನ್ನ ಹುಬ್ಬಳ್ಳಿ ಧಾರವಾಡಕ್ಕೆ ಹೋಗವುದನ್ನು ತಡೆಯಲು ಅಮ್ಮಿನಭಾವಿ ಗ್ರಾಮದ ಬಳಿವಿರುವ ಜಾಕ್ವಲ್ ಬಂದ್ ಮಾಡಲು ಹೋದಾಗ ರಸ್ತೆ ಪ್ರತಿಭಟನೆ ಹೋರಾಟದಲ್ಲಿ ಭಾಗವಹಿಸಿದ್ದ 5 ರೈತರ ವಿರುದ್ಧ ಪೊಲೀಸ್ ಇಲಾಖೆ ಐಪಿಸಿ ಕಲಂ 143,147,341,290,504,506,149 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವನ್ನು ಎಸಗಿದ್ದು (ಅಥವಾ ಮಾಡಿರಬಹುದು ಎಂದು ಶಂಕಿಸಲಾಗಿ) ನೋಟೀಸ್ ನಲ್ಲಿದೆ.
ನವಲಗುಂದ ಶಹರದ ಲೋಕನಾಥ ಹೆಬಸೂರ, ಅಳಗವಾಡಿ ಗ್ರಾಮದ ರಘುನಾಥ ನಡುವಿನಮನಿ, ಚಂದ್ರಶೇಖರ ಪಲ್ಲೇದ, ಗಂಗಾಧರ ಹಡಪದ ಹಾಗೂ ಹುಬ್ಬಳ್ಳಿ ತಾಲ್ಲೂಕಿನ ಮಂಟೂರ ಗ್ರಾಮದ
ವೀರಣ್ಣ ಮಳಗಿ ಎಂಬ ರೈತರ ಮೇಲೆ. ಧಾರವಾಡ ಗ್ರಾಮೀಣ ಪೊಲೀಸ್ ಮೂಲಕ ಬಂಧನದ ವಾರೆಂಟ್ ಹೊರಡಿಸಲಾಗಿದೆ.
ನಮ್ಮನ್ನು ಕೋರ್ಟ್ ಗೆ ಹಾಜರಾಗುವಂತೆ ನೋಟೀಸ್ ನೀಡಿದರು,ನಾವು ಹಾಜರಾಗದೆ ಇರುವುದರಿಂದ ಮಂಗಳವಾರ ನಾವು ಮನೆಯಲ್ಲಿ ಇಲ್ಲದ ಸಮಯ ನೋಡಿಕೊಂಡು ನಮ್ಮ ಮನೆ ಬಾಗಿಲುಗೆ ನೋಟೀಸ್ ಅಂಟಿಸಿ ಹೋಗಿದ್ದಾರೆ, ಒಂದ ವೇಳೆ ಸಿಗದೇ ಇದ್ದರೆ ಎಲ್ಲಿದ್ದೀರು ಹುಡುಕಿಕೊಂಡು ಬರ್ಬೇಕು ಎಂಬ ನೋಟೀಸ್ ಜಾರಿ ಮಾಡಿದ್ದಾರೆ.
ಮಹದಾಯಿ ಕಳಸಾ ನೀರಿಗಾಗಿ ಹೋರಾಟ ಮಾಡುವ ವೇಳೆ ಪೊಲೀಸ್ ರಿಂದ ಲಾಠಿ ಏಟು ತಿಂದು ಹಲಾವರು ದಿನ ಜೈಲುವಾಸ ಅನುಭವಿಸಿ ಬಂದ ರೈತರಿಗೆ ಪೊಲೀಸ್ ಇಲಾಖೆಯ ಈ ಕ್ರಮದಿಂದ ಮತ್ತೆ ನ್ಯಾಯಾಲಯಕ್ಕೆ ಅಲೆಯುವುದು, ಜಾಮೀನು ಪಡೆಯುವುದು ತಪ್ಪುತ್ತಿಲ್ಲ. ಇದು ಸಹಜವಾಗಿ ರೈತ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.