ಪಕ್ಷದ ಮೇಲೆ ಮುನಿಸಿಕೊಂಡು ರಾಜೀನಾಮೆಗೆ ಸವದಿ ನಿರ್ಧಾರ, ಅಥಣಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ಮಹೇಶ ಕುಮಟಳ್ಳಿ ಮಾಧ್ಯಮಗಳಿಗೆ ಪ್ರತಿಕ್ರಿಯೇ ನೀಡಿದ್ದಾರೆ.
ಅಥಣಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೇ ನೀಡಿದ ಮಹೇಶ ಕುಮಟಳ್ಳಿ ಅಥಣಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ಮಹೇಶ ಕುಮಟಳ್ಳಿ ,
ಇಲ್ಲಿಯವರೆಗೂ ನಾನು ಮಾಡಿದ ಅಭಿವೃದ್ದಿ ಕೆಲಸಗಳು ನನ್ನ ಕೈ ಹಿಡಿಯುತ್ತೆ, ಕಳೆದ ಬಾರಿ ನೀವು ಕಾಂಗ್ರೇಸ್ ನಿಂದ ಬಂದು ಬಿಜೆಪಿಗೆ ಸೇರಿದ್ರಿ,ಈಗ ಸವದಿಯವರು ಬಿಜೆಪಿ ಬಿಟ್ಟು ಕಾಂಗ್ರೇಸ್ ಹೋಗ್ತಿದ್ದಾರೆ ಇದಕ್ಕೆ ಎನ್ ಹೇಳ್ತಿರಿ ಎಂಬ ಪ್ರಶ್ನೆ,ಗೆ ಪ್ರತಿಕ್ರಿಯೆ ನೀಡಿದ ಅವರು ಅದೊಂದು ರಾಜಕೀಯ ವಿದ್ಯಮಾನ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಬಂದ್ವಿ, ಸವದಿಯವರ ಬಂಡಾಯ ನಿಮ್ಮ ಗೆಲುವಿಗೆ ಬ್ರೇಕ್ ಹಾಕುತ್ತೆ ಅಂತ ಅನಿಸಲ್ವಾ ಎಂಬ ಪ್ರಶ್ನೆಗೆ ಹಾಗೇನೂ ಇಲ್ಲ ಅವರು ಪಕ್ಷ ಬಿಡೋದಿಲ್ಲ ಅಂತ ನನಗೆ ಅನಿಸುತ್ತೆ, ಅವರ ನೇತೃತ್ವದಲ್ಲಿಯೇ ನಾನು ನನ್ನ ಚುನಾವಣೆ ಮಾಡ್ತಿನಿ ಎಂದು ಕುಮಟಳ್ಳಿ ಹೇಳಿದರು.
ನಿಮಗೆ ಟಿಕೆಟ್ ಸಿಗಲ್ಲ ಅಂದ್ರೆ ನನಗೂ ಟಿಕೆಟ್ ಬೇಡ ಎಂಬ ರಮೇಶ ಹೇಳಿಕೆ ವಿಚಾರ, ನಾವು ಅವರೊಂದಿಗೆ ಬಂದಿದ್ದೆ ಅವರಿಗೆ ಟಿಕೆಟ್ ಕೊಡಲಿಲ್ಲ ಅಂದ್ರೆ ಅನ್ಯಾಯ ಆಗುತ್ತೆ ಅಂತ ಅವರು ಮಾತಾಡಿದ್ರು, ಬಿಜೆಪಿ ನಾಯಕರು ನಮಗೆ ಅವಕಾಶ ಮಾಡಿ ಕೊಟ್ಟಿದ್ದಕ್ಕೆ ಧನ್ಯವಾದ ಎಂದುÀ ಕುಮಟಳ್ಳಿ ಹೇಳಿದರು.
ಯಾವ ವಿಚಾರ ಪರಿಗನಣಗೆ ಬಂದು ನಿಮಗೆ ಟಿಕೆಟ್ ಸಿಕ್ತು ಅಂತ ನಿಮಗೆ ಅನಿಸುತ್ತೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಅವರದೇ ಆದ ಮಾನದಂಡದ ಮೇಲೆ ನನಗೆ ಟಿಕೆಟ್ ಸಿಕ್ಕಿದೆ ಈಗಾಲೇ ೫ ವರ್ಷ ಕೆಲಸ ಮಾಡಿದ್ದಿನಿ, ಈಗ ಮತ್ತೆ ಪಕ್ಷ ಅವಕಾಶ ಮಾಡಿಕೊಟ್ಟಿದೆ ಎಂದುÀ ಕುಮಟಳ್ಳಿ ಹೇಳಿದರು.